Skip Ribbon Commands
Skip to main content

​​​​​​​

​​

ವಿಂಡೋಸ್ 10 ಕ್ಕಾಗಿನ ರಿಮೋಟ್ ಡೆಸ್ಕ್‌ಟಾಪ್ –ಆಕರ್ಷಕ ಮುನ್ನೋಟ


ವಿಂಡೋಸ್‌ 10ಕ್ಕಾಗಿ ಈ ವರೆಗೆ ನಮ್ಮ ಮೈಕ್ರೋಸಾಫ್ಟ್ ರಿಮೋಟ್ ಡೆಸ್ಕ್‌ಟಾಪ್ ಪ್ರಿವ್ಯೂ ಕ್ಲೈಂಟ್ ಅನ್ನು ಅನುಸ್ಥಾಪಿಸಿ, ಬಳಸಿ ಹಾಗೂ ಅತ್ಯುತ್ತಮವಾದ ಅಭಿಪ್ರಾಯಗಳನ್ನು ಒದಗಿಸಿದ ಪ್ರತಿಯೊಬ್ಬರಿಗೂ ಅನಂತ ಧನ್ಯವಾದಗಳನ್ನು ಅರ್ಪಿಸುವುದರೊಂದಿಗೆ ಆರಂಭಿಸಲು ಬಯಸುತ್ತೇನೆ.

ಕೆಲವು ತಿಂಗಳುಗಳವರೆಗೆ ಪ್ರಮುಖ ಸವಲತ್ತುಗಳ ಮೇಲೆ ಕೆಲಸ ಮಾಡಿದ ನಂತರ, ನಾವು ಆ್ಯಪ್ ಅನ್ನು ಮುನ್ನೋಟದಿಂದ (ಪ್ರಿವ್ಯೂ) ಹೊರತರಲು ನಮಗೆ ಸಂತಸವಾಗುತ್ತಿದೆ. ಈಗ ಡೆಸ್ಕ್‌ಟಾಪ್ ಆಗಿರಲಿ, ಟ್ಯಾಬ್ಲೆಟ್ ಆಗಿರಲಿ ಅಥವ Continuum for phone ಮೂಲಕವೆ ಆಗಿರಲು, ವಿಂಡೋಸ್ 10 ಸಾಧನವನ್ನು ಹೊಂದಿರುವ ಪ್ರತಿಯೊಬ್ಬರೂ ಸಹ ಒಂದೇ ರೀತಿ ಅನುಭವವನ್ನು ಪಡೆಯಲು ಸಾಧ್ಯವಿರುತ್ತದೆ.

ವಿಂಡೋಸ್ 10 ಅನ್ನು ಶಿಪ್ ಮಾಡಲಾಗಿದೆ, ನೀವು ರಿಮೋಟ್ ಡೆಸ್ಕ್‌ಟಾಪ್ ಆ್ಯಪ್ ಅನ್ನು ಸ್ಟೋರ್‌ನಿಂದ ಅನುಸ್ಥಾಪಿಸಿಕೊಂಡಿದ್ದರೆ, ವಿಂಡೋಸ್ [ಫೋನ್] 8.1 ಆ್ಯಪ್ ಅನ್ನು ಅನುಸ್ಥಾಪಿಸಿದ್ದೀರಿ ಎಂದರ್ಥ. ನೀವು ಮೈಕ್ರೋಸಾಫ್ಟ್ ರಿಮೋಟ್ ಡೆಸ್ಕ್‌ಟಾಪ್ ಪ್ರಿವ್ಯೂ ಆ್ಯಪ್ ಅನ್ನು ಅನುಸ್ಥಾಪಿಸಿದ್ದರೆ ಮಾತ್ರ ನಮ್ಮ ಹೊಸ ವಿಂಡೋಸ್ 10 ಯುನಿವರ್ಸಲ್ ಆ್ಯಪ್‌ ಲಭ್ಯವಿರುತ್ತದೆ.  ನಾವು ಆರಂಭಿಕ ಮುನ್ನೋಟದ ಹಂತದಿಂದ ನಿರ್ಗಮಿಸಿರುವುದರಿಂದ, ನಾವು ವಿಂಡೋಸ್ 10 ಮತ್ತು ವಿಂಡೋಸ್ 10 ಮೊಬೈಲ್ ಎರಡನ್ನೂ ಬಳಸುತ್ತಿರುವ ಸಾಧನಗಳಿಗಾಗಿ ರಿಮೋಟ್ ಡೆಸ್ಕ್‌ಟಾಪ್‌ ಹೆಸರಿನ ಅಡಿಯಲ್ಲಿ 8.1 ಆವೃತ್ತಿಯನ್ನು ಸಾರ್ವತ್ರಿಕ (ಯುನಿವರ್ಸಲ್) ಆ್ಯಪ್‌ನಿಂದ ಬದಲಾಯಿಸುವತ್ತ ಸಾಗುತ್ತಿದ್ದೇವೆ.

