Skip Ribbon Commands
Skip to main content

​​​​​​​​​

App ಸರ್ವರ್‌ ಸ್ಲಾಟ್‌ಗಳ ನಡುವೆ ಬದಲಾಯಿಸುವಾಗಿನ ಡೇಟಾಬೇಸ್ ಕನೆಕ್ಶನ್ ಸ್ಟ್ರಿಂಗ್

 

ಈ ಕೆಳಗಿನ ಚಿತ್ರ 1 ರಲ್ಲಿ ತೋರಿಸಲಾಗಿರುವಂತಹ ಒಂದು ಆರ್ಕಿಟೆಕ್ಚರ್ ಹೊಂದಿರುವ ದೊಡ್ಡ ಪ್ರಮಾಣದ ಟ್ರಾಫಿಕ್ ನಿಭಾಯಿಸಬಲ್ಲ ಮತ್ತು ಒಂದು ಡೇಟಾಬೇಸ್‌ಗೆ ಎಕ್ಸೆಸ್ ಹೊಂದಿರುವ ಒಂದು ಅಜ್ಯೂರ್ ಆ್ಯಪ್‌ ಸರ್ವಿಸ್ ವೆಬ್ ಆ್ಯಪ್‌ ಅನ್ನು ಪರಿಗಣಿಸಿಕೊಳ್ಳಿ.  ನೀವು ನಿಯೋಜನೆಯನ್ನು ಮಾಡುವಾಗ ಬಗ್‌ಗಳನ್ನು ನಿಯೋಜಿಸುವ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಅಥವಾ ಒಂದು ಹೊಸ ಬಿಡುಗಡೆಯನ್ನು ನಿಯೋಜಿಸುವಾಗ ಗಮನಾರ್ಹ ನಿಲುಗಡೆ ಸಮಯ ಹೊಂದಿರಲು ಬಯಸುವುದಿಲ್ಲ.  ಆದ್ದರಿಂದಲೇ ನೀವು ನಿಯೋಜನಾ ಸ್ಲಾಟ್ನ ಅಗತ್ಯ ಬೀಳುವುದು.  ನಿಯೋಜನಾ ಸ್ಲಾಟ್ ಎನ್ನುವುದು ಒಂದು ಹೆಚ್ಚುವರಿ ಅಜ್ಯೂರ್ ಆ್ಯಪ್‌ ಸರ್ವಿಸ್ ವೆಬ್ ಆ್ಯಪ್‌ ಇನ್‌ಸ್ಟೆನ್ಸ್ (W3WP) ಆಗಿದ್ದು, ಇದು ನಿಮ್ಮ  ಅದೇ ಹೆಸರಿನ ಉತ್ಪಾದನಾ ಅಜ್ಯೂರ್ ಆ್ಯಪ್‌ ಸರ್ವಿಸ್ ವೆಬ್‌ ಆ್ಯಪ್‌ ಹೊಂದಿಕೊಂಡಿರುತ್ತದೆ ಮತ್ತು ಅದೇ ಆ್ಯಪ್‌ ಸರ್ವಿಸ್ ಪ್ಲಾನ್‌ನಲ್ಲಿ (ASP) ಚಾಲಿತಗೊಳ್ಳುತ್ತದೆ ಹಾಗೂ ಇದನ್ನು ನಾನು ಇಲ್ಲಿ ಚರ್ಚಿಸಿದ್ದೇನೆ.  ಈ ಡೆವಲಪ್‌ಮೆಂಟ್ ಸ್ಲಾಟ್‌ನಲ್ಲಿ ನಿಮ್ಮ ಪ್ರಾಯೋಗಿಕ ಅಥವಾ ಉತ್ಪಾದನೆಗೆ ಸಿದ್ಧಗೊಂಡಿರದ ಕೋಡ್ ಅನ್ನು ವೆಬ್‌ ಆ್ಯಪ್‌ನಲ್ಲಿ ಬಿಡುಗಡೆಗೊಳಿಸುವ ಮೊದಲು ಪರೀಕ್ಷಣೆಗಾಗಿ ನಿಯೋಜನೆಗೊಳಿಸಲು ಅವಕಾಶ ನೀಡುತ್ತವೆ.  ಈ ನಿಯೋಜನಾ ಸ್ಲಾಟ್‌ನ ಅದ್ಭುತವಾದ ವಿಷಯವೆಂದರೆ, ನೀವು ಒಂದು ಬಟನ್‌ ಅನ್ನು ಕ್ಲಿಕ್ ಮಾಡುವ ಮೂಲಕ ಹೊಸ ಆವೃತ್ತಿಯನ್ನು ಹೊಂದಿರುವ ನಿಯೋಜನಾ ಸ್ಲಾಟ್ ಅನ್ನು ಉತ್ಪಾದನಾ ಆವೃತ್ತಿಯೊಂದಿಗೆ ಬದಲಾಯಿಸಬಹುದಾಗಿದೆ. ಕೇವಲ ಒಂದು ಕ್ಲಿಕ್‌ನ ಮೂಲಕ ಹೊಸ ಆವೃತ್ತಿಯು ಕ್ಷಣಮಾತ್ರದಲ್ಲಿ ಲೈವ್ ಆಗುತ್ತದೆ.

