Skip Ribbon Commands
Skip to main content

 

Microsoft Office Home and Student 2010


ಮೈಕ್ರೋಸಾಫ್ಟ್ ಆಫೀಸ್ ಹೋಂ ಮತ್ತು ಸ್ಟೂಡೆಂಟ್ 2010


ಮೈಕ್ರೋಸಾಫ್ಟ್ ಆಫೀಸ್ ಹೋಂ ಮತ್ತು ಸ್ಟೂಡೆಂಟ್ 2010 ಶಾಲೆ ಮತ್ತು ಗೃಹ ಸಂಬಂಧೀ ಪ್ರಾಜೆಕ್ಟ್‌ಗಳನ್ನು ದಕ್ಷತೆಯಿಂದ ಪೂರ್ಣಗೊಳಿಸಲು ಲಭ್ಯವಿರುವ ತಂತ್ರಾಂಶ. ಬಳಕೆಗೆ ಸಿದ್ಧವಿರುವ ಟೆಂಪ್ಲೇಟ್‌ಗಳು ವರ್ಡ್ ಮತ್ತು ಪವರ್‌ಪಾಯಿಂಟ್ 2010ನಲ್ಲಿ ವಿದ್ಯಾರ್ಥಿಗಳಿಗೆ ಶಾಲ ಕೆಲಸಗಳನ್ನು ಅತ್ಯುತ್ತಮವಾಗಿ ನಿರ್ವಹಿಸಲು ಸಾಧ್ಯ ಮಾಡುತ್ತದೆ. ಅತಿ ಶ್ರೀಮಂತವಾದ ದೃಶ್ಯಾವಳಿಗಳು ಮತ್ತು ಮಾಧ್ಯಮ ಸಂಕಲಿತ ವಿವರಗಳು ಅವರಿಗೆ ತಮ್ಮ ಆಲೋಚನೆಗಳನ್ನು ರಚನಾತ್ಮಕವಾಗಿ ವ್ಯಕ್ತಪಡಿಸಲು ಸಹಾಯ ಮಾಡುತ್ತದೆ.

 

ಎಕ್ಸೆಲ್ 2010 ಅಂಕಿ ಅಂಶಗಳು, ವಿವರಣೆಗಳೊಂದಿಗಿನ ಕೆಲಸಗಳನ್ನು ಸುಲಭ ಮಾಡುತ್ತದೆ. ಗೃಹಕೃತ್ಯಗಳ ಬಜೆಟ್ ತಯಾರಿಸುವುದರಿಂದ ಹಿಡಿದು ಎಲ್ಲ ಕೆಲಸಗಳನ್ನು ಯೋಜನಾಬದ್ಧಗೊಳಿಸಲು ಸಹಾಯ ಮಾಡುತ್ತದೆ.

 

ಕೆಲವೇ ಕೆಲವು ಕ್ಲಿಕ್‌ಗಳಿಂದ ನಾವು ಕಡತಗಳನ್ನು ಸೇವ್ ಮಾಡಬಹುದು, ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು, ಮುದ್ರಿಸಬಹುದು ಮತ್ತು ನಿಮ್ಮ ದಾಖಲೆಗಳನ್ನು ಪ್ರಕಟಪಡಿಸಬಹುದು.

ನೆರಳು, ಪ್ರತಿಫಲನ, ಹೊಳೆಯುವಿಕೆಯಂತಹ ದೃಶ್ಯಾವಳಿಗಳ ಮೂಲಕ ನಿಮ್ಮ ಟೆಕ್ಸ್ಟ್ ಅಥವಾ ರೇಖಾಚಿತ್ರವನ್ನು ಆಕರ್ಷಕಗೊಳಿಸಬಹುದು. ಬಜೆಟ್ ರೂಪಿಸಲು ಮತ್ತು ಖರ್ಚುಗಳ ಮೇಲೆ ನಿಗಾ ಇಡಲು- ಇದಕ್ಕಾಗಿ ರೇಖಾಚಿತ್ರ, ಗ್ರಾಫ್‌ಗಳು, ವಿಶ್ಲೇಷಣಾ ಸಲಕರಣೆಗಳನ್ನು ಬಳಸಬಹುದು. ಇದರಿಂದ ತಕ್ಷಣಕ್ಕೆ ಎಲ್ಲೆಲ್ಲಿ ಏನೇನು ಆಗಿದೆ ಎಂಬ ಅಂಶಗಳತ್ತ ಗಮನ ಕೊಡಲು ಸಾಧ್ಯವಾಗುತ್ತದೆ.

