Skip Ribbon Commands
Skip to main content

Office 2007


ಆಫೀಸ್ 2007 ಬಳಸಿ ಡಾಕ್ಯುಮೆಂಟನ್ನು ವೃತ್ತಿಪರವಾಗಿಸಿ


ಆಫೀಸ್ 2007 ಒಂದು ಪ್ರಬಲ ಪ್ರೋಗ್ರಾಂ ಆಗಿದೆ. ಇದರ ಬಳಕೆಯೊಂದಿಗೆ ಸಮಗ್ರ, ಸುಂದರ ದಸ್ತಾವೇಜನ್ನು ಕ್ಷಿಪ್ರವಾಗಿ ಸಿದ್ಧಪಡಿಸಬಹುದಾಗಿದೆ. ಇದು ಒದಗಿಸುವ ಪೂರ್ವ ವಿನ್ಯಾಸಿತ ಪರಿಕರಗಳೇ ಇದರ ಬ್ಯೂಟಿ .

 

 ಸರಳ ಬಳಕೆಯ ಮೈಕ್ರೋಸಾಫ್ಟ್ ಆಫೀಸ್ ಫ್ಲೂಯೆಂಟ್ ಯೂಸರ್ ಇಂಟರ್‌ಫೇಸ್‌ನೊಂದಿಗೆ ಬರಹದ ಪರಿಕರಗಳ ಸಮಗ್ರ ಗೊಂಚಲನ್ನು ಸಂಯೋಜಿಸುವ ಮೂಲಕ ಇದು ದಾಖಲೆಗಳನ್ನು ಸೃಷ್ಟಿಸುವ ಮತ್ತು ಹಂಚಿಕೊಳ್ಳುವ ಸಾಮರ್ಥ್ಯ ಒದಗಿಸುತ್ತದೆ.

 

ಹಿಂದೆಂದಿಗಿಂತಲೂ ವೇಗವಾಗಿ, ವೃತ್ತಿಪರವಾಗಿ ತೋರುವಂತಹ ವಿಷಯದ ಸೃಷ್ಟಿಗೆ ಆಫೀಸ್ ವರ್ಡ್ 2007 ಸಹಾಯ ಮಾಡುತ್ತದೆ. ಇದರಲ್ಲಿ ಲಭ್ಯವಿರುವ ಹೊಸ ಪರಿಕರಗಳ ಬಳಕೆಯೊಂದಿಗೆ ನೀವು ತ್ವರಿತವಾಗಿ ಪೂರ್ವವಿವರಿತ ಭಾಗಗಳು ಮತ್ತು ಶೈಲಿಯೊಂದಿಗೆ ಅತ್ಯಂತ ತ್ವರಿತವಾಗಿ ದಸ್ತಾವೇಜುಗಳನ್ನು ರಚಿಸಬಹುದು ಮತ್ತು ವರ್ಡ್‌ನೊಳಗಿಂದಲೇ ನಿಮ್ಮ ಬ್ಲಾಗ್ ಲೇಖನವನ್ನು ಪ್ರಕಟಿಸಬಹುದಾಗಿದೆ.

 

ಮೈಕ್ರೋಸಾಫ್ಟ್ ಆಫೀಸ್ ಶೇರ್ ಪಾಯಿಂಟ್ ಸರ್ವರ್ 2007 ಮತ್ತು ಹೊಸ ಎಕ್ಸ್ಎಂಎಲ್ ಆಧಾರಿತ ಫೈಲ್ ವಿನ್ಯಾಸಗಳು ಸಮಗ್ರ ದಾಖಲೆಗಳ ನಿಭಾವಣಾ ಪರಿಹಾರಕ್ಕೆ ಆಫೀಸ್ ವರ್ಡ್ 2007 ಒಂದು ಪರಿಪಕ್ವವಾದ ಆಯ್ಕೆಯಾಗಿದೆ.

 

