Skip Ribbon Commands
Skip to main content

​​​​​​​​​

ಪ್ಯಾಕೇಜುಗಳ ಪ್ರಾವಿಶನ್ ಮಾಡುವಿಕೆ - ಸಾಧ್ಯಾಸಾಧ್ಯತೆಗಳು


ವಿಂಡೋಸ್ 10 ಅನ್ನು ಬಳಸುತ್ತಿರುವವರಿಗೆ ನಮಸ್ತೆ!

ಇಂದು ನಾನು ನನ್ನ ಮೆಚ್ಚಿನ ಒಂದು ವಿಷಯವಾದ ವಿಂಡೋಸ್ 10 ಪ್ರಾವಿಶನಿಂಗ್‌ ಬಗ್ಗೆ ವಿವರಿಸಲು ಬಯಸುತ್ತೇನೆ.

ವಿಂಡೋಸ್ 10 ರಲ್ಲಿನ ನಿಯೋಜನೆಯು (ಅಂದರೆ ಪ್ರಾವಿಶನಿಂಗ್) ನಿಜವಾಗಿಯೂ ಸಾಧ್ಯವೆ ಎಂಬುದರ ಬಗ್ಗೆ ಅಂತರಜಾಲದಲ್ಲಿ ಹಲವಾರು ಚರ್ಚೆಗಳು ಆಗಿವೆ. ನಿಜ ಹೇಳಬೇಕೆಂದರೆ, ನನ್ನ ಅನುಭವದ ಪ್ರಕಾರ, ಸಾಕಷ್ಟು ಗ್ರಾಹಕರು ಈ ವಿಧಾನವನ್ನು ಅಳವಡಿಸಿಕೊಳ್ಳುತ್ತಿಲ್ಲ. ಇದನ್ನು ಖಚಿತಪಡಿಸಿಕೊಳ್ಳಲು, ನಾನು ಮೈಕ್ರೋಸಾಫ್ಟ್‌ ಜಪಾನ್‌ನ ಒಳಗೆ ಒಂದು ಆಂತರಿಕ ಸರ್ವೇ ಮಾಡಿದ್ದು, ಹಾಗೂ 200 ಸಂಸ್ಥೆಗಳಲ್ಲಿ ವಿಂಡೋಸ್ 10 ಅನ್ನು ನಿಯೋಜಿಸಿದ 60 ಸಂಸ್ಥೆಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿದ್ದೇನೆ: 90% ನಷ್ಟು ಜನರು ಸಾಂಪ್ರದಾಯಿಕವಾದ "ಅಳಿಸು ಮತ್ತು ಲೋಡ್" ಮಾಡುವ ವಿಧಾನಕ್ಕೆ ಮೊರೆಹೋಗಲು ನಿರ್ಧರಿಸಿದ್ದಾರೆ ಎಂದು ಕಂಡುಬಂದಿದೆ.

ಯಾಕೆ? ಇದಕ್ಕೆ ಹಲವಾರು ಕಾರಣಗಳಿವೆ. ನನ್ನ ಪ್ರಕಾರ ಮೊದಲನೆಯದೆಂದರೆ, ಗ್ರಾಹಕರಿಗೆ ಸಾಂಪ್ರದಾಯಿಕ ನಿಯೋಜನಾ ವಿಧಾನವು ಅಭ್ಯಾಸವಾಗಿ ಹೋಗಿದೆ ಹಾಗೂ ಇದು ವಿಂಡೋಸ್ 10 ರೊಂದಿಗೆ ಉತ್ತಮವಾಗಿ ಕೆಲಸವನ್ನೂ ಸಹ ಮಾಡುತ್ತದೆ. ಅವರು ಸಂಪೂರ್ಣವಾದ ನಿಯೋಜನಾ ವಿಧಾನವನ್ನು ದಾಖಲಿಸಿ ಇಟ್ಟಿರಬಹುದು ಮತ್ತು ಸಂಪೂರ್ಣ ಹೊಸತಾದ ನಿಯೋಜನಾ ವಿನ್ಯಾಸ ಮತ್ತು ಅದರ ಡಾಕ್ಯುಮೆಂಟೇಶನ್‌ನ ವೆಚ್ಚದ ಕುರಿತು ಆತಂವಿರಬಹುದು. ಉದಾಹರಣೆಗೆ ಜಪಾನಿನಲ್ಲಿ, ನಮ್ಮ ಗ್ರಾಹಕರು ಸಾಧನಗಳನ್ನು ಒಟ್ಟಾಗಿ ಬದಲಾಯಿಸುವ ನಿಶ್ಚಿತ ಸಂದರ್ಭದಲ್ಲಿ ವಿಂಡೋಸ್ 10ಕ್ಕೆ ವರ್ಗಾವಣೆ ಮಾಡಲು ಪರಿಗಣಿಸುತ್ತಾರೆ. ಈ ನಿರ್ದಿಷ್ಟ ಸನ್ನಿವೇಶದಲ್ಲಿ, ಅವರು "ಅಳಿಸು ಮತ್ತು ಲೋಡ್ ಮಾಡು" (ವೈಪ್ ಆಂಡ್ ಲೋಡ್) ವಿಧಾನವನ್ನು ಅಳವಡಿಸಿಕೊಳ್ಳುತ್ತಾರೆ.

