Skip Ribbon Commands
Skip to main content

ಸ್ಪಾಮ್ ಎಂದರೇನು?


ಇಂಟರ್‌ನೆಟ್ ಬಳಸುವ ಪ್ರತಿಯೊಬ್ಬರಿಗೂ ಸ್ಪಾಮ್ ಎಂಬ ಪದದ ಪರಿಚಯವಿದ್ದೇ ಇರುತ್ತದೆ. ಅವರ ಮಾಹಿತಿ ಪೆಟ್ಟಿಗೆ ಅರ್ಥಾತ್ ಮಿಂಚಂಚೆ ಪೆಟ್ಟಿಗೆ (ಇನ್‌ಬಾಕ್ಸ್)ಯಲ್ಲಿ ಇದು ಆಗಾಗ ಕಾಣಿಸಿಕೊಳ್ಳುತ್ತದೆ. ಆದರೆ ಕೆಲ ವರ್ಷಗಳ ಹಿಂದೆ ಈ ಸ್ಪಾಮ್‌ಗೆ ಅಂತರಜಾಲ ಅಥವಾ ಮಿಂಚಂಚೆಯಲ್ಲಿ ಜಾಗವಿರಲಿಲ್ಲ.


ಸ್ಪಾಮ್ ಪದ ಸ್ಪೈಸ್‌ಡ್ ಮತ್ತು ಹ್ಯಾಮ್‌ಗಳಿಂದ ಉತ್ಪತ್ತಿಯಾಗಿದೆ. 1937ರಲ್ಲಿ ಅಮೇರಿಕಾದ ಹೋರ್ಮೆಲ್ ಫುಡ್ಸ್ ಕಾರ್ಪೋರೇಶನ್ ಸಣ್ಣಸಣ್ಣ ತುಂಡುಗಳಾಗಿ ಕತ್ತರಿಸಿದ ಮಾಂಸದ ಉತ್ಪನ್ನಗಳ ಮಾರಾಟ ಆರಂಭಿಸಿತು. ಅಮೆರಿಕನ್ನರು ಈ ಹಸಿವು ಕೊಲ್ಲುವ, ರುಚಿರಹಿತವಾದ ಉತ್ಪನ್ನಗಳನ್ನು ಕೊಳ್ಳಲು ನಿರಾಕರಿಸಿದರು. ಸಂಸ್ಥೆಗೆ ಹಣಕಾಸು ನಷ್ಟವನ್ನು ತಪ್ಪಿಸಲು ಕಂಪೆನಿ ಮಾಲಕ ಹೋರ್ಮೆಲ್ ತೀವ್ರ ರೀತಿಯ ಜಾಹೀರಾತು ಆಂದೋಲನ ಆರಂಭಿಸಿದ. ಇದರ ಫಲಿತಾಂಶವಾಗಿ ಆತನಿಗೆ ಭೂ ಸೇನೆ ಮತ್ತು ನೌಕಾದಳಕ್ಕೆ ಟನ್‌ಗಟ್ಟಲೆ ಮಾಂಸಾಹಾರ ಪೂರೈಸುವ ಗುತ್ತಿಗೆ ಲಭಿಸಿತು.


1937ರಲ್ಲಿ ಹೋರ್ಮೆಲ್ ಫುಡ್ಸ್‌ ಸಂಸ್ಥೆ ತನ್ನ ಉತ್ಪನ್ನಗಳನ್ನು ಅಮೇರಿಕಾದ ಸೇನೆ ಮತ್ತು ಅದರ ಮಿತ್ರರಾಷ್ಟ್ರಗಳ ಪಡೆಗಳಿಗೆ ಮಾಂಸಾಹಾರ ಪೂರೈಸಲು ಆರಂಭಿಸಿತು. ಎರಡನೇ ಮಹಾಯುದ್ಧದ ಬಳಿಕ ಬ್ರಿಟನ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಆಗ ಸ್ಪಾಮ್ ಪಡಿತರ ವ್ಯಾಪ್ತಿಗೆ ಬಾರದ ಕೆಲವೇ ಕೆಲವು ಮಾಂಸಾಹಾರಗಳಲ್ಲಿ ಒಂದಾಗಿತ್ತು. ಇದರಿಂದಾಗ ಅದು ಎಲ್ಲ ಕಡೆಯೂ ದೊರೆಯುತ್ತಿತ್ತು. ಜಾರ್ಜ್ ಆರ್ವೆಲ್‌ ತನ್ನ ಪುಸ್ತಕ 1984ರಲ್ಲಿ ಸ್ಪಾಮ್ ಒಂದು ಕಂದು ಬಣ್ಣದ ಮಾಂಸದ ತುಣುಕುಗಳು ಎಂದು ಬಣ್ಣಿಸಿದ್ದಾನೆ. ಇದು ಸ್ಪಾಮ್‌ಗೆ ಒಂದು ಹೊಸ ಅರ್ಥ ಕೊಟ್ಟಿತು. ಇದು ಅನಪೇಕ್ಷಿತವಾದರೂ ಅನಿವಾರ್ಯವಾಗಿತ್ತು.


