Twitter Microsoft India for Indian Community
ಭಾರತೀಯ ಸಮುದಾಯಕ್ಕಾಗಿ ಟ್ವಿಟರ್ ಮೈಕ್ರೋಸಾಫ್ಟ್ ಇಂಡಿಯಾ
ಸಿಆರ್‍ಎಂ ಆನ್‌ಲೈನ್ (CRM Online) ಒಂದು ತಂತ್ರಾಂಶವಾಗಿದ್ದು ಇದು ದೊಡ್ಡ, ಮತ್ತು ಚಿಕ್ಕ ಹಾಗೂ ಮಧ್ಯಮ ಉದ್ಯಮ (SMEs) ಗಳಿಗೆ ತಮ್ಮ ಗ್ರಾಹಕರು ಮತ್ತು ಅವರ ಖರೀದಿ ಪ್ರವೃತ್ತಿಯ ಮೇಲೆ ನಿಗಾ ವಹಿಸಲು ಸಹಾಯ ಮಾಡುತ್ತದೆ. ಸಿಆರ್‌ಎಂ ಮಾರುಕಟ್ಟೆಯು ಸೇಲ್ಸ್‌ಫೋರ್ಸ್ ಡಾಟ್ ಕಾಂ (Salesforce.com) ಮತ್ತು ಒರಾಕಲ್ (Oracle) ನಂತಹ ಪಟುಗಳಿಂದ ನಿಯಂತ್ರಿಸಲ್ಪಡುತ್ತದೆ. ಡೈನಾಮಿಕ್ ಸಿಅರ್‌ಎಂ ಅನ್ನು ಇತರ ಮಾರುಕಟ್ಟೆಗಳಿಗಿಂತ ಭಿನ್ನವಾಗಿಸುವ ಅಂಶ ಯಾವುದೆಂದರೆ, ಅದರ ಉಪಯೋಗತ್ವವಾಗಿದೆ. ಡೈನಾಮಿಕ್ ಸಿಆರ್‌ಎಂನ್ನು ಮೈಕ್ರೋಸಾಫ್ಟ್‌ನ ಆಫೀಸ್ ಔಟ್‌ಲುಕ್ ಒಳಗಡೆ ನಿರ್ಮಿಸಲಾಗಿದ್ದು, ಇದು ಅತ್ಯಂತ ಜನಪ್ರಿಯವಾದ ಇಮೇಲ್ ವೇದಿಕೆ ಆಗಿದೆ. ಇದೀಗಾಗಲೇ ಔಟ್ ಲುಕ್ ಬಳಸುತ್ತಿರುವ ಗ್ರಾಹಕರಿಗೆ ತಮ್ಮ ಗ್ರಾಹಕರು, ಪೈಪ್ ಲೈನ್ ಗಳು, ಅಂತಹುದೇ ವಾತಾವರಣಗಳಲ್ಲಿ ಮುಂಚೂಣಿಯ ಅವಕಾಶಗಳು- ಮುಂತಾದವುದಗಳನ್ನು ಪ್ರವೇಶಿಸಲು ಅತ್ಯಂತ ಸುಲಭ ಹಾದಿ ಇದೆ. ಅವರು ತಮ್ಮ ಇಷ್ಚದ ಇಂಟರ್‌ಫೇಸನ್ನು ತ್ಯಜಿಸದೆಯೇ; ಅವರು ಔಟ್ ಲುಕ್ಕಲ್ಲೇ ಎಲ್ಲವನ್ನೂ ಮಾಡಬಹುದು ಮತ್ತು ಇದು ಬಹಳ ಪ್ರಮುಖವಾದ ಮತ್ತು ಮುಖ್ಯವಾದ ಭಿನ್ನತೆ ಆಗಿದೆ.