ಸ್ಮಾರ್ಟ್ ಆರ್ಟ್ 
ಸ್ಮಾರ್ಟ್ ಆರ್ಟ್ ರೇಖಾಚಿತ್ರಗಳು ಮತ್ತು ಹೊಸ ನಕ್ಷೆಯ ಇಂಜಿನ್ ನಿಮ್ ದಸ್ತಾವೇಜುಗಳು ವೃತ್ತಿಪರ ನೋಟವನ್ನು ಬಿಂಬಿಸಲು ಸಹಾಯ ಮಾಡುತ್ತದೆ. ಮೈಕ್ರೋಸಾಫ್ಟ್ ಆಫೀಸ್ ಎಕ್ಸೆಲ್ 2007 ಸ್ಪ್ರೆಡ್‌ಶೀಟ್ ಸಾಫ್ಟ್‌ವೇರ್ ಮತ್ತು ಮೈಕ್ರೋಸಾಫ್ಟ್ ಆಫೀಸ್ ಪವರ್‌ಪಾಯಿಂಟ್ 2007ರ ಪ್ರಸ್ತುತಿ ಗ್ರಾಫಿಕ್ಸ್ ಪ್ರೋಗ್ರಾಂಗಳೊಂದಿಗೆ ರೇಖಾಚಿತ್ರಗಳು ಮತ್ತು ನಕ್ಷೆಗಳ ಹಂಚುವಿಕೆಯು ನಿಮ್ಮ ಡಾಕ್ಯುಮೆಂಟುಗಳು, ಸ್ಪ್ರೆಡ್‌ಶೀಟ್‌ಗಳು ಮತ್ತು ಪ್ರಸ್ತುತಿಗಳಿಗೆ ಒಂದೇ ತೆರನಾಗ ನಿಶ್ಚಲ ನೋಟವನ್ನು ಖಚಿತಪಡಿಸುತ್ತದೆ.

 

ಈಕ್ವೇಶನ್ ಬಿಲ್ಡರ್
ಈಕ್ವೇಶನ್ ಬಿಲ್ಡರ್ ನಿಮಗೆ ಎಡಿಟ್ ಮಾಡಲು ಅವಕಾಶವಿರುವ, ನೈಜ ಗಣಿತ ಚಿಹ್ನೆಗಳು, ಪೂರ್ವರಚಿತ ಸಮೀಕರಣಗಳು ಹಾಗೂ ಸ್ವಯಂಚಾಲಿತ ವಿನ್ಯಾಸಗಳನ್ನು ಬಳಸುವುದರೊಂದಿಗೆ, ಇನ್-ಲೈನ್ ಗಣಿತ ಸಮೀಕರಣಗಳನ್ನು ರಚಿಸಲು ಸಹಾಯ ಮಾಡುತ್ತದೆ. ಸೈಟೇಶನ್ ಮ್ಯಾನೇಜರ್ ಮತ್ತು ರೆಫರೆನ್ಸ್ ಬಿಲ್ಡರ್‌ಗಳು ನಿಮಗೆ ರೆಫರೆನ್ಸ್‌ಗಳು, ಅಡಿಬರಹಗಳು, ಮುಕ್ತಾಯ ಬರಹಗಳು, ವಿಷಯದ ಕೋಷ್ಟಕಗಳು, ಚಿತ್ರಗಳ ಕೋಷ್ಟಕಗಳು, ಅಥವಾ ಅಧಿಕೃತ ಕೋಷ್ಟಕಗಳನ್ನು ಸೇರಿಸುವ ಸಾಮರ್ಥ್ಯವನ್ನು ನೀಡುತ್ತದೆ. ಆಫೀಸ್ ಫ್ಲೂಯೆಂಟ್ ಯೂಸರ್ ಇಂಟರ್‌ಫೇಸ್ ನಿಮ್ಮ ಅವಶ್ಯಕತೆಗೆ ತಕ್ಕಂತೆ ಸ್ಪಷ್ಟ ಹಾಗೂ ಸಂಘಟಿತ ಮಾದರಿಯಲ್ಲಿ ಪರಿಕರಗಳನ್ನು ಪ್ರಸ್ತುತ ಪಡಿಸುತ್ತದೆ. ಲೈವ್ ವಿಶುವಲ್ ಪ್ರೀವ್ಯೂವ್‌ಗಳು, ಪ್ರೀಡಿಫೈನ್ಡ್ ಸ್ಟೈಲ್ ಗ್ಯಾಲರಿಗಳು, ಟೇಬಲ್ ಫಾರ್ಮಾಟ್‌ಗಳು ಮತ್ತು ಇತರ ವಿಷಯಗಳು ಆಫೀಸ್ ವರ್ಡ್‌ನಿಂದ ಇನ್ನಷ್ಟನ್ನು ಪಡೆಯಲು ಸಹಾಯ ಮಾಡುತ್ತವೆ.