1970ರ ಡಿಸೆಂಬರ್ ತಿಂಗಳಲ್ಲಿ ಬಿಬಿಸಿ ಟೆಲಿವಿಶನ್ ಸರಣಿ ಹಾಸ್ಯ ಕಾರ್ಯಕ್ರಮ ಮೊಂಟಿ ಪೈಥಾನ್ಸ್ ಫ್ಲೈಯಿಂಗ್ ಸರ್ಕಸ್‌ನಲ್ಲಿ ಪ್ರತಿಯೊಂದು ಮೆನು ಕೂಡಾ ಟಿನ್‌ನಲ್ಲಿ ಲಭ್ಯವಿರುವ ಮಾಂಸಾಹಾರವನ್ನು ಒಳಗೊಂಡಿದೆ ಎಂದು ತೋರಿಸಿತು.


ಅಲ್ಲಿ ಪೂರೈಸುವ ಸಪ್ಲಯರ್/ವೈಟರ್ ಸ್ಪಾಮ್ ಇರುವ ಆಹಾರ ಪಟ್ಟಿಯನ್ನು ಹೇಳುವಾಗ ಸ್ಪಾಮ್, ಸ್ಪಾಮ್, ಸ್ಪಾಮ್............., ಲವ್ಲಿ ಸ್ಪಾಮ್, ವಂಡರ್ ಫುಲ್ ಸ್ಪಾಮ್ ಎಂಬ ಹಾಡಿನ ಕೋರಸ್ ಕೇಳಿ ಬರುತ್ತಿತ್ತು. ಅಂದಿನಿಂದ ಸ್ಪಾಮ್ ಎಂದರೆ ಅನಗತ್ಯ, ಸ್ವಾಗತ ಇಲ್ಲದ ಕಡೆಯೂ ಕಾಣಿಸಿಕೊಳ್ಳುವ ಅಗತ್ಯಕ್ಕಿಂತ ಹೆಚ್ಚು ಮಾಹಿತಿಯನ್ನು ಬಚ್ಚಿಡುವುದಕ್ಕೆ ಸಂಬಂಧಿಸಿದಂತೆ ಬಳಕೆಯಾಯಿತು.


1993ರಲ್ಲಿ ಅನಗತ್ಯ ಮಿಂಚಂಚೆಯ ಮೂಟೆಗೆ ಸಂಬಂಧಿಸಿ ಸ್ಪಾಮನ್ನು ಮೊದಲ ಬಾರಿಗೆ ಬಳಕೆಗೆ ತರಲಾಯಿತು. ವಿಶ್ವವ್ಯಾಪ್ತಿಯಲ್ಲಿ ವಿತರಣೆಗೊಂಡಿರುವ ಅಂತರಜಾಲ ಸಮಾಲೋಚನಾ ವ್ಯವಸ್ಥೆ 'ಯೂಸ್‌ನೆಟ್'ನ ಆಡಳಿತಾಧಿಕಾರಿ ರಿಚರ್ಡ್ ಡಿಪ್ಯು ಬರೆದ ಪ್ರೋಗ್ರಾಂ ಒಂದು ಡಜನ್ ಗಟ್ಟಲೆ ಪುನಾರಾವರ್ತಿತ ಸಂದೇಶಗಳನ್ನು ಪ್ರಸಾರ ಮಾಡಿತು. ಇದನ್ನು ಸ್ವೀಕರಿಸಿದವರು ತಕ್ಷಣವೇ ಹುಡುಕಾಡಿ ಇಟ್ಟ ಹೆಸರು ಸ್ಪಾಮ್.


