Skip Ribbon Commands
Skip to main content

ವಿಂಡೋಸ್ ಮಾರ್ಕೆಟ್‌ಪ್ಲೇಸ್


ಮೈಕ್ರೋಸಾಫ್ಟ್‌ನ ಎಲ್ಲಾ ತಂತ್ರಾಂಶ ಉತ್ಪನ್ನಗಳು ಲಭ್ಯವಿರುವ ಅಂತರ್ಜಾಲ ಅಂಗಡಿಯೇ ವಿಂಡೋಸ್ ಮಾರ್ಕೆಟ್‌ಪ್ಲೇಸ್. ಇಲ್ಲಿ ಆಪರೇಟಿಂಗ್ ಸಿಸ್ಟಂಗಳು, ಪ್ರೊಡಕ್ಟಿವಿಟಿ ಸೂಟ್‌ಗಳು, ಅಪ್ಲಿಕೇಶನ್‌ಗಳು ಮತ್ತು ಇನ್ನಿತರ ಉತ್ಪನ್ನಗಳು ಲಭ್ಯ. ವಿಂಡೋಸ್ ಲೈವ್ ಐಡಿ(ID)ಯ ಮೂಲಕ ಇದಕ್ಕೆ ಪ್ರವೇಶ ಪಡೆಯಬಹುದಾಗಿದೆ.


ವಿವಿಧ ವ್ಯಾಪಾರಿಗಳು ಮತ್ತು ಉತ್ಪನ್ನಗಳ ವಿವರಣೆಯನ್ನು ವೀಕ್ಷಿಸಲು ಅನುಮತಿಸುವಂತಹ ಒಂದು ಡಿಜಿಟಲ್ ಲಾಕರನ್ನು ವಿಂಡೋಸ್ ಮಾರ್ಕೆಟ್‌ಪ್ಲೇಸ್ ನೀಡುತ್ತದೆ. ಈ ಸುಭದ್ರವಾದ ಡಿಜಿಟಲ್ ಲಾಕರ್ ಸಹಾಯಕದ ಮೂಲಕ, ನೀವು ಖರೀದಿಸಿರುವ ಸಾಫ್ಟ್‌ವೇರನ್ನು ಸುಭದ್ರವಾಗಿ ಡೌನ್‌ಲೋಡ್ ಮಾಡಲು ಇದು ನಿಮಗೆ ಅನುಮತಿಸುತ್ತದೆ. ಈ ಸೌಲಭ್ಯವು ಅಮೆರಿಕದಲ್ಲಿನ ಗ್ರಾಹಕರಿಗೆ ಮಾತ್ರ ಲಭ್ಯವಿತ್ತು.


ತಾನಿನ್ನು ವಿಂಡೋಸ್ ಮಾರ್ಕೆಟ್‌ಪ್ಲೇಸ್ ಅನ್ನು ಮುಂದುವರಿಸುವುದಿಲ್ಲ ಎಂಬುದಾಗಿ ಮೈಕ್ರೋಸಾಫ್ಟ್ 2008ರಲ್ಲಿ ಘೋಷಿಸಿ, ಬದಲಿಗೆ ಜನರು ತಮ್ಮ ಮೈಕ್ರೋಸಾಫ್ಟ್ ಅಂಗಡಿಗೆ ತೆರಳಬೇಕು ಎಂದು ಹೇಳಿತ್ತು. 2009ರ ಆದಿಯಲ್ಲಿ ಮೊಬೈಲ್‌ಗೆ ವಿಂಡೋಸ್ ಮಾರ್ಕೆಟ್‌ಪ್ಲೇಸ್ ಅನಾವರಣಗೊಳಿಸಲಾಯಿತು. ಬಳಕ ಅದು ವಿಂಡೋಸ್ 7 ಮಾರ್ಕೆಟ್‌ಪ್ಲೇಸ್ ಅನ್ನು ಪರಿಷ್ಕರಿಸಿತು.