ಮುಂದಿನ ಕೆಲವು ವಾರಗಳಲ್ಲಿ ವಿಂಡೋಸ್ 10 ರ ಆವೃತ್ತಿಯನ್ನು ಬಳಸುವ ಬಳಕೆದಾರರ ಸಂಖ್ಯೆಯು ಅತ್ಯಂತ ಹೆಚ್ಚಾಗಲಿದೆ ಆದ್ದರಿಂದ, ನೀವು ಈ ಬ್ಲಾಗ್ ಅನ್ನು ಓದುವ ಸಂದರ್ಭದಲ್ಲಿಯೂ ಸಹ ನಿಮಗೆ ಆ್ಯಪ್‌ನ ಅಪ್‌ಡೇಟ್ ದೊರೆಯದೆ ಇರುವ ಸಾಧ್ಯತೆ ಇದೆ. ನೀವು ಇನ್ನೂ ಸಹ ಅನುಸ್ಥಾಪಿಸಲಾಗಿರದೆ ಇದ್ದಲ್ಲಿ, ಸ್ಟೋರ್‌ನಲ್ಲಿ Remote Desktop ಎಂದು ಟೈಪ್ ಮಾಡುವ ಮೂಲಕ ಹುಡುಕಬಹುದಾಗಿರುತ್ತದೆ.

ನವೀಕರಣದ ಸಮಯದಲ್ಲಿ, ನೀವು ಇದನ್ನು ನಿರೀಕ್ಷಿಸಬಹುದು:

  • ಡೆಸ್ಕ್‌ಟಾಪ್ ಸಂಪರ್ಕಗಳನ್ನು ಉಳಿಸಿಕೊಳ್ಳಲಾಗುತ್ತದೆ
  • ಬಳಕೆದಾರ ಹೆಸರುಗಳನ್ನು ಉಳಿಸಿಕೊಳ್ಳಲಾಗುತ್ತದೆ
  • ಗುಪ್ತಪದಗಳನ್ನು ಮರಳಿ-ನಮೂದಿಸಬೇಕಿರುತ್ತದೆ
  • ಗೇಟ್‌ವೇಗಳನ್ನು ಉಳಿಸಿಕೊಳ್ಳಲಾಗುತ್ತದೆ
  • ವಿಂಡೋಸ್ ಫೋನ್ 8.1 ರಿಂದ ರಿಮೋಟ್ ಸಂಪನ್ಮೂಲಗಳ URL ಗಳನ್ನು ಉಳಿಸಿಕೊಳ್ಳಲಾಗುತ್ತದೆ ಆದರೆ ಹೊಸ ಸೈನ್‌ ಇನ್‌ನ ಅಗತ್ಯವಿರುತ್ತದೆ
  • ವಿಂಡೋಸ್ 8.1 ರಿಂದ ರಿಮೋಟ್ ಸಂಪನ್ಮೂಲಗಳನ್ನು ಉಳಿಸಿಕೊಳ್ಳಲಾಗುವುದಿಲ್ಲ ಮತ್ತು ಅದನ್ನು ಮರಳಿ ಸೇರಿಸಬೇಕಿರುತ್ತದೆ
  • ಕೆಲವು ಸಾಮಾನ್ಯ ಸೆಟ್ಟಿಂಗ್‌ಗಳನ್ನು ಉಳಿಸಿಕೊಳ್ಳಲಾಗುತ್ತದೆ

