Skip Ribbon Commands
Skip to main content

ಯೂನಿಕೋಡ್ ಡಾಟ್ ಆರ್ಗ್


ವಿವಿಧ ರಾಷ್ಟ್ರಗಳಲ್ಲಿ ವಿವಿಧ ಭಾಷೆಗಳ(ಇಂಗ್ಲೀಷೇತರ) ಕಂಪ್ಯೂಟರ್ ಅಕ್ಷರಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಆದರೆ ಜಾಗತಿಕ ಪರಿಸರದಲ್ಲಿ ಏಕರೂಪಿಯಾಗಿರುವ ಅಕ್ಷರಗಳ ಅಭಿವೃದ್ಧಿಯ ಅನಿವಾರ್ಯತೆ ಇದೆ. ಇದಲ್ಲದೆ, ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಕ್ಷರಗಳ ಗೊಂದಲ ನಿವಾರಣೆಗೆ ಒಂದು ಪ್ರಮಾಣಬದ್ಧವಾದ (ಮಾನಕ) ಎನ್‌ಕೋಡಿಂಗ್ ಶೈಲಿಯು ಇಂದಿನ ಗಣಕಯಂತ್ರ ಜಗತ್ತಿನ ಅಗತ್ಯವಾಗಿದೆ.


ಯಾವುದೇ ಪ್ಲಾಟ್‌ಫಾರಂ, ಪ್ರೋಗ್ರಾಂ ಮತ್ತು ಭಾಷೆಯ ಹಂಗಿಲ್ಲದಂತೆ ಪ್ರತೀ ಅಕ್ಷರಗಳಿಗೆ ಒಂದು ವಿಶಿಷ್ಟವಾದ ಸಂಖ್ಯೆಯನ್ನು ಒದಗಿಸಲು ಏಕರೂಪೀ ಸಂಹಿತೆ ಗೂಢ ಬರಹ (ಯೂನಿಕೋಡ್ ಎನ್‌ಕೋಡಿಂಗ್) ಉದ್ದೇಶಿಸಿದೆ. ಯಂತ್ರಾಂಶ ಮತ್ತು ತಂತ್ರಾಂಶ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮೈಕ್ರೋಸಾಫ್ಟ್, ಆಪಲ್, ಹೆವ್ಲೆಟ್-ಪ್ಯಾಕಾರ್ಡ್(ಎಚ್‌ಪಿ), ಒರಾಕಲ್ ಹಾಗೂ ಇನ್ನಿತರ ಪ್ರಮುಖ ಕಂಪೆನಿಗಳು ಯೂನಿಕೋಡ್ ಪ್ರಮಾಣಬದ್ಧತೆಯನ್ನು ಅಳವಡಿಸಿಕೊಂಡಿವೆ. ಆಧುನಿಕ ಬ್ರೌಸರ್‌ಗಳಾದ ಇಂಟರ್ನೆಟ್ ಎಕ್ಸ್‌ಪ್ಲೋರರ್(ಐಇ), ಮೊಝಿಲ್ಲಾ ಫೈರ್‌ಫಾಕ್ಸ್, ಗೂಗಲ್ ಕ್ರೋಮ್, ಒಪೇರಾ, ಸಫಾರಿ ಇತ್ಯಾದಿಗಳು ಮತ್ತು ವಿಂಡೋಸ್, ಮ್ಯಾಕ್ ಓಎಸ್ ಮತ್ತು ಲಿನಕ್ಸ್ ಮುಂತಾದ ಆಪರೇಟಿಂಗ್ ಸಿಸ್ಟಂ‌ಗಳು ಯೂನಿಕೋಡ್ ಎನ್‌ಕೋಡಿಂಗನ್ನು ಬೆಂಬಲಿಸುತ್ತವೆ.


ವಿವಿಧ ಭಾಷೆಗಳ ಏಕರೂಪಿ ಸಂಹಿತೆಯ ಕಲಿಕೆ ಮತ್ತು ಬಳಕೆಗಾಗಿ ವಿವಿಧ ಸಂಪನ್ಮೂಲಗಳನ್ನು Unicode.org ತಾಣ ನೀಡುಸುತ್ತದೆ ಮತ್ತು ನಿಮ್ಮ ಅಕ್ಷರಗಳನ್ನು ಸಲ್ಲಿಸಲು ಒಂದು ಹಾದಿಯನ್ನು ಒದಗಿಸುತ್ತದೆ. ಯೂನಿಕೋಡ್‌ಗೆ ಇತ್ತೀಚಿನ ಸೇರ್ಪಡೆ ಎಂದರೆ ಭಾರತೀಯ ರೂಪಾಯಿಯ ಸಂಕೇತ. ಇದು ಒರಿಜಿನಲ್ ಈಕ್ಯೂಪ್‌ಮೆಂಟ್ ಮ್ಯೂನುಫ್ಯಾಕ್ಚರಿಂಗ್ (ಒಇಎಂ) ಹಾರ್ಡ್‌ವೇರ್‌ನೊಂದಿಗೆ ಇನ್ನಷ್ಟೆ ಬಿಡುಗಡೆ ಆಗಬೇಕಿದೆ. ಅದಾಗ್ಯೂ, ಈ ಅಕ್ಷರದ ತಕ್ಷಣದ ಬಳಕೆಗಾಗಿ ಚಿತ್ರಗಳು ಮತ್ತು ಏಕರೂಪಿ ಸಂಹಿತೆಯನ್ನು ಬಿಡುಗಡೆ ಮಾಡಲಾಗಿದೆ.


ಯೂನಿಕೋಡ್ ಒಕ್ಕೂಟವು Unicode.org ತಾಣವನ್ನು ನಡೆಸುತ್ತಿದೆ. ಈ ಒಕ್ಕೂಟ ಒಂದು ಲಾಭೇತರ ಉದ್ದೇಶ ಹೊಂದಿರುವ ಸಂಘಟನೆಯಾಗಿದೆ. ಯೂನಿಕೋಡನ್ನು ಒಂದು ಮಾನಕವಾಗಿ ಬಳಸುವಿಕೆಯನ್ನು ಅಭಿವೃದ್ಧಿಪಡಿಸುವುದು, ವಿಸ್ತರಿಸುವುದು ಮತ್ತು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. “Where is my Character?” ವಿಭಾಗಕ್ಕೆ ಭೇಟಿ ನೀಡುವ ಮೂಲಕ ಅಕ್ಷರ ಒಂದು ಕಂಪ್ಯೂಟರ್‌ನಲ್ಲಿ ಹೇಗೆ ಮ್ಯಾಪ್ ಆಗಿದೆ ಎಂಬುದರ ಕುರಿತು ಕೆಲವು ಆಸಕ್ತಿದಾಯಕ ಅಂಶಗಳನ್ನು ಕಂಡುಕೊಳ್ಳಬಹುದಾಗಿದೆ.

 

Read More on....

This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.