ವೀಡಿಯೋ ಮತ್ತು ಫೋಟೋ ಸಂಕಲನಕ್ಕಾಗಿ ಸುರಧಾರಿತ ಸಲಕರಣೆ, ತಂತ್ರಾಂಶಗಳನ್ನು ಬಳಸುವುದರಿಂದ ಅತ್ಯಂತ ನವಿರಾದ ಪ್ರೆಸೆಂಟೇಶನ್ ನೀಡುವ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಹುದು. ನಾಟಕೀಯ ಪರಿವರ್ತನೆಗಳು ಮತ್ತು ನೈಜ ಅನಿಮೇಶನ್‌ನಿಂದಾಗಿ ನಿಮಗೆ ಸಂಕ್ಷಿಪ್ತವಾಗಿ ಮತ್ತು ಸ್ಪಷ್ಟವಾಗಿ ಸಿನೆಮಾ ಕತೆಯಂತೆ ವಿವರಗಳನ್ನು ಮಂಡಿಸಲು ಸಾಧ್ಯಮಾಡುತ್ತದೆ ಈ ತಂತ್ರಜ್ಞಾನ.

 

ಪ್ರಾಜೆಕ್ಟ್‌ಗಳನ್ನು ಒಟ್ಟು ಹೆಚ್ಚು ದಕ್ಷತೆಯಿಂದ ನಿರ್ವಹಿಸಲು ಅನುಕೂಲ ಪಠ್ಯ, ಇಮೇಜ್, ವೀಡಿಯೋ ಮತ್ತು ಆಡಿಯೋ ಟಿಪ್ಪಣಿಗಳನ್ನು ಹುಡುಕಾಡುವ ಸಾಮರ್ಥ್ಯವಿರುವ ಡಿಜಿಟಲ್ ನೋಟ್‌ಬುಕ್‌ನಂತೆ ಇದು ಕೆಲಸ ಮಾಡುತ್ತದೆ.


ಆನ್‌ಲೈನ್ ಮೂಲಕ ಸುಲಭವಾಗಿ ಕಡತಗಳನ್ನು, ಮಾಹಿತಿಗಳನ್ನು ರವಾನಿಸಬಹುದು ಮತ್ತು ಅವುಗಳನ್ನು ವೀಕ್ಷಿಸಬಹುದು. ಎಲ್ಲಿಂದ ಬೇಕಾದರೂ ಅವುಗಳನ್ನು ಸಂಕಲಿಸಬಹುದು.


• -ಶಕ್ತಿಶಾಲಿ ಬರವಣಿಗೆ ಸಲಕರಣೆಗಳು ಅತ್ಯಾಕರ್ಷಕ ಮತ್ತು ಅತ್ಯಪೂರ್ವ ಡಾಕ್ಯುಮೆಂಟ್‍‌ಗಳ ನಿಲ್ಮಾಣ/ರಚನೆಗೆ ಸಹಕಾರಿಯಾಗುತ್ತದೆ.
• -ಸುಲಭ ವಿಶ್ಲೇಷಣೆಯ ಸ್ಪ್ರೆಡ್‌ಶೀಟ್‌ಗಳಿಂದಾಗಿ ತ್ವರಿತವಾಗಿ ಉತ್ತಮ ನಿರ್ಧಾರ ಕೈಗೊಳ್ಳಲು ಸಾಧ್ಯ.
• -ನಿಮ್ಮ ವೀಕ್ಷಕರು, ಸಭಿಕರ ಮೇಲೆ ಪ್ರಭಾವ ಬೀರುವಂತೆ ವಿಚಾರ ಮಂಡಿಸಲು ಚಲನಶೀನ ಪ್ರಸ್ತುತಿ ನೀಡಲು ಇದು ಉಪಯುಕ್ತ.
• -ನಿಮ್ಮ ಯೋಚನೆ ಮಾಹಿತಿಗಳನ್ನು ಸಮಗ್ರವಾಗಿ ವ್ಯವಸ್ಥಿತಗೊಳಿಸಿಡಲು, ದಾಸ್ತಾನು ಮಾಡಿಡಲು ಮತ್ತು ಒಂದೇ ಕಡೆ ಟಿಪ್ಪಣಿ ಮಾಡಿಡಲು ಇದು ಅನುಕೂಲ.
• -ನಿಮ್ಮ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ರವಾನಿಸಿ ಮತ್ತು ದಾಸ್ತಾನು ಮಾಡಿಡುವುದರಿಂದ ಅವು ಕಳೆದುಹೊಗುವ ಅಪಾಯ ಇಲ್ಲ.
• -ನೀವು ಎಲ್ಲೇ ಇದ್ದರೂ ನಿಮ್ಮ ದಾಖಲೆಗಳನ್ನು ಮಾಹಿತಿಗಳನ್ನು ಪಡೆದು, ನೋಡಿ, ಪರಿಷ್ಕರಿಸಲು ಸಾಧ್ಯ.
• -ಮೂರು ಕಂಪ್ಯೂಟರ್‌ಗಳಲ್ಲಿ ಈ ತಂತ್ರಜ್ಞಾನ ಅಳವಡಿಸಲು ಒಂದು ಲೈಸನ್ಸ್ ಸಾಕು.