ಆಪ್‌ನ ವಿಂಡೋಸ್‌ 8.1 ಆವೃತ್ತಿಯಲ್ಲಿನ ಕೆಲವು ಸೌಲಭ್ಯಗಳು ಇನ್ನೂ ಸಹ ವಿಂಡೋಸ್ 10 ರ ಆವೃತ್ತಿಯನ್ನು ತಲುಪಿಲ್ಲ. ನಾವು ನಮ್ಮ ಭವಿಷ್ಯದ ಅಪ್‌ಡೇಟ್‌ಗಳನ್ನು ಯೋಜಿಸುತ್ತಿರುವುದರಿಂದ, ನಿಮಗೆ ಯಾವ ಸೌಲಭ್ಯವು ಅತ್ಯಂತ ಮುಖ್ಯವಾಗಿದೆ ಎಂದು ನಾವು ತಿಳಿಯಬಯಸುತ್ತೇವೆ.

ಇನ್ನೂ ಸಹ ಲಭ್ಯವಿರದ ಕೆಲವು ಸೌಲಭ್ಯಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ:

  • ಒಂದೇ ಸಮಯದಲ್ಲಿ ಅನೇಕ ಸಂಪರ್ಕಗಳು
  • ಡೈನಮಿಕ್ ರೆಸಲ್ಯೂಶನ್ ಮತ್ತು ತಿರುಗುವಿಕೆ
  • ಮುದ್ರಕದ ಮರುನಿರ್ದೇಶನ
  • ಸ್ಮಾರ್ಟ್‌ಕಾರ್ಡ್ ಮರುನಿರ್ದೇಶನ
  • ಮೈಕ್ರೋಫೋನ್ ಬೆಂಬಲ
  • ಪ್ರಾದೇಶಿಕರಣಗೊಂಡ ಆ್ಯಪ್ (ಸದ್ಯಕ್ಕೆ ಇಂಗ್ಲೀಷಿನಲ್ಲಿ ಮಾತ್ರ)

ಈ ಸೌಲಭ್ಯಗಳು ನಿಮಗೆ ಅತಿಮುಖ್ಯವಾಗಿದ್ದಲ್ಲಿ, ವಿಂಡೋಸ್‌ನೊಂದಿಗೆ ಶಿಪ್ ಮಾಡಲಾದ ರಿಮೋಟ್ ಡೆಸ್ಕ್‌ಟಾಪ್ ಕನೆಕ್ಶನ್ ಆ್ಯಪ್ (MSTSC) ಅನ್ನು ಬಳಸುವಂತೆ ನಾವು ಸಲಹೆ ಮಾಡುತ್ತೇವೆ.

ಈಗ ಬಿಡುಗಡೆ ಮಾಡಿರುವ ಮುನ್ನೋಟದ (ಪ್ರಿವ್ಯೂ) ಅರ್ಥ ನಮ್ಮ ಕೆಲಸ ಮುಗಿದಿದೆ ಎಂದಲ್ಲ, ಇದು ಕೇವಲ ಆರಂಭವಷ್ಟೆ. ಕೆಲವೊಂದು ಸೌಲಭ್ಯಗಳಿಗೆ ಸಂಬಂಧಿಸಿದಂತೆ ಈಗಾಗಲೆ ಕೆಲಸವು ನಡೆಯುತ್ತಿದೆ ಮತ್ತು ಮುಂದಿನ ಸೌಲಭ್ಯಗಳತ್ತ ನಮ್ಮ ಕೆಲಸವನ್ನು ಕೇಂದ್ರೀಕರಿಸಲು ನಾವು ಸ್ಟೋರ್‌ನಲ್ಲಿನ ಹಾಗೂ ನಮ್ಮ ಸವಲತ್ತುಗಳ ಮನವಿಗಳ ಜಾಲತಾಣದಲ್ಲಿ ಬರುವ ಅಭಿಪ್ರಾಯಗಳತ್ತ ಗಮನವನ್ನು ಇರಿಸುತ್ತೇವೆ. ಕಾಲಕಾಲಕ್ಕೆ ಆ್ಯಪ್‌ನ ಅಪ್‌ಡೇಟ್‌ಗಳನ್ನು ನೀವು ನಿರೀಕ್ಷಿಸಬಹುದು.