ಇನ್ನೊಂದು ಕಾರಣವೆಂದರೆ, ಪ್ರಾವಿಶನಿಂಗ್ ವಿಧಾನವು ಹೊಂದಿರುವ ಕೆಲವು ಮಿತಿಗಳು ಮತ್ತು ದೋಷಗಳು  ಇರಬಹುದು:  ಉದಾಹರಣೆಗೆ,  ಇದು ಸ್ಟೋರ್‌ನಿಂದ ಖರೀದಿಸಿದ ವಿಂಡೋಸ್ 10 ರ ಸಾಧನದಿಂದ ಬ್ಲೋಟ್‌ವೇರ್ ಅನ್ನು ತೆಗೆದುಹಾಕಲು ಸುಲಭವಾದ ಮಾರ್ಗವನ್ನು ಒದಗಿಸುವುದಿಲ್ಲ (ನೀವು ಇದಕ್ಕೆ ಸ್ಕ್ರಿಪ್ಟ್ ತಯಾರಿಸಬಹುದು ಆದರೆ ಅದು ಮಾರ್ಕೆಟ್‌ನಲ್ಲಿ ಲಭ್ಯವಿರುವ ಎಲ್ಲಾ ಸಾಧನಗಳೊಂದಿಗೆ ಒಂದೇ ರೀತಿಯಲ್ಲಿ ಕೆಲಸ ಮಾಡುವುದಿಲ್ಲ). ಇನ್ನೊಂದೆಂದರೆ, ಆವೃತ್ತಿಯ ನವೀಕರಣವು ಕೇವಲ ಪ್ರೊ (ಅಥವಾ ಎಡು) ಇಂದ ಎಂಟರ್ಪ್ರೈಸ್‌ಗೆ ಮಾತ್ರ ಸಾಧ್ಯವಿರುತ್ತದೆ, ಆದರೆ ನೀವು ಖರೀದಿಸಲು ಸಾಧ್ಯವಿರುವ ಹೆಚ್ಚಿನ ಗ್ರಾಹಕ-ಸಾಧನಗಳಲ್ಲಿ ವಿಂಡೋಸ್ 10 ಹೋಮ್ ಆವೃತ್ತಿ ಇರುತ್ತದೆ  (ನಿಜ ಹೇಳಬೇಕೆಂದರೆ PPKG ಬಳಸಿಕೊಂಡು ಹೋಮ್‌ನಿಂದ ಪ್ರೊಗೆ, ನಂತರ ಪ್ರೊ ಇಂದ ಎಂಟ್‌ಗೆ ಬದಲಾಯಿಸಲು ಸಾಧ್ಯವಿರುತ್ತದೆ). ಕೊನೆಯದಾಗಿ, ವಿಂಡೋಸ್ ICD ಉಪಕರಣವು ಅಷ್ಟೊಂದು ಬಳಕೆದಾರ ಸ್ನೇಹಿಯಾಗಿಲ್ಲದೆ ಇರಬಹುದು (ಸದ್ಯಕ್ಕೆ).

