Skip Ribbon Commands
Skip to main content

ಮೈಕ್ರೋಸಾಫ್ಟ್‌ನಿಂದ ಆಫೀಸ್ 365 ಘೋಷಣೆ


ಮೈಕ್ರೋಸಾಫ್ಟ್ ಆಫೀಸ್, ಶೇರ್‌ಪಾಯಿಂಟ್ ಆನ್‌ಲೈನ್, ಎಕ್ಸ್‌ಚೇಂಜ್ ಆನ್‌ಲೈನ್ ಮತ್ತು ಲಿಂಕ್ ಆನ್‌ಲೈನ್‌ಗಳು ಸದಾ ತಾಜಾ ಆಗಿರುವ ಒಂದು ಸಮೂಹ ಸೇವೆಯಾಗಿರುವ ಮೈಕ್ರೋಸಾಫ್ಟ್‌ನ ಮುಂದಿನ ತಲೆಮಾರಿನ ಉತ್ಪನ್ನ, ಮೈಕ್ರೋಸಾಫ್ಟ್ ಆಫೀಸ್ 365 ಅನ್ನು ಮೈಕ್ರೋಸಾಫ್ಟ್ ಕಾರ್ಪೋರೇಶನ್ ಘೋಷಿಸಿದೆ.


ಮಿಲಿಯಾನುಗಟ್ಟಲೆ ಸಂಸ್ಥೆಗಳು ಮೈಕ್ರೋಸಾಫ್ಟಿನ ಪ್ರಶಸ್ತಿ ವಿಜೇತ ಉತ್ಪನ್ನಗಳನ್ನು ಸಮೂಹದ ಮೂಲಕ ಪಡೆಯುವಂತೆ ಮತ್ತು ಬಳಸುವಂತೆ ಮಾಡಲು ಆಫೀಸ್ 365 ಅನುವು ಮಾಡುತ್ತದೆ.

ಆಫೀಸ್ 365ವಿನಿಂದಾಗಿ, ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಮಂದಿ ಒಟ್ಟಾಗಿ ಸಹಯೋಗಗೊಂಡು ಯಾವುದೇ ಸ್ಥಳದಿಂದ, ಯಾವುದೇ ಉಪಕರಣವನ್ನು ಬಳಸಿ ಅತ್ಯಂತ ಸುಲಭವಾಗಿ ಮತ್ತು ಸುಭದ್ರ ರೀತಿಯಿಂದ ಒಟ್ಟಿಗೆ ಕೆಲಸಮಾಡಬಹುದಾಗಿದೆ. ಇದರಂಗವಾಗಿ ಮಕ್ರೋಸಾಫ್ಟ್ 13 ರಾಷ್ಟ್ರಗಳು ಮತ್ತು ಪ್ರದೇಶಗಳಲ್ಲಿ ಆಫೀಸ್ 365ಗಾಗಿ ಒಂದು ಸೀಮಿತ ಬೇಟಾ ಕಾರ್ಯಕ್ರಮವನ್ನೂ ತೆರೆಯುತ್ತದೆ.

 

ಜನರು ಇಂದು ಬಳಸುತ್ತಿರುವ ಅತ್ಯಂತ ಜನಪ್ರಿಯ ಬ್ರೌಸರ್‌ಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳೊಂದಿಗೆ ಆಫೀಸ್ 365 ಕೆಲಸ ಮಾಡುವ ಕಾರಣ, ಜನರು ತಮ್ಮ ಕೆಲಸದ ವಿಧಾನವನ್ನು ಬದಲಾಯಿಸದೆಯೇ ಆಫೀಸ್ 365 ಗೊಂಚಲಿನತ್ತ ಚಲಿಸಬಹುದಾಗಿದೆ.

ಔದ್ಯಮಿಕವಾಗಿ ಮುಂಚೂಣಿಯಲ್ಲಿರುವ ವಾಣಿಜ್ಯ ಗೊಂಚಲು ಸೇವೆಗಳಾದ ಮೊದಲ ಬ್ರೌಸರ್ ಆಧಾರಿತ ಇ-ಮೇ‌ಲ್‌‌ನಿಂದ ಹಿಡಿದು ಇಂದಿನ ವ್ಯಾಪಾರ ಉತ್ಪನ್ನಗಳಾದ ಆನ್‌ಲೈನ್ ಸೂಟ್, ಮೈಕ್ರೋಸಾಫ್ಟ್ ಆಫೀಸ್ ಲೈವ್ ಸ್ಮಾಲ್ ಬಿಸ್ನೆಸ್ ಹಾಗೂ ಲೈವ್ ಅಟ್ ಎಜು (Live@edu)ಗಳ ತನಕದ ವಾಣಿಜ್ಯ ಗೊಂಚಲು ಸೇವೆಗಳ ವರ್ಷಾನುಗಟ್ಟಲೆಯ ಅನುಭವದ ಮೇಲೆ ಆಫೀಸ್ 365 ನಿರ್ಮಿಸಲಾಗಿದೆ.