ಚಿತ್ರ 1 ರಲ್ಲಿ ಎರಡು SQL ಅಜ್ಯೂರ್ ಡೇಟಾಬೇಸ್‌ಗಳನ್ನು ಹೊಂದಿರುವ ಒಂದು SQL ಸರ್ವರ್‌ ಇರುವುದನ್ನು ನೀವು ಗಮನಿಸಬಹುದು. ಒಂದನ್ನು stickyslot-pro ಎಂದೂ ಹಾಗೂ ಮತ್ತೊಂದನ್ನು stickyslot-tst ಎಂದು ಕರೆಯಲಾಗುತ್ತದೆ.  ಹೆಚ್ಚುವರಿಯಾಗಿ, STICKYSLOT-ASP ಎಂದು ಕರೆಯಲಾಗುವ ಒಂದು ಆ್ಯಪ್‌ ಸರ್ವಿಸ್ ಪ್ಲಾನ್ (ASP) ಇದೆ, ಇದು testing ಹೆಸರಿನ ನಿಯೋಜನಾ ಸ್ಲಾಟ್‌ನೊಂದಿಗೆ stickyslot ಎಂದು ಕರೆಯಲಾಗುವ ಅಜ್ಯೂರ್ ಆ್ಯಪ್‌ ಸರ್ವಿಸ್ ವೆಬ್ ಆ್ಯಪ್‌ ಹೊಂದಿದೆ.  ಇವೆಲ್ಲವೂ STICKSLOT-RG ಎಂದು ಕರೆಯಲಾಗುವ ಒಂದು ಸಂಪನ್ಮೂಲ ಗುಂಪಿನ ಒಳಗೆ ಇದೆ.

 

ಚಿತ್ರ 1, ಆ್ಯಪ್‌ ಸರ್ವೀಸ್ ಆರ್ಕಿಟೆಕ್ಚರ್ ರೇಖಾಚಿತ್ರದ ಒಂದು ಉತ್ತಮ ಉದಾಹರಣೆ

ಸ್ಟಿಕಿ ಸ್ಲಾಟ್‌ಗಳ ಕುರಿತಂತೆ ಚರ್ಚಿಸುವ ಒಂದು ಅತ್ಯುತ್ತಮವಾದ ಲೇಖನವನ್ನು ಇಲ್ಲಿ ನೋಡಬಹುದು.