ನನ್ನ ಪ್ರಕಾರ, ಪ್ರಾವಿಶನಿಂಗ್ ಅನ್ನು ಕೇವಲ ಒಂದು ಸನ್ನಿವೇಶದಲ್ಲಿ ಮಾತ್ರ ಬಳಸಬೇಕು: BYOD. ಒಬ್ಬ ಸೇಲ್ಸ್‌ನ ವ್ಯಕ್ತಿಯು ಆತನ ವ್ಯವಹಾರ ಟ್ರಿಪ್‌ನ ಸಮಯದಲ್ಲಿ ತನ್ನ ಸಾಧನವನ್ನು ಕಳೆದುಕೊಂಡರೆ/ಹಾಳಾದರೆ/ಕಳ್ಳತನವಾದಲ್ಲಿ ಹಾಗೂ ಅವನು ಅದನ್ನು ಒಬ್ಬ ವೃತ್ತಿಪರ IT ತಂತ್ರಜ್ಞನ ನೆರವಿಲ್ಲದೆ ಬದಲಾಯಿಸಬೇಕಿರುವಂತಹ ಸಂದರ್ಭದಲ್ಲಿ ಇದು ನೆರವಾಗಬಲ್ಲದು. ಆತನ ಸಾಧನವನ್ನು ಎಂಟರ್ಪ್ರೈಸ್ ಆವೃತ್ತಿಗೆ ನವೀಕರಿಸುವ, ಆಫೀಸ್‌ 2016 ಅನ್ನು ಅನುಸ್ಥಾಪಿಸುವ, VPN ಅನ್ನು ಸಿದ್ಧಗೊಳಿಸುವ, ಮತ್ತು ಅಗತ್ಯವಿದ್ದರೆ ಡೊಮೇನ್ ಸೇರಿಕೊಳ್ಳುವಿಕೆಯ ಮೂಲಕ ಕ್ಷಿಪ್ರವಾಗಿ ಕೆಲಸಕ್ಕೆ ಮರಳಲು ಪ್ರಾವಿಶನಿಂಗ್‌ ನೆರವಾಗುತ್ತದೆ.

ಬೇರೆ ಯಾವುದೆ ಸನ್ನಿವೇಶಗಳಲ್ಲಿ, ನೀವು ಇನ್‌-ಪ್ಲೇಸ್ ಅಪ್‌ಗ್ರೇಡ್ (ವಿಂಡೋಸ್ 7, 8, 8.1 ಸಾಧನಗಳಲ್ಲಿ) ಅನ್ನು ಅಥವಾ ಯಾವುದೆ ಸಾಧನಗಳಿಗಾಗಿ ವೈಪ್ ಅಂಡ್ ಲೋಡ್ ಅನ್ನು ಪರಿಗಣಿಸಬೇಕು..

ಪ್ರಾವಿಶನಿಂಗ್ ವಿಧಾನದಲ್ಲಿ ಒಂದಿಷ್ಟು ಸಮಸ್ಯೆಗಳನ್ನು ನಾವು ಎದುರಿಸಿದರೂ ಸಹ, ನಾನು PPKG ಇಂದ ನನಗೆ ದೊರೆತ ಎಲ್ಲಾ ಪರೀಕ್ಷಾ ಫಲಿತಾಂಶಗಳನ್ನು ನಾನು ಕಲೆಹಾಕಲು ಬಯಸಿದೆ (ಯಾವುದು ಕೆಲಸ ಮಾಡುತ್ತದೆ ಹಾಗು ಯಾವುದು ಕೆಲಸ ಮಾಡುವುದಿಲ್ಲ ಎಂದು). ಇದರಿಂದಾಗಿ ನಿಮ್ಮ ಅಗತ್ಯಗಳಿಗೆ ಹೊಂದಿಕೆಯಾಗುವ ಉತ್ತಮವಾದ ನಿಯೋಜನಾ ವಿಧಾನವನ್ನು ನಿರ್ಧರಿಸಲು ನೆರವಾಗುವಂತೆ ನಿಮಗೆ ಎಲ್ಲಾ ಕೀಗಳು ದೊರೆಯುತ್ತವೆ.