ಪ್ರಸ್ತುತ  ವಿಂಡೋಸ್ ಮಾರ್ಕೆಟ್‌ಪ್ಲೇಸನ್ನು ಮೈಕ್ರೋಸಾಫ್ಟ್ ಸ್ಟೋರ್‌ಗೆ ಮರು ನಿರ್ದೇಶಿಸಲಾಗಿದೆ. ಮೈಕ್ರೋಸಾಫ್ಟ್ ಅಂತರ್ಜಾಲ ಅಂಗಡಿಯಲ್ಲಿ ವಿಭಿನ್ನವಾದ ಉತ್ಪನ್ನಗಳು ಲಭ್ಯವಿದೆ. ವಿಂಡೋಸ್, ಆಫೀಸ್ ಉತ್ಪನ್ನಗಳ ಸರಣಿ, ವಿನ್ಯಾಸ ಪರಿಕರಗಳು (ಡಿಸೈನ್ ಟೂಲ್) ಅಭಿವೃದ್ಧಿ ಪರಿಕರಗಳು (ಡೆವೆಲಪರ್ ಟೂಲ್), ಪುಸ್ತಕಗಳು, ನೆಟ್‌ಪುಸ್ತಕಗಳು, ಲ್ಯಾಪ್‌ಟಾಪ್‌ಗಳು ವಿಂಡೋಸ್ ಫೋನ್‌ಗಳು, ಗೇಮ್ಸ್ ಪರಿಕರಗಳು ಹಾಗೂ ಇನ್ನಿತರ ಉತ್ಪನ್ನಗಳು ಇಲ್ಲಿ ಸಿಗುತ್ತವೆ.


ಅತ್ಯಂತ ಪ್ರಾಮುಖ್ಯ ಉಪಕರಣಗಳನ್ನು ಅದು ತನ್ನ ಮುಖಪುಟದಲ್ಲಿ ಕ್ಷಿಪ್ರವಾಗಿ ಪ್ರದರ್ಶಿಸುವ ಕಾರಣ ಈ ಖರೀದಿ ಅಂತರ ಸಂಪರ್ಕ(ಇಂಟರ್‌ಫೇಸ್)ವು ಬಳಕೆಗೆ ಅತ್ಯಂತ ಸರಳವಾಗಿದೆ.


ಕೆಲವೇ ಕ್ಲಿಕ್‌ಗಳಲ್ಲಿ ನೀವು ನಿಮಗೆ ಬೇಕಿರುವ ನಿಮ್ಮ ಆಯ್ಕೆಯ ಯಾವುದೇ ತಂತ್ರಾಶ/ಯಂತ್ರಾಂಶ (software/hardware) ಗಳನ್ನು ಖರೀದಿಸಬಹುದು. ನೀವು ಖರೀದಿಸುವ ಉತ್ಪನ್ನಗಳ ಸಾಚಾತನ ಅಥವಾ ಪ್ರಾಮಾಣಿಕತೆ ಕುರಿತು ನೀವು ಚಿಂತಿಸಬೇಕಿಲ್ಲ. ಇಲ್ಲಿ ನಕಲಿ ಮಾಲು ಖರೀದಿಸುತ್ತೇನೆ ಎಂಬ ಭಯಕ್ಕೆ ಅವಕಾಶ ಇರುವುದಿಲ್ಲ.  ಸಾರಿಗೆ ಮತ್ತು ಸಾಗಣೆಯೂ ಸಹ, ಕನಿಷ್ಟ ವೆಚ್ಚದೊಂದಿಗೆ ನಿರ್ದಿಷ್ಟ ರಾಷ್ಟ್ರಗಳಿಗೆ ಲಭ್ಯವಿದೆ.

ಇನ್ನಷ್ಟು ಮಾಹಿತಿಗಾಗಿ  www.windowsmarketplace.com ತಾಣಕ್ಕೆ ಭೇಟಿ ನೀಡಿ.

Read More on....

This site uses Unicode and Open Type fonts for Indic Languages. Powered by Microsoft SharePoint 2013.
©2016 Microsoft Corporation. All rights reserved.