ಈ ಲೇಖನದಲ್ಲಿ ನಾನು PRO (ಉತ್ಪಾದನೆ) ಇಂದ TST (ಒಂದು ಪ್ರಾಯೋಗಿಕ ಇನ್‌ಸ್ಟನ್ಸ್) ಗೆ ಅಜ್ಯೂರ್ ಆ್ಯಪ್‌ ಸರ್ವಿಸ್ ವೆಬ್ ಆ್ಯಪ್‌ ನಿಯೋಜನಾ ಸ್ಲಾಟ್‌ಗಳನ್ನು ಬದಲಾಯಿಸುವ ಕುರಿತು ಚರ್ಚಿಸಲಿದ್ದೇನೆ. ಇಲ್ಲಿ ಗಮನಿಸಬೇಕಿರುವ ವಿಷಯವೇನೆಂದರೆ, ಪೂರ್ವನಿಯೋಜಿತವಾಗಿ ಆ್ಯಪ್‌ ಸೆಟ್ಟಿಂಗ್‌ಗಳು ಮತ್ತು ಡೇಟಾಬೇಸ್‌ ಸಂಪರ್ಕದ ವಾಕ್ಯಾಂಶಗಳು (ಸ್ಟ್ರಿಂಗ್ಸ್) ಸ್ಲಾಟ್‌ಗೆ ಸ್ಟಿಕಿಯಾಗಿರುವುದಿಲ್ಲ ಮತ್ತು ಪ್ರಾಯೋಗಿಕ ಸ್ಲಾಟ್ ಅನ್ನು ಉತ್ಪಾದನಾ ಸ್ಲಾಟ್‌ನಿಂದ ಬದಲಾಯಿಸಿದಾಗ ಅದು ವೆಬ್‌ ಆ್ಯಪ್‌ ಅನ್ನು ಅನುಸರಿಸುತ್ತದೆ.  ಈ ಸನ್ನಿವೇಶದಲ್ಲಿ, stickslot-tst  ಡೇಟಾಬೇಸ್‌ನಿಂದ ಡೇಟಾವನ್ನು ಪಡೆದುಕೊಳ್ಳುವ ನನ್ನ ಪ್ರಾಯೋಗಿಕ ನಿಯೋಜನಾ ಸ್ಲಾಟ್ ಅನ್ನು ಉತ್ಪಾದನಾ ಸ್ಲಾಟ್‌ನೊಂದಿಗೆ ನಾನು ಬದಲಾಯಿಸಿದಾಗ ಆ ಬದಲಾಯಿಸಲ್ಪಟ್ಟ ವೆಬ್ ಆ್ಯಪ್‌  sftickyslot-pro ಡೇಟಾಬೇಸ್‌ನ ಬದಲಿಗೆ sftickyslot-tst ಡೇಟಾಬೇಸ್‌ಗೆ ಸೂಚಿತಗೊಂಡಿರುತ್ತದೆ ಎಂದರ್ಥ.  ಆದ್ದರಿಂದ, ನನಗೆ ಪ್ರಸ್ತುತ ಉತ್ಪಾದನಾ ವೆಬ್‌ ಆ್ಯಪ್‌ನ ಡೇಟಾಬೇಸ್ ಸಂಪರ್ಕದ ವಾಕ್ಯಾಂಶವು (ಸ್ಟ್ರಿಂಗ್‌) ಉತ್ಪಾದನೆಗೆ ಸೂಚಿತಗೊಂಡಿರುವಂತೆ ಮತ್ತು ಟೆಸ್ಟಿಂಗ್ ಡೇಟಾಬೇಸ್‌ಗೆ ಟೆಸ್ಟಿಂಗ್ ಸೂಚಿತಗೊಂಡಿರುವಂತೆಯೇ ಉಳಿಸಿಕೊಂಡು ವೆಬ್ ಆ್ಯಪ್‌ ಅಭಿವೃದ್ಧಿಯ ಸ್ಲಾಟ್‌ಗಳನ್ನು ಬದಲಿಮಾಡುವ ಒಂದು ಮಾರ್ಗವು ಬೇಕಿದೆ.  ಇದನ್ನು ಸಾಧಿಸಲು ಸೆಟ್ಟಿಂಗ್ ಅನ್ನು ‘sticky to the slot’ ಗೆ ಬದಲಾಯಿಸಬೇಕಿರುತ್ತದೆ.