1994ರ ಎಪ್ರಿಲ್ 12ರಂದು ಕ್ಯಾಂಟರ್ ಆಂಡ್ ಸೀಗಲ್ ಕಂಪೆನಿಯ ವಕೀಲ ದಂಪತಿ ಮೊದಲ ಸಾಮೂಹಿಕ ಸ್ಪಾಮ್ ಮಿಂಚಂಚೆ ರವಾನೆಗೆ ನಾಂದಿ ಹಾಡಿದರು. ಈ ಕಂಪೆನಿಯ ಪ್ರೋಗ್ರಾಮರ್ ಯೂಸ್‌ನೆಟ್ ಬಳಸಿ ಕ್ಯಾಂಟರ್ ಆಂಡ್ ಸೀಗಲ್ ಸಂಸ್ಥೆ ನೀಡುವ ಸೇವೆಗಳ ಕುರಿತಂತೆ ಜಾಹೀರಾತು ನೀಡಿದರು. ಇದು ವಾಣಿಜ್ಯಕ ಬಳಕೆಯ ಸ್ಪಾಮ್‌ಗೆ ಜನ್ಮ ನೀಡಿತು.
ಇಂದು ಮಿಂಚಂಚೆ ತಂತ್ರಜ್ಞಾನದಲ್ಲಿ ಸ್ಪಾಮ್ ವ್ಯಾಪಕವಾಗಿ ಬಳಕೆಯಾಗುತ್ತದೆ. ಇದಕ್ಕೆ ಮೂಲ ಕಾರಣವಾದ ಟಿನ್‌ಗಳಲ್ಲಿ ಹೋರ್ಮಲ್ ಮಾಂಸದ ಉತ್ಪನ್ನಗಳು ಈಗಲೂ ಅಮೇರಿಕಾದಲ್ಲಿ ಮಾರಾಟವಾಗುತ್ತಿವೆ.


ಸ್ಪಾಮ್ ಎಂದರೆ ಏನು ಎಂಬುದನ್ನು ಸ್ಪಷ್ಟವಾಗಿ ಸ್ಪಷ್ಟವಾಗಿ ವಿವರಿಸುವುದಕ್ಕೆ ಮೊದಲು ಸ್ಪಾಮ್ ಕುರಿತಂತೆ ಕೆಲ ವಿವರಗಳನ್ನು ತಿಳಿಯುವುದು ಅಗತ್ಯ. ಕೆಲ ರಾಷ್ಟ್ರಗಳಲ್ಲಿ ಅದನ್ನು ಯಾವ ರೀತಿ ವಿಶ್ಲೇಷಿಸಲಾಗಿದೆ, ಸಾರ್ವತ್ರಿಕವಾಗಿ ಇದನ್ನು ಏನೆಂದು ವಿವರಿಸಲಾಗುತ್ತದೆ ಎಂಬುದರ ಮಾಹಿತಿಯೂ ಅವಶ್ಯ.


ಸ್ಪಾಮ್ ಕಳಿಸುವ ಸ್ಪಾಮ್‌ನ ಉದ್ದೇಶ ಗುರಿಗಳನ್ನು ಅವಲಂಬಿಸಿ ಸಾಮೂಹಿಕ ಅಥವಾ ಅನಾವಶ್ಯಕ ಮಿಂಚಂಚೆ ಸಂದೇಶಗಳ ಮೂಟೆಯಲ್ಲಿ ವಾಣಿಜ್ಯ ಉದ್ದೇಶಗಳ ಮಾಹಿತಿ ಇರುತ್ತದೆ. ಸಂದೇಶದಲ್ಲಿ ಇರುವ ವಿವರಗಳನ್ನು ಆಧರಿಸಿ ಸ್ಪಾಮನ್ನು ಅನಗತ್ಯ ವಾಣಿಜ್ಯಕ ಮಿಂಚಂಚೆ(ಅನ್‌ಸಾಲಿಸಿಟೆಡ್ ಕಮರ್ಶಿಯಲ್ ಇ-ಮೇಲ್-ಯುಸಿಇ) ಮತ್ತು ಅನಗತ್ಯ ಮಿಂಚಂಚೆಗಳ ಮೂಟೆ(ಅನ್‌ಸಾಲಿಸಿಟೆಡ್ ಬಲ್ಕ್ ಇಮೇಲ್ - ಯುಬಿಇ) ಎಂದು ವಿಭಜಿಸಲಾಗುತ್ತದೆ.