 

ಆಫೀಸ್ 365ನಿಂದಾಗಿ ನಿಮ್ಮ ಸ್ಥಳೀಯ ಬೇಕರಿಗೆ ಮೊಟ್ಟಮೊದಲ ಬಾರಿಗೆ ಔದ್ಯಮಿಕ ಮಟ್ಟದ ತಂತ್ರಾಂಶ ಲಭಿಸುತ್ತದೆ. ಇದೇ ವೇಳೆ ಬಹುರಾಷ್ಟ್ರೀಯ ಫಾರ್ಮಾಸೂಟಿಕಲ್ ಕಂಪೆನಿಯೊಂದು ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಅತ್ಯಂತ ಸುಲಭ ವಿಧಾನದಲ್ಲಿ ತನ್ನ ವೆಚ್ಚಗಳನ್ನು ಕಡಿತಗೊಳಿಸಬಹುದಾಗಿದೆ. ನಾವು ಮತ್ತು ನಮ್ಮ ಪಾಲುದಾರರು ತಂತ್ರಜ್ಞಾನದ ಆಸ್ಥೆ ವಹಿಸುವ ಕಾರಣ ಜನತೆ ತಮ್ಮ ವ್ಯವಹಾರದ ಮೇಲೆ ಗಮನ ಕೇಂದ್ರೀಕರಿಸಬಹುದಾಗಿದೆ.

 

ಮೈಕ್ರೋಸಾಫ್ಟ್ ಅಸ್ತಿತ್ವದಲ್ಲಿರುವ ತನ್ನ ಗ್ರಾಹಕರೊಂದಿಗೆ ಅತ್ಯಂತ ನಿಕಟವಾಗಿ ಕೆಲಸ ಮಾಡುವ ಮೂಲಕ ಆಫೀಸ್ 365 ಅನ್ನು ಅಭಿವೃದ್ಧಿ ಪಡಿಸಿದೆ. ಇದರ ಫಲವಾಗಿ ಗ್ರಾಹಕರ ಅಗತ್ಯವನ್ನು ಬಹು ವಿಸ್ತಾರವಾಗಿ ಭರಿಸುವ ನಿಟ್ಟಿನಲ್ಲಿ ಒಂದು ಸಮೂಹ ಸೇವೆಯನ್ನು ವೃದ್ಧಿ ಪಡಿಸಿದೆ.

 

ಆಫೀಸ್ 365 ಮೂಲಕ ತಿಂಗಳೊಂದರ 6 ಡಾಲರ್ ಅಥವಾ 5.25 ಯೂರೋ ವೆಚ್ಚದಲ್ಲಿ ಕೇವಲ 25ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಯು 15 ನಿಮಿಷಕ್ಕಿಂತಲೂ ಕಮ್ಮಿ ಅವಧಿಯಲ್ಲಿ ಒಟ್ಟಾಗಿ ಆಫೀಸ್ ವೆಬ್ ಅಪ್ಲಿಕೇಶನ್‌ಗಳು, ಎಕ್ಸ್‌ಚೇಂಜ್ ಆನ್‌ಲೈನ್, ಶೇರ್‌ಪಾಯಿಂಟ್ ಆನ್‌ಲೈನ್ ಮತ್ತು ಒಂದು ಬಾಹ್ಯ ವೆಬ್‌ಸೈಟ್ ಒಟ್ಟಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಸಣ್ಣ ವ್ಯವಹಾರಗಳಿಗೆ ಆಫೀಸ್ 365 ಒಂದು ಸೂಕ್ತ ಪರಿಹಾರವಾಗಿದೆ.

 

ಹೆಚ್ಚಿನ ಗ್ರಾಹಕರು ಮತ್ತು ಹೆಚ್ಚು ವೈವಿಧ್ಯ ಕೆಲಸಗಾರರನ್ನು ತಲುಪುವ ಮೂಲಕ ಮತ್ತು ಹೆಚ್ಚು ಮಾಹಿತಿ ತಂತ್ರಜ್ಞಾನ ಅಗತ್ಯಗಳನ್ನು ಪೂರೈಸುವ ಮೂಲಕ ಆಫೀಸ್ 365 ಮೈಕ್ರೋಸಾಫ್ಟ್ ಹಾಗೂ ಅದರ ಪಾಲುದಾರರಿಗೆ ಹೆಚ್ಚುವರಿ ಅಭಿವೃದ್ಧಿ ಅವಕಾಶಗಳನ್ನು ಒದಗಿಸುತ್ತದೆ.