ನನ್ನ ಉತ್ಪಾದನಾ ವೆಬ್‌ ಆ್ಯಪ್‌ಗಾಗಿ, ನಾನು ಎರಡು ಮೌಲ್ಯಗಳನ್ನು ಹೊಂದಿದ್ದೇನೆ ಎಂದು ಊಹಿಸಿಕೊಳ್ಳಿ. ನಾನು ಒಂದು ಬದಲಾವಣೆಯನ್ನು ಮಾಡುವಾಗ production’ ನಲ್ಲಿಯೆ ಇರಲು ಬಯಸುತ್ತೇನೆ.  ಚಿತ್ರ 2 ಅನ್ನು ನೋಡಿ.

 

ಚಿತ್ರ 2, ಟೆಸ್ಟಿಂಗ್ ಸ್ಲಾಟ್‌ನಿಂದ ಬದಲಾಯಿಸದರೂ ಸಹ ಉತ್ಪಾದನೆಯಲ್ಲಿಯೇ ಉಳಿದುಕೊಂಡಿರುವ ಸ್ಟಿಕಿ ಸ್ಲಾಟ್ ಸೆಟ್ಟಿಂಗ್‌

Value = ProductionEnvironment ಇರುವ STICKSLOT ಎನ್ನುವ ಹೆಸರನ್ನು ಹೊಂದಿರುವ ಒಂದು ಆ್ಯಪ್‌ ಸೆಟ್ಟಿಂಗ್‌ ಅನ್ನು ಮತ್ತು ಉತ್ಪಾದನಾ ಡೇಟಾಬೇಸ್ ಹೆಸರು, ಬಳಕೆದಾರ ಮತ್ತು ಪಾಸ್‌ವರ್ಡ್‌ ಅನ್ನು ಹೊಂದಿರುವ StickySlotConnectionString ಎನ್ನುವ ಸಂಪರ್ಕ ವಾಕ್ಯಾಂಶವನ್ನು (ಸ್ಟ್ರಿಂಗ್)  ಗಮನಿಸಿ.  ಅತಿ ಮುಖ್ಯವಾಗಿ, ಸ್ಲಾಟ್ ಸೆಟ್ಟಿಂಗ್ ಚೆಕ್ ಬಾಕ್ಸನ್ನು ಆರಿಸಲಾಗಿದೆ. ಅಂದರೆ, ಅದು ವೆಬ್‌ ಆ್ಯಪ್‌ನೊಂದಿಗೆಯೆ ಉಳಿದುಕೊಳ್ಳುತ್ತದೆ ಮತ್ತು ಬದಲಾಯಿಸಿದಾಗ ಸ್ಥಳಾಂತರಗೊಳ್ಳುವುದಿಲ್ಲ ಎಂದರ್ಥ.  ಇನ್ನೊಂದು ವಿಷಯವನ್ನೂ ಸಹ ಇಲ್ಲಿ ಗಮನಿಸಿ. ಚಿತ್ರ 3 ರಲ್ಲಿ, ನಾನು ಇದೇ ಆ್ಯಪ್‌ಆ್ಯಪ್‌ ಸೆಟ್ಟಿಂಗ್‌ ಮತ್ತು ಸಂಪರ್ಕದ ವಾಕ್ಯಾಂಶವು (ಕೀಲಿ ಮತ್ತು ಹೆಸರು) ಇದೆ, ಆದರೆ ಅವು ಭಿನ್ನವಾದ ಮೌಲ್ಯಗಳನ್ನು ಹೊಂದಿವೆ. ಅಷ್ಟೆ ಅಲ್ಲದೆ, ಸ್ಲಾಟ್ ಸೆಟ್ಟಿಂಗ್ ಚೆಕ್‌ಬಾಕ್ಸ್ ಅನ್ನು ಗುರುತುಹಾಕಲಾಗಿದೆ, ಆದ್ದರಿಂದ ಇದು ಪ್ರಾಯೋಗಿಕ ವೆಬ್‌ ಆ್ಯಪ್‌ನಲ್ಲಿಯೆ ಉಳಿದುಕೊಳ್ಳುತ್ತದೆ.