ಆಪ್‌ನ ಮುಖ್ಯ ಆವೃತ್ತಿಯನ್ನು ನಾನು ಹೇಗೆ ಪಡೆಯಬಹುದು?

ಆ್ಯಪ್‌ನ ಮುನ್ನೋಟವಲ್ಲದ (ನಾನ್‌-ಪ್ರಿವ್ಯೂ) ಆವೃತ್ತಿಯನ್ನು ಸ್ಟೋರ್‌ನಲ್ಲಿನ ರಿಮೋಟ್ ಡೆಸ್ಕ್‌ಟಾಪ್‌ ಹೆಸರಿನ ಅಡಿಯಲ್ಲಿ ನೋಡಬಹುದು.  ನೀವು ಈಗಾಗಲೆ ನಮ್ಮ ವಿಂಡೋಸ್ 8.1 ಅನ್ನು ಅಥವಾ ವಿಂಡೋಸ್‌ 10ರಲ್ಲಿನ ವಿಂಡೋಸ್‌ ಫೋನ್‌ 8.1 ಆವೃತ್ತಿಗಳ ಆ್ಯಪ್ ಅನ್ನು‌ ಬಳಸುತ್ತಿದ್ದಲ್ಲಿ ನಿಮ್ಮ ಸಾಧನವನ್ನು ರೋಲ್‌ಔಟ್‌ ಪ್ರಕ್ರಿಯೆಯ ಮೂಲಕ ನವೀಕರಣವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದರೆ, ಮುಂದಿನ ಬಾರಿ ಸ್ಟೋರ್‌ ನಿಮ್ಮಲ್ಲಿ ಅನುಸ್ಥಾಪಿಸಲಾದ ಅನ್ವಯಗಳ ಪಟ್ಟಿಯನ್ನುಅಪ್‌ಡೇಟ್‌ ಮಾಡಿದಾಗ, ನಿಮಗೆ ಸ್ವಯಂಚಾಲಿತವಾಗಿ ಆ್ಯಪ್‌ನ ವಿಂಡೋಸ್‌ 10 ರ ಆವೃತ್ತಿಗೆ ನವೀಕರಣವು ದೊರಕುತ್ತದೆ.

ನೀವು ಕೇವಲ ಮೈಕ್ರೋಸಾಫ್ಟ್ ಡೆಸ್ಕ್‌ಟಾಪ್ ಪ್ರಿವ್ಯೂ ಅನ್ನು ಮಾತ್ರ ಬಳಸುತ್ತಿದ್ದರೆ, ಅಥವ ರಿಮೋಟ್‌ ಡೆಸ್ಕ್‌ಟಾಪ್‌ಗೆ ನೀವು ಹೊಸಬರಾಗಿದ್ದರೆ, ಇಂದೇ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸ್ಟೋರ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

ಸ್ಟೋರ್‌ನಲ್ಲಿ ಇನ್ನೂ ಏಕೆ ಪ್ರಿವ್ಯೂ ಆಪ್‌ ಇದೆ?

