Skip Ribbon Commands
Skip to main content

Microsoft Launches Internet Explorer 9 Beta


ಮೈಕ್ರೋಸಾಫ್ಟ್‌ನಿಂದ ಇಂಟರ್‌ನೆಟ್ ಎಕ್ಸ್‌ಪ್ಲೋರರ್ 9 ಬೀಟಾ ಆವೃತ್ತಿ ಅನಾವರಣ


ಮೈಕ್ರೋಸಾಫ್ಟ್ ಸಂಸ್ಥೆ ಇಂಟರ್‌ನೆಟ್ ಎಕ್ಸ್‌ಪ್ಲೋರರ್ 9ರ ಬೀಟಾ ಆವೃತ್ತಿಯನ್ನು ಹೊರತಂದಿದೆ. ಬಳಕೆದಾರರಿಗೆ ಸೈಟ್ ಕೇಂದ್ರಿತ ಬ್ರೌಸಿಂಗ್ ಚಿತ್ರಣವನ್ನು ಅದು ಪರಿಚಯಿಸಿದೆ ಮಾತ್ರವಲ್ಲ ಇನ್ನಷ್ಟು ಸುಂದರ ವೆಬ್‌ನ ಭರವಸೆ ನೀಡಿದೆ.


ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಈ ಉತ್ಪನ್ನದ ಬಿಡುಗಡೆ ಕಾರ್ಯಕ್ರಮದಲ್ಲಿ ಮೈಕ್ರೋಸಾಫ್ಟ್ ಐಇ9 ಬೀಟಾ ಈಗ 33 ಭಾಷೆಗಳಲ್ಲಿ ವಿಶ್ವವ್ಯಾಪಿಯಾಗಿ ಡೌನ್‌ಲೋಡ್‌ಗೆ ಲಭ್ಯ ಎಂದು ಪ್ರಕಟಿಸಿತು. ಸರಳವಾದ ಬಳಕೆದಾರ ಇಂಟರ್‌ಫೇಸ್‌ನೊಂದಿಗೆ ಸರ್ವಾಂಗೀಣ ಕ್ಷಿಪ್ರ ಕಾರ್ಯಕ್ಷಮತೆಯ ಈ ಹೊಸ ಬ್ರೌಸರನ್ನು ಹಿಂಬದಿ ಇರುವಂತೆ ಹಾಗೂ ವೈಬ್‌ಸೈಟ್‌ಗಳ ಸೌಂದರ್ಯ ಮುಂಪುಟದಲ್ಲಿ ರಾರಾಜಿಸುವಂತೆ ತಾಂತ್ರಿಕ ಆವಿಷ್ಕಾರ ಮಾಡಿರುವ ಮೈಕ್ರೋಸಾಫ್ಟ್ ಇದನ್ನು ಬಳಸುವ ಬಳಕೆದಾರರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದೆ ಎನ್ನುತ್ತಾರೆ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ವಿಭಾಗದ ಮೈಕ್ರೋಸಾಫ್ಟ್ ಕಾರ್ಪೋರೇಟ್ ಉಪಾಧ್ಯಾಕ್ಷ ಡೀನ್ ಹಚಾಮೋವಿಚ್.


ಐಇ9 ನಿಮ್ಮನ್ನು ಮತ್ತು ನಿಮ್ಮ ಸೈಟನ್ನು ಬ್ರೌಸರ್ ಎಕ್ಸ್‌ಪೀರಿಯನ್ಸ್‌ನ ಕೇಂದ್ರ ಭಾಗಕ್ಕೆ ಕೊಂಡೊಯ್ಯುತ್ತದೆ ಎನ್ನುವುದು ಬಳಕೆದಾರರಿಗೆ ಅವರ ಭರವಸೆ.