 

ಬ್ಲಾಕ್‌ಗಳನ್ನು ಬಿಲ್ಡ್ ಮಾಡುವುದು 
ನಿಮ್ಮ ದಸ್ತಾವೇಜುಗಳಿಗೆ ಆಗಾಗ್ಗೆ ಬಳಸುವ ವಿಷಯವನ್ನು ಸೇರಿಸಲು ಬಿಲ್ಡಿಂಗ್ ಬ್ಲಾಕ್‌ಗಳನ್ನು ಆಫೀಸ್ ವರ್ಡ್ 2007 ಪರಿಚಯಿಸುತ್ತದೆ. ಕವರ್ ಪೇಜ್‌ಗಳು, ಪೂರ್ಣ ಆವರಣಗಳು, ತಲೆಬರಹಗಳು ಮತ್ತು ಅಡಿಬರಹಗಳ ಪೂರ್ವವಿವರಿತ ಗ್ಯಾಲರಿಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ದಸ್ತಾವೇಜುಗಳು ಹೆಚ್ಚು ಸುಂದರವಾಗಿ, ಸ್ಪಷ್ಟವಾಗಿ ಮತ್ತು ವೃತ್ತಿಪರವಾಗಿ ಕಾಣುವಂತೆ ಮಾಡಿ. ಕಾನೂನಿ ನಿರಾಕರಣಾ ಪಠ್ಯ ಅಥವಾ ಪುನರಪಿ ಬಳಕೆಯ ಕಸ್ಟಂ ಟೆಕ್ಸ್ಟ್ ವಿಷಯಗಳ ಸೇರ್ಪಡೆಗಾಗಿ ನೀವು ನಿಮ್ಮದೇ ಬಿಲ್ಡಿಂಗ್ ಬ್ಲಾಕ್‌ಗಳನ್ನು ಸಹ ರಚಿಸುವಂತೇ ವಿನ್ಯಾಸಗೊಳಿಸಲಾಗಿದೆ.

ಚಾರ್ಟಿಂಗ್ 
ನ್ಯೂ ಚಾರ್ಟಿಂಗ್ ಮತ್ತು  ಡಯಗ್ರಾಮಿಂಗ್ ಬಳಕೆಯ ಮೂಲಕ ನೀವು ವೃತ್ತಿಪರವಾಗಿ ತೋರುವಂತಹ ಗ್ರಾಫಿಕ್‌ಗಳನ್ನು ತಯಾರಿಸಬಹುದು. ಇದು ನಿಮ್ಮ ಡಾಕ್ಯುಮೆಂಟು ಇನ್ನಷ್ಟು ಪರಿಣಾಮಕಾರಿಯಾಗಿ ತೋರುವಂತೆ ಮಾಡುತ್ತದೆ. ಚಾರ್ಟಿಂಗ್‌ನಲ್ಲಿ 3-ಡಿ ಆಕಾರಗಳು, ಪಾರದರ್ಶಕತೆ, ನೆರಳು ಪ್ರತಿಫಲನ ಮುಂತಾದವು ಸೇರಿವೆ.
ಲಭ್ಯವಿರುವ ನಕ್ಷೆಯ ಶೋಧನೆಯನ್ನು ಹೊಸ ಇಂಟರ್‌ಫೇಸ್ ಸರಳವಾಗಿರಿಸುತ್ತದೆ. ಇದರಿಂದಾಗಿ ನೀವು ನಿಮ್ಮ ದತ್ತಾಂಶಗಳಿಗನುಸಾರವಾಗಿ ಸೂಕ್ತವಾದ ನಕ್ಷೆಯನ್ನು ಆಯ್ದುಕೊಂಡು ತಯಾರಿಸುವುದು ಈಗ ಸುಲಭ. ಪೂರ್ವ ವಿನ್ಯಾಸಗೊಳಿತ ಹಲವಾರು ನಕ್ಷೆಗಳ ಶೈಲಿ ಮತ್ತು ವಿನ್ಯಾಸಗಳನ್ನು ನೀಡಲಾಗಿದ್ದು, ಕ್ಷಣದಲ್ಲೇ ಸುಂದರವಾಗಿರುವ ವಿನ್ಯಾಸವನ್ನು ಆಯ್ದುಕೊಂಡು ನಕಾಶೆಯಲ್ಲಿ ಅಳವಡಿಸಬೇಕಿರುವ ವಿವರಣೆಗಳನ್ನು ಸುಲಭವಾಗಿ ತುಂಬಿಸಬಹುದಾಗಿದೆ.
ಕ್ವಿಕ್ ಸ್ಟೈಲ್ಸ್ ಮತ್ತು ಡಾಕ್ಯುಮೆಂಟ್ ಥೀಮ್ ಬಳಸುವ ಮೂಲಕ ನೀವು ಪಠ್ಯ, ಟೇಬಲ್‌ಗಳು ಮತ್ತು ಗ್ರಾಫಿಕ್‌ಗಳ ತೋರುವಿಕೆಯನ್ನು ಇಡಿಯ ದಸ್ತಾವೇಜಿನಾದ್ಯಂತ ನಿಮ್ಮ ಆದ್ಯತೆಗೆ ಅಥವಾ ಬಣ್ಣಕ್ಕೆ ಬೇಕಂತೆ ಬದಲಿಸಬಹುದಾಗಿದೆ.