 • ಕಾರ್ಪೊರೇಟ್ ಇನ್‌ಫ್ರಾದಲ್ಲಿ ಸಾಧನವನ್ನು ನೋಂದಾಯಿಸಿ
  • Domain Join –> OK
   • [Runtime Settings]>[Accounts]>[Computer Account]
    • [Account] ಡೊಮೇನ್\ಖಾತೆ (ಅಂದರೆ contoso\admin)
    • [DomainName] ಡೊಮೇನ್ FQDN (ಅಂದರೆ contoso.com)
    • [Password] ಡೊಮೇನ್‌ ಸೇರುವ ಖಾತೆಯ ಗುಪ್ತಪದ
  • Azure AD Join –> NO (ಇದು PPKG ಇಂದ ಒದಗಿಸಲಾಗುವ ದಾಖಲಾತಿ ವಿಧಾನದ ದೃಢೀಕರಣಕ್ಕೆ ಸಂಬಂಧಿಸಿದೆ ಮತ್ತು ಇದು Azure AD Join ಹಾಗೂ Intune ನೊಂದಿಗೆ ಹೊಂದಿಕೆಯಾಗುವುದಿಲ್ಲ)
  • Intune enrollment –> NO (ಮೇಲಿನಂತೆಯೆ)
  • SCCM On-prem MDM enrollment –> OK (ನಾನು ಸ್ವತಃ ಪ್ರಯತ್ನಿಸಿ ನೋಡಿಲ್ಲ ಆದರೆ ಅದನ್ನು ಹೇಗೆ ಮಾಡುವುದು ಎಂಬುದನ್ನು ವಿವರಿಸುವ ಅದ್ಭುತವಾದ ಲೇಖನ ಇಲ್ಲಿದೆ )
 • ಪ್ರೊಫೈಲ್‌ಗಳು
  • WIFI –> OK
   • [Runtime Settings]>[ConnectivityProfiles]>[WLAN]>[WLANSetting]
    • ವೈಫೈನ [SSID] ಅನ್ನು ಸೇರಿಸಿ
    • [WLANXmlSettings] ನ ಅಡಿಯಲ್ಲಿ, [AutoConnect], [HiddenNetwork], [SecurityKey] ಮತ್ತು [Security Type] ಅನ್ನು ತುಂಬಿಸಿ
  • Certificates –> OK
   • ರೂಟ್ CA ಪ್ರಮಾಣಪತ್ರಕ್ಕಾಗಿ, [Runtime Settings]>[Certificates>[RootCertificates]
    • ಒಂದು [CertificateName] ಅನ್ನು ಟೈಪ್ ಮಾಡಿ ಮತ್ತು [Add] ಅನ್ನು ಕ್ಲಿಕ್ ಮಾಡಿ
    • CER ರೂಟ್ CA ಪ್ರಮಾಣಪತ್ರದ ಕಡತಕ್ಕೆ [CertificatePath] ಮಾರ್ಗ
  • Email profile –> ಒಂದು BYOD ಸನ್ನಿವೇಶದಲ್ಲಿ ನಿಮಗೆ ಡೊಮೈನ್ ಅಥವಾ ಅಜ್ಯೂರ್ AD ಖಾತೆಯು ತಿಳಿದಿಲ್ಲದೆ ಇರುವ ಕಾರಣದಿಂದಾಗಿ, ಪ್ರಾವಿಶನಿಂಗ್‌ನೊಂದಿಗೆ ಅದು ಸಾಧ್ಯವಿದೆ ಎಂದು ನನಗನ್ನಿಸುವುದಿಲ್ಲ.
 • OS ಕಸ್ಟಮೈಸೇಶನ್
  • Start Menu –> OK (ಸೂಚನೆ: ಇದು ಪ್ರಸಕ್ತ ಬಳಕೆದಾರರಿಗೆ ಅನ್ವಯಿಸುವುದಿಲ್ಲ ಆದರೆ ಈ ಕಂಪ್ಯೂಟರ್‌ನಲ್ಲಿನ ಯಾವುದೆ ಹೊಸ ಬಳಕೆದಾರರಿಗೆ ಅನ್ವಯಿಸುತ್ತದೆ)
  • Wallpaper –> NO (ಚಿತ್ರ ಕಡತವನ್ನು ಪ್ರತಿ ಮಾಡಿ ಆದರೆ ಅದನ್ನು ಅನ್ವಯಿಸಬೇಡಿ, ಇದು ಒಂದು ನಿರೀಕ್ಷಿತ ವರ್ತನೆಯೆ ಎಂಬುದರ ಬಗ್ಗೆ ಇನ್ನೂ ನನಗೆ ಅರಿವಿಲ್ಲ. ಇದರ ಬಗ್ಗೆ ಇನ್ನೊಮ್ಮೆ ತಿಳಿಸುತ್ತೇನೆ)
  • Local Account creation –> OK
   • [Runtime Settings]>[Accounts]>[Users]
   • ಒಂದು [User Name] ಅನ್ನು ಟೈಪ್ ಮಾಡಿ ಮತ್ತು [Add] ಅನ್ನು ಕ್ಲಿಕ್ ಮಾಡಿ
   • [Password] ಹೊಸದಾಗಿ ರಚಿಸಲಾದ ಖಾತೆಯ ಗುಪ್ತಪದ
   • [UserGroup] ಉದಾಹರಣೆಗೆ ಬಳಕೆದಾರರನ್ನು "Administrators" ಗುಂಪಿಗೆ ಸೇರಿಸಿ
  • UWF –> OK
   • [Runtime Settings]>[UnifiedWriteFilter]
   • [FilterEnabled] TRUE
