Skip Ribbon Commands
Skip to main content
 

Internet Explorer 8

 

ಇಂಟರ್‌ನೆಟ್ ಎಕ್ಸ್‌ಪ್ಲೋರರ್ 8: ವೆಬ್ ಹುಡುಕಾಟವೀಗ ಇನ್ನಷ್ಟು ಸುಲಭ!!

ಇಂಟರ್ನೆಟ್ ಎಕ್ಸ್‌ಪ್ಲೋರರ್‌ನಿಂದಾಗಿ ಅಂತರ್ಜಾಲದಲ್ಲಿ ವೆಬ್ ಜಾಲಾಟವೀಗ ಅತ್ಯಂತ ಸುಲಭ ಹಾಗೂ ತ್ವರಿತ. ವೆಬ್ ಹುಡುಕಾಟ ಅಥವಾ ವೆಬ್ ಬ್ರೌಸಿಂಗನ್ನು ಒಟ್ಟಾರಿಯಾಗಿ ತ್ವರಿತ ಗೊಳಿಸಿರುವುದು ಮತ್ತು ಮತ್ತಷ್ಟು ಪ್ರತಿಕ್ರಿಯಾತ್ಮಕಗೊಳಿಸಿರುವ ಸಂಶೋಧನಾತ್ಮಕ ಸುಧಾರಣೆ ಇದಾಗಿದೆ.  ಬಳಕೆದಾರರು ತಾವ್ಯಾಕೆ ಇಂಟರ್ನೆಟ್ ಎಕ್ಸ್‌ಪ್ಲೋರರ್‌ 6ರಿಂದ 8ಕ್ಕೆ ಬದಲಾವಣೆಗೊಂಡಿಲ್ಲ ಎಂಬುದಾಗಿ ಸ್ವಯಂ ಅಚ್ಚರಿಪಡುವಂತಹ ಒಂದು ಬೆಳವಣಿಗೆ ಇದಾಗಿದೆ.

 

ವಿಂಡೋ ತೆರೆಯುವ ಅವಶ್ಯಕತೆ ಇಲ್ಲ

ಇಂಟರ್‌ನೆಟ್ ಎಕ್ಸ್‌ಪ್ಲೋರರ್ 8ನ್ನು ಬಳಸಲು ನೀವು ಆರಂಭಿಸಿದರೆ ಪ್ರತೀ ಬಾರಿಯೂ ಹೊಸದಾಗಿ ವಿಂಡೋ ತೆರೆಯುವ ಅವಶ್ಯಕತೆ ಇರುವುದಿಲ್ಲ. ಆಕ್ಸಿಲೇಟರ್ ಬಳಸಿ ಯಾವುದೇ ಪುಟಗಳೂ ಬಿಟ್ಟುಹೋಗದಂತೆ ಇದರ ಮೂಲಕ ಮಾಹಿತಿ ಪಡೆಯಲು ಸಾಧ್ಯ.

ಹೊಸಪುಟಗಳಿಗೆ ನಾವು ಹೋಗುವಾಗ ಪ್ರತೀಸರ್ತಿಯೂ ವಿಂಡೋ ತೆರೆಯುವುದು ತ್ರಾಸದಾಯಕ ಹಾಗೂ ಕಿರಿಕಿರಿಯ ವಿಚಾರ. ಆದರೆ ಇಂಟರ್‌ನೆಟ್ ಎಕ್ಸ್‌ಪ್ಲೋರರ್ 8ರ ಮೂಲಕ ಒಂದೇ ಬ್ರೌಸರ್‌ನಲ್ಲಿ ಹಲವು ಪುಟಗಳನ್ನು ವೀಕ್ಷಿಸಬಹುದು. ಇಂಟರ್‌ನೆಟ್ ಎಕ್ಸ್‌ಪ್ಲೋರರ್ 8 ಕಲರ್ ಕೋಡ್‌ಗಳನ್ನು ಬಳಸಿ ನಿಮ್ಮ ಟ್ಯಾಬ್‌ಗಳನ್ನು ಅತಿ ಸುಂದರವಾಗಿ ವ್ಯವಸ್ಥಿತ ಗೊಳಿಸುತ್ತದೆ.