ಅಗತ್ಯವಾದ ಸಿಸ್ಟಮ್- ಏನೇನು ಬೇಕು?


500mhz ಅಥವಾ ಅದಕ್ಕಿಂತ ಹೆಚ್ಚು ಸಾಮರ್ಥ್ಯದ ಪ್ರೊಸೆಸರ್.
265 ಎಂಬಿ ರಾಂ, ಗ್ರಾಫಿಕ್ಸ್ ವಿವರಣೆ, ತಕ್ಷಣದ ತ್ವರಿತ ಶೋಧ ಮತ್ತು ಕೆಲ ಸುಧಾರಿತ ಕಾರ್ಯಚಟುವಟಿಕೆಗಳಿಗಾಗಿ 512 ಎಂಬಿ ಮೆಮರಿ ಇದ್ದರೆ ಒಳಿತು.
3.0 ಜಿಬಿ ಡಿಸ್ಕ್ ಅವಕಾಶದ ಹಾರ್ಡ್ ಡಿಸ್ಕ್
ಡಿಸ್‌ಪ್ಲೇಗೆ 1024x576 ಅಥವಾ ಅದಕ್ಕಿಂತ ಹೆಚ್ಚು ರೆಸೊಲ್ಯೂಶನ್ ಮಾನಿಟರ್.


ಕಾರ್ಯಚರಣಾ ವ್ಯವಸ್ಥೆ:


ವಿಂಡೋಸ್7, ಎಸ್‌ಪಿ1 ನೊಂದಿಗೆ ವಿಸ್ತಾ, ಎಸ್‌ಪಿಯೊಂದಿಗೆ ಎಕ್ಸ್‌ಪಿ (32 ಬಿಟ್), ವಿಂಡೋಸ್ ಸರ್ವರ್ 2008, ವಿಂಡೋಸ್ ಸರ್ವರ್ 2003 ಆರ್2 ಜತೆಗೆ ಎಂಎಸ್ಎಕ್ಸ್ಎಂಎಲ್6.0 (32 ಬಿಟ್ ಆಫೀಸ್ ಮಾತ್ರ) ಅಥವಾ 32 ಇಲ್ಲವೇ 64 ಬಿಟ್ ಓಎಸ್.
ವೀಡಿಯೋ ಕಾರ್ಡ್:  ಗ್ರಾಫಿಕ್ಸ್ ಹಾರ್ಡ್‌ವೇರ್ ಆಕ್ಸಿಲರೇಶನ್‌ಗಾಗಿ ಡೈರೆಕ್ಟ್x9.0 c, ಗ್ರಾಫಿಕ್ಸ್‌ಕಾರ್ಡ್, 64 ಎಂಬಿ ಅಥವಾ ಹೆಚ್ಚಿನ ವೀಡಿಯೋ ಮೆಮರಿಯೊಂದಿಗೆ ಕೆಲವು ಮೈಕ್ರೋಸಾಫ್ಟ್ ಒನ್‌ನೋಟ್ ಫೀಚರ್‌ಗಳಿಗೆ ವಿಂಡೋಸ್ ಡೆಸ್ಕ್‌ಟಾಪ್ ಸರ್ಚ್ 3.0, ವಿಂಡೋಸ್ ವೀಡಿಯೋ ಪ್ಲೇಯರ್9, ಮೈಕ್ರೋಫೋನ್, ವೀಡಿಯೋ ರೆಕಾರ್ಡಿಂಗ್, ಆಡಿಯೋ ಔಟ್‌ಪುಟ್, ಸಲಕರಣೆಗಳು ಅಗತ್ಯ.


ಈ ತಂತ್ರಾಂಶ 32 ಮತ್ತು 64 ಬಿಟ್ ಆವೃತ್ತಿಗಳನ್ನು ಹೊಂದಿದೆ.


 

Read More on....

This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.