Skip Ribbon Commands
Skip to main content

​​​​​​​​​​

ಒಂದು ಆ್ಯಪ್‌ ಸೆಟ್ಟಿಂಗ್‌ ಅಥವಾ ಕನೆಕ್ಶನ್ ಸ್ಟ್ರಿಂಗ್ ಅನ್ನು ಹೇಗೆ ಸ್ಟಿಕಿ ಮಾಡುವುದು

 

ಒಂದು ಆ್ಯಪ್‌ ಸೆಟ್ಟಿಂಗ್ ಅಥವಾ ಸಂಪರ್ಕದ ವಾಕ್ಯಾಂಶವನ್ನು (ಸ್ಟ್ರಿಂಗ್) ಅನ್ನು ಹೇಗೆ ಸ್ಟಿಕಿ ಮಾಡುವುದು ಎಂಬುದರ ಬಗ್ಗೆ ಒಂದು ಲೇಖನವನ್ನು ಇಲ್ಲಿ ನೋಡಬಹುದು.  ಅಜ್ಯೂರ್ ಪವರ್‌ಶೆಲ್ ಬಳಸಿಕೊಂಡು ಸೆಟ್ಟಿಂಗ್‌ಗಳನ್ನು ಸ್ಟಿಕ್ ಮಾಡಬಹುದು.

ಒಂದು ಅಜ್ಯೂರ್ ಆ್ಯಪ್‌ ಸರ್ವಿಸ್ ವೆಬ್‌ ಆ್ಯಪ್‌ ಅನ್ನು ರಚಿಸಲು ಅಗತ್ಯವಿರುವ ಅಜ್ಯೂರ್ ಪವರ್‌ಶೆಲ್ cmdlets ಅನ್ನು ಇಲ್ಲಿ ನೀಡಲಾಗಿದೆ:

  • Login-AzureRmAccount
  • Set-AzureRmContext
  • Set-AzureWebsite (ಇಲ್ಲಿರುವ  New-AzureRmResource cmdlet ಅನ್ನೂ ಸಹ ನೋಡಿ)

ಸಂಪೂರ್ಣ cmdlets ಮತ್ತು ಪ್ಯಾರಾಮೀಟರ್ ಮೌಲ್ಯಗಳನ್ನು ಈ ಕೆಳಗೆ ನೋಡಿ.

Login-AzureRmAccount

 
ಆ cmdlet ಅನ್ನು ಚಲಾಯಿಸುವುದರಿಂದ ಒಂದು ಚಾಲೆಂಜ್/ಪ್ರತಿಕ್ರಿಯೆಯ ವಿಂಡೊ ಅನ್ನು ತೆರೆದುಕೊಳ್ಳುತ್ತದೆ, ನಿಮ್ಮ ರುಜುವಾತುಗಳನ್ನು (ಕ್ರೆಡೆನ್ಶಿಯಲ್ಸ್) ನಮೂದಿಸಿ, ದೊರೆಯುವ ಫಲಿತಾಂಶವು ಚಿತ್ರ 1 ರಂತೆ ಕಾಣಿಸುತ್ತದೆ.

 

ಚಿತ್ರ 1, ಅಜ್ಯೂರ್ ಪವರ್‌ಶೆಲ್‌ ಬಳಸಿಕೊಂಡು ಅಜ್ಯೂರ್‌ಗೆ ಹೇಗೆ ಲಾಗಿನ್ ಮಾಡುವುದು

ನಂತರ, Set-AzureRmContext cmdlet ಅನ್ನು ಚಲಾಯಿಸಿ.

Set-AzureRmContext -SubscriptionId "25ec5bae-####-####-####-############"

 
ಚಂದಾದಾರಿಕೆ Id ನೀವು ಯಾವ ಅಜ್ಯೂರ್‌ ಆ್ಯಪ್‌ ಸರ್ವೀಸ್ ವೆಬ್ ಆ್ಯಪ್‌ ರಚಿಸಲು ಬಯಸುವಿರೊ ಅದಕ್ಕೆ ಚಂದಾದಾರಿಕೆಯನ್ನು ಹೊಂದಿಸಿ, ಫಲಿತಾಂಶವು ಚಿತ್ರ 2 ರಂತೆ ಕಾಣಿಸಿಕೊಳ್ಳುತ್ತದೆ.

 
 

ಚಿತ್ರ 2, ಅಜ್ಯೂರ್ ಪವರ್‌ಶೆಲ್‌ ಬಳಸಿಕೊಂಡು ಅಜ್ಯೂರ್‌ಗೆ ಚಂದಾದರಿಕೆಯನ್ನು ಹೇಗೆ ಹೊಂದಿಸುವುದು

ಈಗ, ಅಜ್ಯೂರ್ ಆ್ಯಪ್‌ ಸರ್ವಿಸ್ ವೆಬ್ ಆ್ಯಪ್‌ಗೆ ಹೋಗಿ, ಅಪ್ಲಿಕೇಶನ್ ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ಆ್ಯಪ್‌ ಸೆಟ್ಟಿಂಗ್ ಕಾಣಿಸಿಕೊಳ್ಳುತ್ತದೆ, ಚಿತ್ರ 3, ರಲ್ಲಿ ಇದು ಸ್ಟಿಕಿಯಾಗಿಲ್ಲ, ಈ ಉದಾಹರಣೆಯಲ್ಲಿ ಇದನ್ನು MakeThisOneSticky ಎಂದು ಕರೆಯಲಾಗುವುದು

.