ಈ ಮಿಂಚಂಚೆ ತನ್ನ ವಿಷಯಸೂಚಿಯಲ್ಲಿ (ಸಬ್‌ಜೆಕ್ಟ್) ಮಾಹಿತಿಯನ್ನುವ ಸೂಕ್ಮವಾಗಿ ಸೂಚಿಸಿರಲೂ ಬಹುದು. ಸಂದೇಶದಲ್ಲಿ ಅದನ್ನು ರವಾನಿಸಿದಾತ ಸ್ವೀಕರಿಸುವವರೆ ತಾವೇಕೆ ಅನುಮತಿ ಇಲ್ಲದೇ ಈ ಮಿಂಚಂಚೆಯನ್ನು ರವಾನಿಸಿದ್ದು ಎಂಬುದನ್ನು ವಿವರಿಸಿರಬಹುದು ಅಥವಾ ಇಂತಹ ಸಂದೇಶಗಳನ್ನು ಸ್ವೀಕರಿಸದಿರಲು ಮುಂದೆ ಏನು ಮಾಡಬೇಕು ಎಂಬುದನ್ನು ಅದರಲ್ಲಿ ವಿವರಿಸಿರಬಹುದು. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಂತರ್ಜಾಲ ಬಳಕೆದಾರ ಇಂತಹ ಅನವಶ್ಯಕ ಮಿಂಚಂಚೆ ಸಂದೇಶಗಳಿಂದ ಮುಕ್ತನಾಗಲು ಸ್ಪಾಮರ್ (ಸ್ಪಾಮ್ ಸಂದೇಶ ಕಳಿಸಿದಾತ) ನೀಡಿದ ನಿರ್ದೇಶನಗಳನ್ನು ಅನುಸರಿಸಬೇಕು. ಅದೊಂದು ನಿಯಮ. ಆಗ ನಮಗೆ ಆತನ ಮಿಂಚಂಚೆ ವಿಳಾಸ ಬೇಕಾಗುತ್ತದೆ. ಇಲ್ಲವೇ ಅದರಲ್ಲಿ ಸೂಚಿಸಿದ ಶುಲ್ಕ ರಹಿತ ದೂರವಾಣಿಗೆ ಕರೆ ಮಾಡಬೇಕಾಗುತ್ತದೆ. ಸ್ಪಾಮರ್‌ಗಳಿಗೆ ತಾನು ಅನವಶ್ಯಕ ಮಾಹಿತಿ ಸಂದೇಶಗಳನ್ನು ಕಳುಹಿಸುತ್ತಿದ್ದೇವೆ ಎಂಬುದು ಗೊತ್ತಿರುತ್ತದೆ. ಮಿಂಚಂಚೆ ಬಳಕೆದಾರನಿಗೆ ಇದರಿಂದ ತೊಂದರೆಯಾಗುತ್ತದೆ ಎಂಬ ಅಂಶವನ್ನು ಲಕ್ಷಿಸಲು ಸ್ಪಾಮರ್‌ಗಳು ತಯಾರಿಲ್ಲ. ಇಂತಹ ಮಿಂಚಂಚೆ ರವಾನೆಗೆ ಮೂರನೆಯವರ ವಿಳಾಸವನ್ನು ಬಳಸಿಕೊಳ್ಳುತ್ತಾರೆ ಮತ್ತು ಸಂದೇಶಗಳಿಗೆ ಖೊಟ್ಟಿ ಶೀರ್ಷಿಕೆಗಳನ್ನು, ಸಂಬಂಧ ಪಡದ ಶೀರ್ಷಿಕೆಗಳನ್ನು ಕೊಡುತ್ತಾರೆ.

 

ಅನಾಮಧೇಯ: ಸ್ಪಾಮ್ ಕಳಿಸಲು ಕೃತಕ ವಿಳಾಸವನ್ನು ಬಳಸುತ್ತಾರೆ. ಸಂದೇಶ ಕಳಿಸಿದಾತನ ನಿಜವಾದ ವಿಳಾಸವನ್ನು  ಅಡಗಿಸಿಡಲು ಈ ಕೆಲಸ ಮಾಡಲಾಗುತ್ತದೆ.
ಸಾಮೂಹಿಕ ರವಾನೆ: ಸ್ಪಾಮ್ ಸಂದೇಶಗಳನ್ನು ಭಾರೀ ಸಂಖ್ಯೆಯಲ್ಲಿ ರವಾನಿಸಲಾಗುತ್ತದೆ. ಇಂತಹ ಸಂದೇಶಗಳನ್ನು ಪಡೆದವರಲ್ಲಿ ಕೆಲವರಾದರೂ ಇದಕ್ಕೆ ಪ್ರತಿಕ್ರಿಯಿಸುತ್ತಾರೆ. ಸ್ಪಾಮರ್‌ಗಳು ಇದರಿಂದಲೇ ಹಣ ಮಾಡುತ್ತಾರೆ.