   • [OverlaySize] MB ಯಲ್ಲಿ (ಅಂದರೆ 1024)
   • [OverlayType] RAM ಅಥವಾ ಡಿಸ್ಕ್ ಅನ್ನು ಆರಿಸಿ
   • [Volumes]
    • ಫಿಲ್ಟರ್ ಮಾಡಲು [DriveLetter] ಅನ್ನು ಟೈಪ್ ಮಾಡಿ (ಅಂದರೆ "C:") ನಂತರ [Add] ಅನ್ನು ಕ್ಲಿಕ್ ಮಾಡಿ
    • [Protected] TRUE
  • Bitlocker –> NO (ಒಂದು ಸ್ಕ್ರಿಪ್ಟಿನ ಒಳಗೆಯೆ manage-bde ಆದೇಶವನ್ನು ಬಳಸುವಾಗ ಎಸ್ ಆಗಿರುತ್ತದೆ)
  • Edition upgrade –> OK (ಎಂಟರ್ಪ್ರೈಸ್‌ಗಾಗಿ ಕೇವಲ ಪ್ರೊ/ಎಡು ಇಂದ)
   • [Runtime Settings]>[EditionUpgrade]
   • [UpgradeEditionWithProductKey] ಎಂಟರ್ಪ್ರೈಸ್ ಉತ್ಪನ್ನ ಕೀಲಿಯನ್ನು ಟೈಪ್ ಮಾಡಿ
 • ಸಾರ್ವತ್ರಿಕ ಅನ್ವಯಗಳು
  • Install –> OK (ಸೈಡ್‌ಲೋಡಿಂಗ್ ಅನ್ನು ಸಕ್ರಿಯಗೊಳಿಸಲು, ಪ್ರಮಾಣಪತ್ರವನ್ನು, ಅವಲಂಬನೆಗಳನ್ನು ಮತ್ತು ಆಪ್ ಕಡತವನ್ನು  ನಿಯೋಜಿಸಲು ಮರೆಯದಿರಿ)
   • ಸೈಡ್‌ಲೋಡಿಂಗ್ ಅನ್ನು ಸಕ್ರಿಯಗೊಳಿಸಲು, [Runtime Settings]>[Policies]>[ApplicationManagement]>[AllowAllTrustedApps]>[Yes]
   • ಪ್ರಮಾಣಪತ್ರವನ್ನು ನಿಯೋಜಿಸಲು, [Runtime Settings]>[Certificates]>[TrustedPeopleCertificates]
    • [CertificateName] ಅನ್ನು ಟೈಪ್ ಮಾಡಿ ಮತ್ತು [Add] ಅನ್ನು ಕ್ಲಿಕ್ ಮಾಡಿ
    • [TrustedCertificate] ಆಪ್ ಪ್ರಮಾಣಪತ್ರ ಕಡತದ ಮಾರ್ಗವನ್ನು ಸೂಚಿಸಿ
   • ಅವಲಂಬನೆಗಳೊಂದಿಗೆ ಆಪ್ ಅನ್ನು ಆಮದು ಮಾಡಲು, [Runtime Settings]>[UniversalAppInstall]
    • [PackageFamilyName] ಅನ್ನು ಟೈಪ್ ಮಾಡಿ ಮತ್ತು [Add] ಅನ್ನು ಕ್ಲಿಕ್ ಮಾಡಿ (ಯಾವುದೆ ಹೆಸರಾಗಿರಬಹುದು)
    • [ApplicationFile] ".appxbundle" ಕಡತವನ್ನು ಸೂಚಿಸಿ
    • [DependencyAppxFiles] ಅವಲಂಬನೆಯ ಕಡತಗಳನ್ನು ಒಂದೊಂದರಂತೆ ಸೇರಿಸುತ್ತಾ ಹೋಗಿ
  • Uninstall –> OK
   • [Runtime Settings]>[UniversalAppUninstall]
   • ಪ್ಯಾಕೇಜಿನ ಕುಟುಂಬದ ಹೆಸರನ್ನು ಪತ್ತೆ ಮಾಡಲು, ತೆಗೆದುಹಾಕಬೇಕಿರುವ ಆಪ್ ಅನ್ನು ಅನುಸ್ಥಾಪಿಸಲಾದ ಕಂಪ್ಯೂಟರ್‌ನಲ್ಲಿ get-appxpackage ಆದೇಶವನ್ನು ಚಲಾಯಿಸಿ.
   • ಮೇಲಿನ ಆದೇಶವನ್ನು ಬಳಸಿಕೊಂಡು ಪಡೆಯಲಾದ [PackageFamilyName] ಅನ್ನು ಟೈಪ್ ಮಾಡಿ.
 • Win32 ಅನ್ವಯದ ಅನುಸ್ಥಾಪನೆ
  • MSI –> OK
   • [Runtime Settings]>[ProvisioningCommands]>[DeviceContext]
   • [CommandFiles] MSI ಕಡತವನ್ನು ಸೇರಿಸಿ
   • [CommandLine] MSI ಪ್ಯಾಕೇಜ್ ಅನ್ನು ಅನುಸ್ಥಾಪಿಸಲು ಇದನ್ನು ಆದೇಶ ಸಾಲಿನಲ್ಲಿ ಟೈಪ್ ಮಾಡಿ: "msiexec.exe /i xxx.msi /q"
  • Office –> OK (WICD ಅನ್ನು ಬಳಸಿಕೊಂಡು ಹೇಗೆ ಮಾಡುವುದು ಎಂಬುದನ್ನು ವಿವರಿಸಲು ನಾನು ಇನ್ನೊಂದು ಲೇಖನವನ್ನು ಬರೆಯುತ್ತೇನೆ.).