 

ಚಿತ್ರ 3, ಉತ್ಪಾದನಾ ಸ್ಲಾಟ್‌ನಿಂದ ಬದಲಾಯಿಸದರೂ ಸಹ ಟೆಸ್ಟಿಂಗ್‌ನಲ್ಲಿಯೇ ಉಳಿದುಕೊಂಡಿರುವ ಸ್ಟಿಕಿ ಸ್ಲಾಟ್ ಸೆಟ್ಟಿಂಗ್‌

ನಾನು ಒಂದು ಹೆಚ್ಚುವರಿಯಾದ ಆ್ಯಪ್‌ಆ್ಯಪ್‌ ಸೆಟ್ಟಿಂಗ್‌ ಆದಂತಹ MoveWhenSwapped ಅನ್ನು ಸೇರಿಸಿದ್ದೇನೆ, ಆದರೆ ಅದನ್ನು ನಾನು ಸ್ಟಿಕಿಯಾಗಿ ಮಾಡಿಲ್ಲ, ಅಂದರೆ, ಬದಲಾಯಿಸಿದಾಗ ಇದು ಸ್ಥಳಾಂತರಗೊಳ್ಳುತ್ತದೆ.  ಆದ್ದರಿಂದ, ನಾನು ಉತ್ಪಾದನೆ ಮತ್ತು ಪ್ರಾಯೋಗಿಕ ಡೇಟಾಬೇಸ್‌ಗಳನ್ನು ಬದಲಾಯಿಸಿದಾಗ, ಆ ಆ್ಯಪ್‌ಆ್ಯಪ್‌ ಸೆಟ್ಟಿಂಗ್‌ ಉತ್ಪಾದನಾ ವೆಬ್‌ ಆ್ಯಪ್‌ಆ್ಯಪ್‌ ಸಂರಚನೆಯಲ್ಲಿ ಇರುತ್ತದೆಯೆ ಹೊರತು ಪ್ರಾಯೋಗಿಕ ಡೇಟಾಬೇಸ್‌ನಲ್ಲಿ ಅಲ್ಲ.  ಪ್ರಾಯೋಗಿಕ ಪರಿಸರದಲ್ಲಿ ಎಲ್ಲವನ್ನೂ ಪರೀಕ್ಷಿಸಿದ ನಂತರ ಉತ್ಪಾದನೆಗೆ ಸಿದ್ಧಗೊಂಡಾಗ, ಪ್ರಾಯೋಗಿಕ ವೆಬ್ ಆ್ಯಪ್‌ಗೆ ಹೋಗಿ ನಂತರ ಚಿತ್ರ 4 ರಲ್ಲಿ ತೋರಿಸಲಾಗಿರುವಂತೆ ಸ್ವಾಪ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

 

ಚಿತ್ರ 4, ಸ್ಲಾಟ್‌ಗಳು, ಸ್ಟಿಕಿ ಸ್ಲಾಟ್‌ಗಳ ನಡುವೆ ಅಜ್ಯೂರ್ ಆ್ಯಪ್‌ ಸೇವೆಯ ವೆಬ್ ಆ್ಯಪ್‌ ಬದಲಾಯಿಸುವಿಕೆ