ತಂತ್ರಜ್ಞಾನಪ್ರಿಯ ಬಳಕೆದಾರರು ಐಇ9ರ ಬೀಟಾ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಂಡು ವೆಬ್‌ನ ಕೆಲವು ಅತ್ಯಂತ ಜನಪ್ರಿಯ ತಾಣಗಳಲ್ಲಿ ಹೊಸ ಬ್ರೌಸಿಂಗ್ ಅನುಭವದ ಪರೀಕ್ಷಾ ಚಾಲನೆ ಮಾಡಿ ನೋಡಬಹುದಾಗಿದೆ. ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ 'ಬ್ಯೂಟಿ ಆಫ್ ದ ವೆಬ್' ಕಾರ್ಯಕ್ರಮದಲ್ಲಿ 70 ಅತ್ಯುನ್ನತ ಜಾಲತಾಣಗಳು ಮತ್ತು ಜಾಗತಿಕ ಬ್ರಾಂಡ್‌ಗಳ ಹೊಸ ತಾಣಗಳು ಮತ್ತು ವೆಬ್ ಆಧಾರಿತ ಸಲಕರಣೆ ಬಳಕೆಗಳನ್ನು ಪ್ರದರ್ಶಿಸಿದ್ದವು. ಫೇಸ್‌ಬುಕ್, ಟ್ವಿಟರ್, ಮೈಸ್ಪೇಸ್ ಮತ್ತು ಲಿಂಕ್ಡ್‌ಇನ್ ತಾಣಗಳು ಐಇ9 ಒದಗಿಸುವ ಹೊಸ ಸಾಮರ್ಥ್ಯದ ಲಾಭ ಪಡೆಯಲು ಸೂಕ್ತ ವೆಬ್ ಆಧಾರಿತ ಅಪ್ಲಿಕೇಶನ್‌ಗಳು ಒಳಗೊಂಡಿರುವುದನ್ನು ಪ್ರದರ್ಶಿಸಿದವು. ಕ್ವಿಕ್‌ಸಿಲ್ವರ್, ರೆಡ್ ಬುಲ್, ಲಿವ್ ಸ್ಟ್ರಾಂಗ್ ಮತ್ತು ಅಮೆಜಾನ್‌ನಂತಹ ಜಾಗತಿಕ ಬ್ರಾಂಡ್‌ಗಳೂ ಸಹ ಐಇ9ರ ಸಾಮರ್ಥ್ಯದ ಬಳಕೆಯಿಂದಾಗುವ ಉಪಯೋಗದ  ಪ್ರದರ್ಶನ ನೀಡಿದವು. ಇವುಗಳು ಕಂಪ್ಯೂಟರ್‌ನ ಸರ್ವಾಂಗೀಣ ಶಕ್ತಿ ಮತ್ತು ಎಚ್‌ಟಿಎಂಎಲ್5ನಂತಹ ಆಧುನಿಕ ಮಾನಕಗಳ ಶ್ರೀಮಂತ ಅನುಭವವನ್ನು ಪಡೆಯಲು ಮತ್ತು ತಾಣಗಳನ್ನು ಯಾವುದೇ ತೊಡಕಿಲ್ಲದಂತೆ ಸಂಯೋಜಿಸುವ ಸಾಮರ್ಥ್ಯವನ್ನು ಇದು ನೀಡುತ್ತದೆ.


ಇವೆಲ್ಲವನ್ನೂ ಜೋಡಿಸಿದಾಗ ಇಂದು ಸುಮಾರು 800 ಮಿಲಿಯನ್‌ಗೂ ಅಧಿಕ ಜಾಲತಾಣ ವೀಕ್ಷಕರು ಅಥವಾ ಮೂರನೇ ಎರಡರಷ್ಟು ಸಕ್ರಿಯ ಅಂತರ್ಜಾಲ ಬಳಕೆದಾರರು ವಿಂಡೋಸ್ ವೇದಿಕೆಯಲ್ಲಿ ಉತ್ತಮ ವೆಬ್ ಅನುಭವವನ್ನು ಐಇ9ರಿಂದ ಪಡೆಯಬಲ್ಲರು ಎನ್ನುತ್ತಾರೆ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ ಹಿರಿಯ ನಿರ್ದೇಶಕ  ರಯಾನ್‌ಗಾವಿನ್.


ಐಇ 9ರ ಹೆಚ್ಚುಗಾರಿಕೆ ಎಂದರೆ ಅದು ಅತ್ಯಂತ ವೇಗದಲ್ಲಿ ಕಾರ್ಯಾಚರಿಸುತ್ತದೆ. ಐಇ8ಕ್ಕಿಂತ ಹೆಚ್ಚಿನ ವೇಗ ಹೊಂದಿರುವ ಐಇ9 ಪರ್ಸನಲ್ ಕಂಪ್ಯೂಟರ್ ಬಳಕೆದಾರನ ಒಟ್ಟಾರೆ ಅನುಭವವನ್ನು ಸುಧಾರಿಸುತ್ತದೆ.


ವಿಂಡೋಸ್ 7 ಬಳಕೆಯಲ್ಲಿ ಪರಿಚಿತವಾಗಿರುವ ಹಲವು ಅಂಶಗಳಿಗೆ ಐಇ9 ಪೂರಕವಾಗಿದೆ. ಇದು ಬ್ರೌಸರ್‌ಗೆ ಬದಲಾಗಿ ವಿಷಯಗಳಿಗೆ ಹೆಚ್ಚು ಆದ್ಯತೆಯನ್ನು ಕೊಡುತ್ತದೆ. ಬ್ರೌಸರನ್ನು ಮೊದಲಿಗೆ ತೆಗೆಯದೆಯೇ ವಿಂಡೋಸ್ 7ನ ಟಾಸ್ಕ್‌ಬಾರ್‌ನ ಮೂಲಕ ಗ್ರಾಹಕರು ತಮ್ಮ ಮೆಚ್ಚಿನ ತಾಣಗಳಿಗೆ ಹೋಗಬಹುದು. ಜಂಪ್ ಲಿಸ್ಟ್‌ಗಳು ಬಳಕೆದಾರನಿಗೆ ಸಾಮಾನ್ಯ ಕೆಲಸಗಳಾದ ಇಮೇಲ್ ರವಾನೆ, ಹಾಡು ಕೇಳುವುದು, ಬ್ರೇಕಿಂಗ್ ಸುದ್ದಿಗಳ ಮೇಲೆ ನಿಗಾ ಇಡುವಿಕೆಗೆ ತ್ವರಿತವಾಗಿ ಸ್ಪಂದಿಸುತ್ತವೆ.