 

ಉತ್ಪನ್ನದ ಲಭ್ಯತೆ:


ಮುಂದಿನ ವರ್ಷದಲ್ಲಿ ಆಫೀಸ್ 365 ವಿಶ್ವಾದ್ಯಂತ ಲಭ್ಯವಾಗಲಿದೆ. ಮೈಕ್ರೋಸಾಫ್ಟ್ 13 ರಾಷ್ಟ್ರಗಳ ಸಾವಿರಾರು ಸಂಸ್ಥೆಗಳಲ್ಲಿ ಇದೀಗಾಗಲೇ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದೆ. ನಂತರದ ದಿನಗಳಲ್ಲಿ ಹೆಚ್ಚುವರಿ  ಸಂಸ್ಥೆಗಳನ್ನು ಸೇರಿಸಲು ಬೇಟಾವನ್ನು ವಿಸ್ತರಿಸಲಾಗುವುದು. ಮುಂದಿನ ವರ್ಷದಲ್ಲಿ ಇದು 40 ರಾಷ್ಟ್ರಗಳು ಹಾಗೂ ಪ್ರಾಂತ್ಯಗಳಲ್ಲಿ ಲಭ್ಯವಾಗಲಿದೆ.

 

ಮುಂದಿನ ವರ್ಷದ ಉತ್ತರಾರ್ಧದಲ್ಲಿ ಎಲ್ಲಾ ವಿಧದ ಮತ್ತು ಗಾತ್ರದ ಸಂಸ್ಥೆಗಳಿಗೆ ಮೈಕ್ರೋಸಾಫ್ಟಿನ ಸಂಪೂರ್ಣ ವಾಣಿಜ್ಯ ಉತ್ಪನ್ನದ ಅನುಭವವನ್ನು ಒದಗಿಸಲು, ಮೈಕ್ರೋಸಾಫ್ಟ್ ಡೈನಾಮಿಕ್ಸ್ ಸಿಆರ್ಎಂ ಆನ್‌ಲೈನ್ ಸೇರಿಸಿಕೊಳ್ಳಲು ಆಫೀಸ್ 365 ಅನ್ನು ವಿಸ್ತರಿಸಲಾಗುವುದು. ಇದೇ ವೇಳೆ ಶೈಕ್ಷಣಿಕ ಅನುಕೂಲಕ್ಕಾಗಿ ಆಫೀಸ್ 365 ಕೂಡ ಮುಂದಿನ ವರ್ಷದ ನಂತರದ ದಿನಗಳಲ್ಲಿ ಲಭ್ಯವಾಗಲಿದೆ. ಇದನ್ನು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಶಾಲಾ ಸಿಬ್ಬಂದಿಗಳ ಅನುಕೂಲಕ್ಕೆ ವಿನ್ಯಾಸಗೊಳಿಸಲಾಗಿದ್ದು, ತಕ್ಕಂತಹ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಮೈಕ್ರೋಸಾಫ್ಟ್ ಇದೀಗಾಗಲೇ http://www.Office365.com. ಅನಾವರಣಗೊಳಿಸಿದ್ದು, ಗ್ರಾಹಕರು ಆಸಕ್ತರು ಆಫೀಸ್ 365 ಬೇಟಾವನ್ನು ಹೊಕ್ಕು ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಅಥವಾ ಟ್ವಿಟ್ಟರ್ (Office365), ಫೇಸ್‌ಬುಕ್ (Office 365), ಆಫೀಸ್ 365 ಹೊಸ ಬ್ಲಾಗ್ http://community.office365.com ಮೂಲಕ ಹೊಚ್ಚಹೊಸ ಮಾಹಿತಿ ಪಡೆಯಬಹುದಾಗಿದೆ.

 

1975ರಲ್ಲಿ ಸ್ಥಾಪನೆಗೊಂಡಿರುವ ಮೈಕ್ರೋಸಾಫ್ಟ್ (ನಸ್ದಕ್‌ನಲ್ಲಿ “MSFT”) ವಿಶ್ವಾದ್ಯಂತದಲ್ಲಿ ತಂತ್ರಾಂಶ ಸೇವೆ ಮತ್ತು ಸೊಲ್ಯೂಶನ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇವುಗಳು ವಾಣಿಜ್ಯೋದ್ಯಮಗಳಿಗೆ ತಮ್ಮ ಸಂಪೂರ್ಣ ಶಕ್ತಿಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತ

Read More on....

This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.