“swap with preview” ಎಂಬ ಒಂದು ಸೌಲಭ್ಯವಿದೆ, ಇದರ ಬಗ್ಗೆ ಇಲ್ಲಿ ಉತ್ತಮವಾಗಿ ಬರೆಯಲಾಗಿದೆ.  ಮೂಲಭೂತವಾಗಿ ಹೇಳಬೇಕೆಂದರೆ, ಈ ಸೌಲಭ್ಯದ ಮೂಲಕ ನೀವು ನಿಜವಾದ ಟ್ರಾಫಿಕ್ ಅನ್ನು ರೌಟ್‌ ಮಾಡಲು ಆರಂಭಿಸುವ ಎಲ್ಲವೂ ಸರಿಯಾಗಿದೆ ಎಂದು ಖಾತ್ರಿ ಮಾಡಿಕೊಳ್ಳಲು ಮೊದಲು ನಿಮ್ಮ ಪ್ರಾಯೋಗಿಕ ಪರಿಸರವನ್ನು ಉತ್ಪಾದನೆಗೆ ಸೂಚಿತಗೊಳಿಸಲು ಸಾಧ್ಯವಿರುತ್ತದೆ.  ನೀವು ಬದಲಾಯಿಸುವಿಕೆಯನ್ನು ಒಂದೋ ಪೂರ್ಣಗೊಳಿಸಲಾಗಿದೆ ಅಥವಾ ಪ್ರಾಯೋಗಿಕವು ಉತ್ಪಾದನೆಗೆ ಸೂಚಿತವಾಗಿರುವುದು ನಿಮಗೆ ಬೇಕಿಲ್ಲದೆ ಇದ್ದರೆ ಅದನ್ನು ಹಿಮ್ಮರಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.  ಇದು ಎಲ್ಲಾ ಸನ್ನಿವೇಶಗಳಲ್ಲಿಯೂ ಸಹ ಕೆಲಸ ಮಾಡದೇ ಇರಬಹುದು. ಉದಾಹರಣೆಗೆ ನಿಯೋಜಸಿದಲ್ಲಿ, ಉತ್ಪಾದನಾ ಪರಿಸರವನ್ನು ಹಾಳು ಮಾಡುವ ಒಂದು ಡೇಟಾಬೇಸ್ ರಚನಾವ್ಯವಸ್ಥೆಯು ಇದ್ದಲ್ಲಿ ಮತ್ತು ಅಪ್‌ಗ್ರೇಡ್ ಮಾಡದೆ ಪ್ರಾಯೋಗಿಕ ಇನ್‌ಸ್ಟನ್ಸ್ ಈಗಿರುವ ಉತ್ಪಾದನಾ ಡೇಟಾಬೇಸ್‌ನಲ್ಲಿ ಕೆಲಸಮಾಡದೇ ಇದ್ದಲ್ಲಿ.  ಆದರೆ, ಒಮ್ಮೆ ಪ್ರಯತ್ನಿಸಿ ನೋಡಿ.  ಆದಾಗ್ಯೂ, ಬದಲಾವಣೆಯನ್ನು ಮಾಡಿ ನಂತರ ಆ್ಯಪ್‌ ಸೆಟ್ಟಿಂಗ್‌ಗಳು ಮತ್ತು ಸಂಪರ್ಕದ ವಾಕ್ಯಾಂಶಗಳು ನಿರೀಕ್ಷಿತ ಫಲಿತಾಂಶವನ್ನು ನೀಡುತ್ತಿವೆಯೆ ಎಂದು ಖಚಿತಪಡಿಸಿಕೊಳ್ಳಲು ಉತ್ಪಾದನಾ ವೆಬ್ ಆ್ಯಪ್‌ ಅನ್ನು ಪರೀಕ್ಷಿಸಿ.  ಅವುಗಳು ನಿಜವಾಗಲೂ ಚಿತ್ರ 5 ರಲ್ಲಿ ಇರುವಂತೆ ಕಾಣಿಸುತ್ತದೆ.