 

 ಅನಪೇಕ್ಷಿತ ಅಥವಾ ಆಹ್ವಾನವಿಲ್ಲದೆ ಬಹುವಂತಹದು:
ವಿಳಾಸದಾರರ ಪಟ್ಟಿ, ನ್ಯೂಸ್ ಲೆಟರ್‌ಗಳು ಮತ್ತು ಇತರ ಜಾಹೀರಾತು ವಿಷಯಗಳು ಸ್ಪಾಮನ್ನು ಹೋಲುತ್ತವೆ.


ಆದರೆ ಅವುಗಳು ಕಾನೂನುಬದ್ಧ ಸಂದೇಶಗಳು. ಇದನ್ನು ಬೇರೆ ಮಾತಿನಲ್ಲಿ ಹೇಳುವುದಾದರೆ ಇದೇ ದರ್ಜೆಯ ಸಂದೇಶವನ್ನು ಸ್ಪಾಮ್ ಎಂದು ಪರಿಗಣಿಸಲೂಬಹುದು. ಇದು ಸಂದೇಶ ಪಡೆದವರು ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಅವಲಂಬಿಸಿದೆ.


ಸ್ಪಾಮನ್ನು ವಿವರಿಸುವಾಗ 'ಜಾಹೀರಾತು' ಮತ್ತು ವಾಣಿಜ್ಯಿಕ ಎಂಬ ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗುವುದು. ಹಲವು ಸ್ಪಾಮ್ ಸಂದೇಶಗಳು ಜಾಹೀರಾತು ಆಗಿರುವುದಿಲ್ಲ ಮತ್ತು ವಾಣಿಜ್ಯಕ ಅಂಶಗಳನ್ನು ಹೊಂದಿರುವುದಿಲ್ಲ. ಸರಕುಗಳ ಒದಗಣೆ, ಸೇವೆಗಳ ಒದಗಣೆಯಿಂದಾಗಿ ಸ್ಪಾಮ್ ಸಂದೇಶಗಳನ್ನು ಈ ಕೆಳಗಿನಂತೆ ವಿಭಜಿಸಬಹುದು.


ರಾಜಕೀಯ ಸಂದೇಶಗಳು
ನೆರವಿನ ಮನವಿಗಳು
ಹಣಕಾಸು ಹಗರಣಗಳು
ಸರಣಿ ಪತ್ರಗಳು
ಕೆಲವು ಅನಪೇಕ್ಷಿತ ಸಂದೇಶಗಳು ಅವುಗಳನ್ನು ತಡೆದವರಿಗೆ ಕೆಲಮಟ್ಟಿಗೆ ಉಪಯೋಗವಾಗಲೂಬಹುದು. ಆದರೆ ಅನಗತ್ಯ ಸಂದೇಶ ವ್ಯವಹಾರ ತಡೆಗೆ ಸ್ಪಾಮ್ ಮಾತ್ತು ಅನಪೇಕ್ಷಿತ ಸಂದೇಶಗಳನ್ನು ಪ್ರತ್ಯೇಕಿಸಲು ಗುಣಮಟ್ಟದ ಸ್ಪಾಮ್ ವಿರೋಧಿ ಪರಿಹಾರವನ್ನು ಹುಡುಕುವುದು ಅಗತ್ಯ. ನಿಜವಾದ ಸ್ಪಾಮನ್ನು ಅದರನ್ನು ಸ್ವೀಕರಿಸಿದವರು ವಿಮರ್ಷಿಸಿ ಬಳಿಕ ತ್ರಾಶ್(ಕಸದ ಬುಟ್ಟಿ)ಗೆ ರವಾನಿಸುವುದು ಒಳಿತು. ಅನಗತ್ಯ ಸಂದೇಶ ವಿನಿಮಯಗಳಿಗೂ ತಡೆಹಾಕುವ ಅಗತ್ಯವಿದೆ. ಉಪಯುಕ್ತ ಕಾನೂನುಬದ್ಧ ಅಥವಾ ನೈಜ ವಾಣಿಜ್ಯಕ ಮಾಹಿತಿ ನೆರವಿನ ಮನವಿ ವೈಯಕ್ತಿಕ ಆಮಂತ್ರಣಗಳೆಲ್ಲ ಅನಪೇಕ್ಷಿತ ಸಂದೇಶಗಳು. ಆದರೆ ಇವು ಸ್ಪಾಮ್‌ಗಳಲ್ಲ ಮತ್ತು ಅನಗತ್ಯದವೂ ಅಲ್ಲ.

Read More on....

This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.