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಮೈಕ್ರೋಸಾಫ್ಟ್‌ನ ಆನ್ ಪ್ರಿಮೈಸಸ್ ಸಿಆರ್‌ಎಂ ಸೊಲ್ಯೂಶನ್ ಭಾರತೀಯ ಮಾರುಕಟ್ಟೆಯಲ್ಲಿ ಅದನ್ನು ಮತ್ತಷ್ಟು ವಿಸ್ತರಿಸಲು ಒಂದು ಪ್ರಮುಖವಾದ ಹೆಜ್ಜೆಯಾಗಿದೆ. ಪ್ರಸಕ್ತ, ಈ ವಲಯದಲ್ಲಿ ಭಾರತದಲ್ಲಿ ಮಾರಾಟ ಶಕ್ತಿಯು ಒಂದು ಮುಂಚೂಣಿಯ ಪ್ಲೇಯರ್ ಆಗಿದ್ದರೆ, ಇದರ ನಂತರದಲ್ಲಿ ಒರಾಕಲ್‌ನಿಂದ ಸಿಯಾಬೆಲ್ ಸಿಆರ್‌ಎಂ ಇರುತ್ತದೆ. ಮೈಕ್ರೋಸಾಫ್ಟ್ ಡೈನಾಮಿಕ್ಸ್ ಸಿಆರ್‌ಎಂ ಆನ್ ಲೈನ್ ನ ಅನಾವರಣದೊಂದಾಗಿ, ಈ ತಂತ್ರಾಂಶ ದೈತ್ಯನು ಮೇಲಿನೆರಡು ಕಂಪೆನಿಗಳಿಗೆ ಬಲವಾದ ಸವಾಲನ್ನೇ ಎಸೆದಿದೆ. ಆನ್ ಡಿಮಾಂಡ್ ಸಿಆರ್ ಎಂ ಭಾರತದಲ್ಲಿ ನೆಲೆಯನ್ನು ಗಳಿಸುತ್ತಿದೆ ಮತ್ತು ಅದರ ಅಳವಡಿಕೆಯ ಆರಂಭಿಕ ಹಂತದಲ್ಲಿಯೇ, ಮಾರಾಟಗಾರರು ಮೈಕ್ರೋಸಾಫ್ಟ್, ಸ್ಯಾಪ್ ಮತ್ತು ಒರಾಕಲ್ ಸೇರಿದಂತೆ ಶೀಘ್ರ ಚಲನೆಯ ಅನುಕೂಲಗಳೊಂದಿಗಿನ ಆನ್ ಪ್ರಿಮೈಸ್ ಸಿಆರ್ ಎಂ ಸೊಲ್ಯೂಶನ್‌ಗಳ ಆಹ್ವಾನ ನೀಡುತ್ತವೆ.
http://twitter.com/#!/MicrosoftIndia
ಸಿಆರ್ ಎಂ ಬಳಕೆದಾರರ ಅಳವಡಿಕೆಯ ಅನುಪಾತದಲ್ಲಿ ಕ್ಷಿಪ್ರವಾದ ಏರಿಕೆಯಿಂದಾಗಿ ಸಿಆರ್‌ಎಂ ಅತಿ ಶೀಘ್ರವಾಗಿ ಬೆಳೆಯುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದ್ದು, ಇಂತಹ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಭಾರತದಲ್ಲಿ, ಔದ್ಯಮಿಕ ಅಳವಡಿಕೆಗಳ ಅತಿ ಹೆಚ್ಚಿನ ಬೆಳವಣಿಗೆಗಳು ಸಿಆರ್‌ಎಂ ವಲಯದಲ್ಲಿವೆ. ದೊಡ್ಡ ದೊಡ್ಡ ಉದ್ಯಮಗಳು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿವೆ.
ಮೈಕ್ರೋ ಸಾಫ್ಟ್‌ನ ವಾರ್ಷಿಕ ತಂತ್ರಜ್ಞಾನ ಮೇಳವಾಗಿರುವ ಟೆಕ್ ಎಡ್ 2011 (Tech.Ed 2011) ಸಮ್ಮೇಳನವನ್ನು 25-03-11 ರಂದು ನಡೆಸಲಾಗಿತ್ತು ಮತ್ತು ಕ್ರಿಕೆಟ್ ಮಾಂತ್ರಿಕ ಅನಿಲ್ ಕುಂಬ್ಳೆ ಮುಖ್ಯ ಅತಿಥಿಯಾಗಿದ್ದರು. "ಯಶಸ್ಸು ಲಭಿಸ ಬೇಕಾದರೆ ವೈಯಕ್ತಿಕವಾದ ಪ್ರತಿಭೆ ಹಾಗೂ ಕೌಶಲ್ಯಗಳಿಗಿಂತ ಹೆಚ್ಚಿನದ್ದು ಬೇಕಾಗುತ್ತದೆ. ಇದರೊಂದಿಗೆ ಕಾರ್ಯಕ್ಷಮತೆಯ ಸ್ಥಿರತೆಯ ಅವಶ್ಯಕತೆಯೂ ಇದೆ. ಸ್ಥಿರವಾದ ಕಾರ್ಯಕ್ಷಮತೆ ತೋರಿರುವ ಮತ್ತು ತಾಂತ್ರಿಕ ಆವಿಷ್ಕಾರದ ಸೀಮೆಯನ್ನು ಮುಂದೂಡುತ್ತಿರುವ ಮೈಕ್ರೋಸಾಫ್ಟ್‌ನಿಂದ ಕಲಿಯಲು ಬೇಕಾದಷ್ಚಿದೆ" ಎಂಬುದಾಗಿ ಅನಿಲ್ ಕುಂಬ್ಳೆ ತಮ್ಮ ಭಾಷಣದಲ್ಲಿ ನುಡಿದರು.