ಚಿತ್ರ 3, ಸ್ಲಾಟ್‌ಗೆ ಸ್ಟಿಕಿಯಾಗಿರದ ಒಂದು ಆ್ಯಪ್‌ ಸೆಟ್ಟಿಂಗ್‌ ಮತ್ತು ಬದಲಿಮಾಡುವಿಕೆ ನಡೆದಾಗ ಅದನ್ನು ಸ್ಥಳಾಂತರಿಸಲಾಗುವುದು

ಆ ಆ್ಯಪ್‌ ಸೆಟ್ಟಿಂಗ್‌ ಅನ್ನು ಸ್ಟಿಕಿ ಮಾಡಲು, ಈ ಕೆಳಗಿನದನ್ನು ಚಲಾಯಿಸಿ:

Set-AzureWebsite -Name "stickyslot" -SlotStickyAppSettingNames "MakeThisOneSticky"

 
ಗಮನಿಸಿ: ಪ್ಯಾರಾಮೀಟರ್‌ನ ಹೆಸರು ಬಹುವಚನದಲ್ಲಿದೆ ಎಂಬುದನ್ನು ಗಮನಿಸಿ.  ಇದರರ್ಥ, ನೀವು ಸ್ಟಿಕಿ ಮಾಡಬೇಕಿರುವ ಎಲ್ಲಾ ಹೆಸರುಗಳನ್ನು ಸೇರ್ಪಡಿಸದೇ ಇದ್ದಲ್ಲಿ, ಒಳಗೊಳ್ಳಿಸದೇ ಇರುವವುಗಳನ್ನು ಆಯ್ಕೆ ಮಾಡಲಾಗುವುದಿಲ್ಲ ಮತ್ತು ಅವುಗಳು ಸ್ಟಿಕಿಯಾಗುವುದಿಲ್ಲ.  ಆದ್ದರಿಂದ, STICKYSLOT ಆ್ಯಪ್‌ ಸೆಟ್ಟಿಂಗ್‌ ಕೂಡಾ ಸ್ಟಿಕಿಯಾಗಬೇಕಿರುವುದರಿಂದ, ಈ ಆದೇಶವನ್ನು ಚಲಾಯಿಸಿ:

Set-AzureWebsite -Name "stickyslot" -SlotStickyAppSettingNames @("MakeThisOneSticky", "STICKYSLOT")

 
ಆಗ ನಿರೀಕ್ಷಿಸಿದಂತೆ ಎರಡೂ ಸಹ ಸ್ಲಾಟ್‌ಗೆ ಸ್ಟಿಕಿಯಾಗಿರುತ್ತದೆ ಎಂಬುದನ್ನು ನೀವು ಗಮನಿಸುವಿರಿ.

ಸಂಪರ್ಕದ ವಾಕ್ಯಾಂಶವನ್ನು ಸ್ಟಿಕಿ ಮಾಡುವುದಕ್ಕೂ ಸಹ ಇದು ಅನ್ವಯಿಸುತ್ತದೆ. ಸಂಪರ್ಕ ವಾಕ್ಯಾಂಶವನ್ನು (ಸ್ಟ್ರಿಂಗ್) ಸ್ಟಿಕಿ ಮಾಡಲು ಈ ಕೆಳಗಿನ ಅಜ್ಯೂರ್ ಪವರ್‌ಶೆಲ್ cmdlet ಅನ್ನು ಚಲಾಯಿಸಿ.

Set-AzureWebsite -Name "stickslot" -SlotStickyConnectionStringNames "StickySlotConnectionString"

 
ಚಿತ್ರ 4 ರಲ್ಲಿ ತೋರಿಸಲಾಗಿರುವಂತೆ, ಈ cmdlets ಯಾವುದೇ ಔಟ್‌ಪುಟ್ ಇರುವುದಿಲ್ಲ.  ಆದರೂ ಸಹ, ಯಾವುದೇ ದೋಷವು ಕಾಣಿಸದೇ ಇದ್ದಲ್ಲಿ, cmdlet ಯಶಸ್ವಿಯಾಗಿರುತ್ತದೆ ಹಾಗೂ ಅಗತ್ಯವಿದ್ದರೆ ಇದನ್ನು ಪೋರ್ಟಲ್‌ನಲ್ಲಿ ಖಚಿತಪಡಿಸಿಕೊಳ್ಳಬಹುದು.

 

ಚಿತ್ರ 4, ಸ್ಟಿಕಿ ಮಾಡಲು ಒಂದು ಆ್ಯಪ್‌ ಸೆಟ್ಟಿಂಗ್‌ ಅಥವಾ ಸಂಪರ್ಕ ವಾಕ್ಯಾಂಶವನ್ನು (ಸ್ಟ್ರಿಂಗ್ ಹೊಂದಿಸಿ​​

​​
​​​​​​​

Read More on....

​​​​​​​​​​
This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.