ಆಪ್‌ನ ವಿಂಡೋಸ್‌ 10 ರ ಆವೃತ್ತಿಗಾಗಿನ ಆರಂಭಿಕ ಮುನ್ನೋಟದ ಅವಧಿಯು ಈಗಾಗಲೆ ಮುಗಿದಿದ್ದರೂ ಸಹ, ನಿಮಗೆ ಸ್ಟೋರ್‌ನಲ್ಲಿ ಎರಡು ಆಪ್‌ಗಳು ಕಾಣಿಸುತ್ತವೆ: ರಿಮೋಟ್‌ ಡೆಸ್ಕ್‌ಟಾಪ್ ಮತ್ತು ಮೈಕ್ರೋಸಾಫ್ಟ್‌ ರಿಮೋಟ್‌ ಡೆಸ್ಕ್‌ಟಾಪ್ ಪ್ರಿವ್ಯೂ.

ನೀವು ನಿಮ್ಮ ದೈನಿಂದಿನ ರಿಮೋಟಿಂಗ್‌ ಕೆಲಸಗಳಿಗಾಗಿ ಮಾತ್ರ ಆ್ಯಪ್‌ ಅನ್ನು ಬಳಸುತ್ತಿದ್ದಲ್ಲಿ ರಿಮೋಟ್‌ ಡೆಸ್ಕ್‌ಟಾಪ್‌ ಆವೃತ್ತಿಯನ್ನು ಅನುಸ್ಥಾಪಿಸುವಂತೆ ಸಲಹೆ ಮಾಡಲಾಗುತ್ತದೆ. ಈ ಅಪ್‌ಡೇಟ್‌ ನಿಧಾನವಾದ ಅಪ್‌ಡೇಟ್ ಆವರ್ತನೆಯನ್ನು ಹೊಂದಿದ್ದು, ಇದರಿಂದಾಗಿ ಅಪಾಯ ಉಂಟಾಗುವ ಸಾಧ್ಯತೆಯು ಕಡಿಮೆ ಇರುತ್ತದೆ.

ಆದರೆ, ನೀವು ಹೆಚ್ಚು ದೋಷಗಳು ಮತ್ತು ಕ್ರಾಶ್‌ಗಳನ್ನು ಹೊಂದಿರಬಹುದಾದ ಬಿಡುಗಡೆ-ಪೂರ್ವದ ತಂತ್ರಾಂಶವನ್ನು ಬಳಸಲು, ಹೊಸ ಸೌಲಭ್ಯಗಳು ಬೇರೆಯವರಿಗೆ ದೊರಕುವ ಮೊದಲೆ ನೀವು ಬಳಸಲು, ಮತ್ತು ಅಭಿಪ್ರಾಯಗಳನ್ನು ತಿಳಿಸುವ ಮೂಲಕ ಉತ್ಪನ್ನವು ಇತರರಿಗೆ ಉತ್ತಮವಾಗಿರುವಂತೆ ಮಾಡಲು ಇಷ್ಟಪಡುವುದಾದರೆ, ಮೈಕ್ರೋಸಾಫ್ಟ್ ರಿಮೋಟ್ ಡೆಸ್ಕ್‌ಟಾಪ್ ಪ್ರಿವ್ಯೂ ನಿಮ್ಮಂತವರಿಗಾಗಿಯೆ ಇದೆ.

ಎರಡೂ ಆ್ಯಪ್‌ಗಳನ್ನು ಜೊತೆ ಜೊತೆಯಾಗಿ ಅನುಸ್ಥಾಪಿಸಬಹುದು.

ರಿಮೋಟ್‌ ಡೆಸ್ಕ್‌ಟಾಪ್ ಕ್ಲೈಂಟ್ ವಿಂಡೋಸ್ ಫೋನ್ 8.1, ವಿಂಡೋಸ್ 8.1, iOS, ಮ್ಯಾಕ್ OS X, ಮತ್ತು ಆಂಡ್ರಾಯ್ಡ್‌ ಅನ್ನು ಹೊಂದಿರುವ ನಿಮ್ಮ ಇತರೆ ಸಾಧನಗಳಿಗಾಗಿಯೂ ಸಹ ಲಭ್ಯವಿದೆ.​


​​​​​​​

Read More on....

This site uses Unicode and Open Type fonts for Indic Languages. Powered by Microsoft SharePoint 2013.
©2016 Microsoft Corporation. All rights reserved.