 
 

ಚಿತ್ರ 5, ಸ್ಟಿಕ್‌ ಸ್ಲಾಟ್‌ಗಳ ಅಜ್ಯೂರ್ ಆ್ಯಪ್‌ ಸೇವೆಯ ವೆಬ್‌ ಆ್ಯಪ್‌ ಆ್ಯಪ್‌ ಸೆಟ್ಟಿಂಗ್‌ಗಳು ಮತ್ತು ಸಂಪರ್ಕದ ವಾಕ್ಯಾಂಶಗಳು (ಸ್ಟ್ರಿಂಗ್ಸ್)

ಮೌಲ್ಯಗಳು ನಿರೀಕ್ಷಿಸಿದಂತೆಯೆ ಇವೆ ಮತ್ತು MoveWhenSwapped ಅನ್ನು ಪ್ರಾಯೋಗಿಕದಿಂದ ಉತ್ಪಾದನಾ ವೆಬ್ ಆ್ಯಪ್‌ ಪ್ರಕ್ರಿಯೆಗೆ ಸ್ಥಳಾಂತರಿಸಲಾಗಿದೆ.  ಅಲ್ಲದೆ MoveWhenSwapped ಅನ್ನು ಸ್ಥಳಾಂತರಿಸಿಲಾಗಿದೆ, ಅಂದರೆ ಅದು ಪ್ರಾಯೋಗಿಕ ವೆಬ್‌ ಆ್ಯಪ್‌ನಲ್ಲಿ ಇನ್ನು ಮುಂದೆ ಇರುವುದಿಲ್ಲ  ಅಂದರೆ, ನೀವು ನಿಮ್ಮ ವೆಬ್ ಆ್ಯಪ್‌ ಅನ್ನು ಬದಲಾಯಿಸಲು ಬಯಸಿದರೆ ಮತ್ತು ಸಂಪರ್ಕದ ವಾಕ್ಯಾಂಶವು (ಸ್ಟ್ರಿಂಗ್) ಹಾಗೆಯೆ ಉಳಿದುಕೊಳ್ಳಬೇಕೆಂದು ಬಯಸಿದಲ್ಲಿ, ಸ್ಲಾಟ್ ಸೆಟ್ಟಿಂಗ್ ಚೆಕ್ ಬಾಕ್ಸ್‌ನಲ್ಲಿ ಆಯ್ಕೆ ಮಾಡುವ ಮೂಲಕ ಸೆಟ್ಟಿಂಗ್‌ಗಳನ್ನು ಸ್ಟಿಕಿ ಎಂದು ಗುರುತು ಹಾಕಿದರೆ ಸಾಕಾಗುತ್ತದೆ.

ಇನ್ನಷ್ಟು ಆಳಕ್ಕೆ ಇಳಿಯೋಣ

ನನಗಿದ್ದ ಕೆಲವು ಪ್ರಶ್ನೆಗಳು:

  • ನನ್ನ ಕೋಡ್‌ನಿಂದ ನಾನು ಸಂಪರ್ಕದ ವಾಕ್ಯಾಂಶ (ಸ್ಟ್ರಿಂಗ್‌) ಮತ್ತು ಆ್ಯಪ್‌ ಸೆಟ್ಟಿಂಗ್ಸ್‌ ಅನ್ನು ಹೇಗೆ ನಿಲುಕಿಸಿಕೊಳ್ಳಬಹುದು
  • ನನ್ನ web.config ಕಡತದಲ್ಲಿ ಒಂದು ಸಂಪರ್ಕ ವಾಕ್ಯಾಂಶವು (ಸ್ಟ್ರಿಂಗ್) ಇದ್ದರೆ ಏನಾಗುತ್ತದೆ ಮತ್ತು ಎರಡೂ ಇದ್ದಲ್ಲಿ ಏನಾಗುತ್ತದೆ

ನಾವು ಈ ಪ್ರಶ್ನೆಗಳನ್ನುಉತ್ತರಿಸೋಣ.