ಪ್ರಾವಿಶನಿಂಗ್‌ನೊಂದಿಗೆ ಏನೆಲ್ಲಾ ಸಾಧ್ಯ ಎಂಬುದನ್ನು ನಿರ್ಧರಿಸಲು ಈ ಪಟ್ಟಿಯು ನಿಮಗೆ ಸಹಾಯ ಒದಗಿಸುತ್ತದೆ ಎಂದು ಭಾವಿಸುತ್ತೇನೆ. ನಾನು ವಿಂಡೋಸ್ ICD ಯಲ್ಲಿ ಲಭ್ಯವಿರುವ ಎಲ್ಲಾ ಸೆಟ್ಟಿಂಗ್‌ಗಳನ್ನು ನಾನು ಇಲ್ಲಿ ಪರಿಗಣಿಸಿಲ್ಲ, ಆದ್ದರಿಂದ ನಿಮಗೆ ಬೇರೆ ಯಾವುದೆ ಸೆಟ್ಟಿಂಗ್‌ಗಳ ಅಗತ್ಯವಿದ್ದರೆ ಅದಕ್ಕಾಗಿ ವಿಂಡೋಸ್‌ ICD ಉಪಕರಣದಲ್ಲಿ ಹುಡುಕುವಂತೆ ನಾನು ಸಲಹೆ ಮಾಡುತ್ತೇನೆ. :)


​​​​​​

Read More on....

This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.