 

ತ್ವರಿತ ಮಾಹಿತಿ

ಇಂಟರ್‌ನೆಟ್ ಎಕ್ಸ್‌ಪ್ಲೋರರ್ 8 ಬಳಕೆಯಿಂದ ಮಾಹಿತಿ ಹುಡುಕಾಟವೂ ಅತ್ಯಂತ ಸುಲಭ. ಬೇಕಾದ ಮಾಹಿತಿಯನ್ನು ತ್ವರಿತವಾಗಿ ಪಡೆಯಬಹುದಾಗಿದೆ. ಇಂಟರ್‌ನೆಟ್ ಎಕ್ಸ್‌ಪ್ಲೋರರ್ 8 ಬ್ರೌಸಿಂಗ್ ಚರಿತ್ರೆಯೊಂದಿಗೆ ವಿವರಣಾತ್ಮಕ ಸಲಹೆಗಳನ್ನು ನೀಡುತ್ತದೆ. ಈ ಸಲಹೆಯು ನಿರ್ದಿಷ್ಟ ಮಾಹಿತಿಯ ಹುಡುಕಾಟವನ್ನು ಸುಲಭಸಾಧ್ಯವಾಗಿರಿಸುತ್ತದೆ.

 

ವೆಬ್ ಸ್ಲೈಸ್

ನೀವು ವೆಬ್ ಸ್ಲೈಸ್ ಸೇರಿಸಿದ್ದೇ ಆದರೆ, ಒಂದೇ ವೆಬ್‌ಸೈಟಿಗೆ ಪದೇಪೇದೇ ಭೇಟಿ ನೀಡುವ ತೊಂದರೆ ತಪ್ಪುತ್ತದೆ. ಹೊಸಸುದ್ದಿ, ಶೇರು ಮಾಹಿತಿ, ಆನ್‌ಲೈನ್ ಹರಾಜು, ಹವಾಮಾನ, ಕ್ರೀಡಾಮಾಹಿತಿ, ಕ್ರಿಕೆಟ್ ಸ್ಕೋರ್ ವಿವರ ಇತ್ಯಾದಿ ಮಾಹಿತಿಗಳು ನಿಮ್ಮೆಡೆಗೆ ಬಂದು ಸೇರುತ್ತವೆ.

 

ಭದ್ರತೆ

ಸೈಬರ್ ಕ್ರಿಮಿನಲ್‌ಗಳು ಅತ್ಯಾಧುನಿಕ ವಿಧಾನಗಳನ್ನು ಬಳಸಿ ಮಾಹಿತಿ ದುರ್ಬಳಕೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸ್ಥಿತಿಯಲ್ಲಿ ಆಧುನಿಕ ಬ್ರೌಸರ್ ಮಾತ್ರವೇ ನಿಮ್ಮನ್ನು ಕಾಪಾಡಬಲ್ಲುದು. ನೂತನ ಸ್ಮಾರ್ಟ್ ಸ್ಕ್ರೀನ್ ತಂತ್ರಜ್ಞಾನದೊಂದಿಗೆ ಇಂಟರ್‌ನೆಟ್ ಎಕ್ಸ್‌ಪ್ಲೋರರ್ 8 ನಿಮಗೆ ಭದ್ರತೆ ಒದಗಿಸುತ್ತದೆ. ಅಲ್ಲದೆ, ನಿಮ್ಮ ಖಾಸಗಿತನದ, ಗೌಪ್ಯತೆಯ ಮೇಲಿನ ದುರುದ್ದೇಶದ ದಾಳಿಯನ್ನು ತಡೆಯುತ್ತದೆ.

ಇಂಟರ್‌ನೆಟ್ ಎಕ್ಸ್‌ಪ್ಲೋರರ್ 6 ವಿಫಲವಾದ ಸಂದರ್ಭಗಳಲ್ಲಿ ಇಂಟರ್‌ನೆಟ್ ಎಕ್ಸ್‌ಪ್ಲೋರರ್ 8 ಬಳಕೆಯಾದಲ್ಲಿ ನೀವು ನಿರಾಶರಾಗಬೇಕಿಲ್ಲ. ಇಂಟರ್‌ನೆಟ್ ಎಕ್ಸ್‌ಪ್ಲೋರರ್ 8 ಅತ್ಯಂತ ದುರ್ಬಲ ಸೈಟ್‌ಗಳೊಂದಿಗೆ ಮುಖಾಮುಖಿಯಾದಾಗ ಮಾತ್ರ ಟ್ಯಾಬ್ ಮಾತ್ರವೇ ಮುಚ್ಚಲ್ಪಡುತ್ತದೆಯೇ ವಿನಹ ಅಂತರ್‌ಜಾಲದಲ್ಲಿ ನಿಮ್ಮ ಸ್ಥಾನಕ್ಕೆ ಚ್ಯುತಿಯಾಗುವುದಿಲ್ಲ.

 

ಇಂಟರ್‌ನೆಟ್ ಎಕ್ಸ್‌ಪ್ಲೋರರ್ 8 ಬಳಕೆಯು ಬ್ರೌಸಿಂಗ್ ನಿರಾಳತೆಯನ್ನು ಒದಗಿಸುತ್ತದೆ.

Read More on....

This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.