ನನ್ನ ಕೋಡ್‌ನಿಂದ ನಾನು ಸಂಪರ್ಕದ ವಾಕ್ಯಾಂಶ (ಸ್ಟ್ರಿಂಗ್‌) ಮತ್ತು ಆ್ಯಪ್‌ ಸೆಟ್ಟಿಂಗ್ಸ್ ಅನ್ನು ಹೇಗೆ ನಿಲುಕಿಸಿಕೊಳ್ಳಬಹುದು

ಪೋರ್ಟಲ್‌ನಲ್ಲಿ ಅಥವಾ web.config ನಲ್ಲಿ ಸಂರಚಿಸಲಾದ ಸಂಪರ್ಕ ವಾಕ್ಯಾಂಶವನ್ನು ನೋಡಲು ನೀವು ಈ ಕೆಳಗಿನ ಕೋಡ್ ಅನ್ನು ಬಳಸಬಹುದು.

ConfigurationManager.ConnectionStrings["StickySlotConnectionString"]?.ConnectionString;

 
ಸಂಪರ್ಕ ವಾಕ್ಯಾಂಶದ ಹೆಸರನ್ನು ಒದಗಿಸಿ ನಂತರ ಮೌಲ್ಯವನ್ನು ಮರಳಿಸಲಾಗುವುದು.

ಆ್ಯಪ್‌ ಸೆಟ್ಟಿಂಗ್ ಮೌಲ್ಯವನ್ನು ನೋಡಲು, ಇದನ್ನು ಬಳಸಿ.

ConfigurationManager.AppSettings["STICKYSLOT"];

 
ನನ್ನ web.config ಕಡತದಲ್ಲಿ ಒಂದು ಸಂಪರ್ಕ ವಾಕ್ಯಾಂಶವು (ಸ್ಟ್ರಿಂಗ್) ಇದ್ದರೆ ಏನಾಗುತ್ತದೆ ಮತ್ತು ಎರಡೂ ಇದ್ದಲ್ಲಿ ಏನಾಗುತ್ತದೆ

ವಾಸ್ತವದಲ್ಲಿ ಏನೂ ಆಗುವುದಿಲ್ಲ, ಹೆಸರು ವಿಶಿಷ್ಟವಾಗಿದ್ದಲ್ಲಿ, ಹಾಗೂ ಮೌಲ್ಯವು web.config ನಲ್ಲಿದ್ದರೆ, ಅದನ್ನು ಹುಡುಕಲಾಗುತ್ತದೆ, ಮತ್ತು ಮೌಲ್ಯವು ಪೋರ್ಟಲ್‌ನಲ್ಲಿದ್ದರೆ, ಆಗಲೂ ಸಹ ಇದನ್ನು ಹುಡುಕಲಾಗುತ್ತದೆ.  ನೀವು ಯಾವುದೇ ಸಂಪರ್ಕ ವಾಕ್ಯಾಂಶಕ್ಕೆ ಅಥವಾ ಆ್ಯಪ್‌ ಸೆಟ್ಟಿಂಗ್‌ಗೆ ಒಂದೇ ರೀತಿಯ ಹೆಸರು ಇಲ್ಲದಂತೆ ನೋಡಿಕೊಳ್ಳಿ.  ಹಾಗೆ ಇದ್ದಲ್ಲಿ, ನಾನು ಪರೀಕ್ಷಿಸಿದ ಪ್ರಕಾರ, ಪೋರ್ಟಲ್‌ನಲ್ಲಿ ಸಂರಚಿಸಲಾದ ಮೌಲ್ಯಗಳು ಕೋಡ್‌ನಿಂದ ಬಳಸಲಾದ ಮೌಲ್ಯಗಳಾಗಿದ್ದವು.  ಆದ್ದರಿಂದ, ನೀವು ಪೋರ್ಟಲ್ ಮತ್ತು web.config ಎರಡರಲ್ಲಿಯೂ ಸಹ ಒಂದು ಸಂಪರ್ಕ ವಾಕ್ಯಾಶವಾದ StickySlotConnectionString ಅನ್ನು ಸಂರಚಿಸಿದ್ದರೆ, web.config ಗೆ ನೀವು ಮಾಡಲಾಗುವ ಬದಲಾವಣೆಗಳನ್ನು ಕಡೆಗಣಿಸಲಾಗುವುದು.​​

​​​
​​​​​​​

Read More on....

​​​​​​​​
This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.