 

ಶೇರ್ ಪಾಯಿಂಟ್  
ಆಫೀಸ್ ವರ್ಡ್ 2007 ಮೂಲಕ, ನೀವು ಡಾಕ್ಯುಮೆಂಟ್‌ಗಳನ್ನು ನಿಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಬಹುದು ಮತ್ತು ಪ್ರತಿಕ್ರಿಯೆಗಳನ್ನು ಸಂಗ್ರಹಿಸಬಹುದು. ಮತ್ತು ನಿಮ್ಮ ಡಾಕ್ಯುಮೆಂಟ್‌ಗಳ ಬೇಡದ ಹಂಚುವಿಕೆಯನ್ನು ನೀವು ತಡೆಯಬಹುದು ಮತ್ತು ಖಾಸಗಿ ಪ್ರತಿಕ್ರಿಯೆಗಳು ಮತ್ತು ಅವಿತಿರುವ ಪಠ್ಯಗಳು ಪ್ರಕಟಣೆಗೆ ಮುಂಚಿತವಾಗಿ ತೆಗೆಯಲ್ಪಟ್ಟಿಗೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಪ್ರಮುಖ ದಾಖಲೆಗಳಿಗೆ ಪ್ರತಿಕ್ರಿಯೆ ಒದಗಿಸುವುದು ಸಹ ಈಗ ಸುಲಭ. ಆಫೀಸ್ ಶೇರ್ ಪಾಯಿಂಟ್ ಸರ್ವರ್ 2007ನಲ್ಲಿ ಕೆಲಸ ಮಾಡುವ ವೇಳೆ ವಿಮರ್ಷೆಯಲ್ಲಿ ನೀವೀಗ ಪಾಲ್ಗೊಳ್ಳಬಹುದು. ಮೂರು ಕಿಂಡಿಗಳ ವಿಮರ್ಷಾ ಪಟ್ಟಿಯು ವರ್ಡ್ ಡಾಕ್ಯುಮೆಂಟೊಂದರ ಎರಡು ಆವೃತ್ತಿಗಳನ್ನು ತುಲನೆ ಮಾಡಲು ಮತ್ತು ಸಂಯೋಜಿಸಲು ಸುಲಭವಾಗಿಸುತ್ತದೆ. ಇದರಿಂದಾಗಿ ವಿಮರ್ಷಕರೊಂದಿಗಿನ ವ್ಯತ್ಯಾಸಗಳನ್ನು ಪರಿಶೀಲಿಸುವಾಗ ನೀವು ಅತ್ಯಂತ ಸೂಕ್ಷ್ಮ ಬದಲಾವಣೆಗಳನ್ನು ಕೂಡ ಪತ್ತೆಮಾಡಬಹುದು.

 

ಡಿಜಿಟಲ್ ಸಿಗ್ನೇಚರ್ 
ದಸ್ತಾವೇಜು ಒಂದು ಪ್ರಕಟವಾದ ಬಳಿಕ ಅದರಲ್ಲಿನ ವಿಷಯವನ್ನು ಬದಲಿಸಿಲ್ಲ ಎಂಬುದು ಇತರರಿಗೆ ಖಾತರಿಯಾಗಲು ಡಿಜಿಟಲ್ ಸಹಿಯನ್ನು ಸೇರಿಸಬಹುದಾಗಿದೆ. ಇತರ ವರ್ಡ್ ಬಳಕೆದಾರರಿಗೂ ಸಹಿ ಮಾಡಲು ಅನುಕೂಲವಾಗುವಂತೆ ಅಥವಾ ಡಾಕ್ಯುಮೆಂಟ್ ಒಳಗಡೆಯೇ ಕಾಣುವಂತಹ ಡಿಜಿಟಲ್ ಸಹಿಗಾಗಿ ಸಹಿ ಗೆರೆಯನ್ನು ಸೇರಿಸಬಹುದಾಗಿದೆ. ಆಫೀಸ್ 2007ನ್ನು ಎಂಜಾಯ್ ಮಾಡಿ

Read More on....

This site uses Unicode and Open Type fonts for Indic Languages. Powered by Microsoft SharePoint 2013.
©2016 Microsoft Corporation. All rights reserved.