ವಿಂಡೋಸ್ 7 ವೇದಿಕೆಯಲ್ಲಿ ಐಇ 9 ಸುಸೂತ್ರವಾಗಿ ಮತ್ತು ತ್ವರಿತವಾಗಿ ಕೆಲಸ ನಿರ್ವಹಿಸುವಂತೆ ಮಾಡುವುದು ಐಇ ತಂಡದ ಮುಖ್ಯ ಗುರಿಯಾಗಿತ್ತು. ಬಳಕೆದಾರರಿಗೆ ಅವರ ವಿಂಡೋಸ್ ಅನುಭವವನ್ನು ಹೆಚ್ಚು ಆಕರ್ಷಕಗೊಳಿಸುವುದು ನಮ್ಮ ಜವಾಬ್ದಾರಿಯಾಗಿತ್ತು ಎನ್ನುತ್ತಾರೆ ಗಾವಿನ್.


ಡೆವಲಪರ್‌ಗಳನ್ನು ಮೈಕ್ರೋಸಾಫ್ಟ್ ಉತ್ತೇಜಿಸುತ್ತದೆ. ಅವರಿಗಾಗಿ ಐಇ9ರಲ್ಲಿ ಹೊಸತೇನಿದೆ ನೋಡಿ ಎಂದು ಪ್ರಚಾರ ಮಾಡುತ್ತಿದೆ. ಬ್ರೌಸಿಂಗ್‌ನ ಸಮಗ್ರ ಕಾರ್ಯನಿರ್ವಹಣೆಯನ್ನು ಈ ತಂತ್ರಜ್ಞಾನ ಸುಧಾರಿಸುತ್ತದೆ ಎನ್ನುತ್ತಿದೆ. ಐಇ9ರೊಳಗೆ ಅಳವಡಿಕೆಯಾಗಿರುವ ವಿಂಡೋಸ್ 7ರ ಅಂಶಗಳು ತಾಣಗಳಿಗೆ ಭೇಟಿ ನೀಡುವ ಜನರಿಗೆ ಉತ್ತಮ ಅನುಭವ ನೀಡುವಂತೆ ಆಕರ್ಷಕಗೊಳಿಸಲು ಡೆವಲಪರ್‌ಗಳಿಗೆ ಅನುಕೂಲ ಮಾಡಿಕೊಡುತ್ತವೆ.


2009ರ ಮಾರ್ಚ್‌ನಲ್ಲಿ ಇಂಟರ್ನೆಟ್ ಎಕ್ಸ್‌ಪ್ಲೋರರ್ 8 ಬಳಕೆಗೆ ಲಭ್ಯವಾಗುತ್ತಲೇ ಮೈಕ್ರೋಸಾಫ್ಟ್ ಐಇ9 ಪಾಲುದಾರರು ತಮ್ಮ ಹೊಸ ಉತ್ಪನ್ನದ ಬಗ್ಗೆ ಮಾಹಿತಿ ಹರಿಬಿಡತೊಡಗಿದ್ದರು. ಆಗ ಬ್ರೌಸರ್ ಸ್ಪರ್ಧೆ ಕಾವೇರತೊಡಗಿತ್ತು ಮತ್ತು ಮೈಕ್ರೋಸಾಫ್ಟ್‌ನ ಬ್ರೌಸರ್ ಮಾರುಕಟ್ಟೆಯ ಪಾಲು ಕುಸಿಯತೊಡಗಿತ್ತು. ಇದು ಹೊಸ ಸಂಶೋಧನೆಗೆ ಹಾದಿಯಾಯಿತು.


ಐಇ9 ಕೆಲ ಮೂಲ ಉದ್ದೇಶಗಳನ್ನು ಹೊಂದಿದೆ. ಮೊದಲನೆಯದಾಗಿ ಅದು ಅತ್ಯಂತ ವೇಗಿಯಾಗಿದೆ. ಎರಡನೆಯದಾಗಿ ವಿಂಡೋಸ್ ಮತ್ತು ಬ್ರೌಸಿಂಗ್ ಅನುಭವವನ್ನು ಅದು ಸಮ್ಮಿಳಿತಗೊಳಿಸಿದೆ. ಮೂರನೆಯದಾಗಿ ಸುರಕ್ಷೆ, ವಿಶ್ವಾಸಾರ್ಹತೆ, ಮತ್ತು ಖಾಸಗೀತನಕ್ಕೆ ಇದು ಗರಿಷ್ಠ ಆದ್ಯತೆ ನೀಡಿದೆ. ಐಇ8ರ ಯಶಸ್ಸಿನ ಬೆನ್ನೇರಿಯೇ ಹೊಸ ಬ್ರೌಸರ್ ನಿರ್ಮಾಣಗೊಂಡಿದೆ.

Read More on....

This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.