Skip Ribbon Commands
Skip to main content

ಏಕರೂಪಿ ಸಂಕೇತಿಕರಣ


ಮಾಹಿತಿಯನ್ನು ಮಿಶ್ರ ಮಾಡುವುದು ಮತ್ತು ವಿವಿಧ ಸಿಸ್ಟಮ್ಗಳಲ್ಲಿ ವಿವಿಧ ಭಾಷೆಗಳಲ್ಲಿ ಮಾಹಿತಿಯನ್ನು ವಿನಿಮಯ   ಮಾಡಿಕೊಳ್ಳುವುದು ಏಕರೂಪಿ ಸಂಕೇತಿಕರಣ ಮಾನದಂಡ ರೂಪಿಸಲು ಪ್ರೇರಣೆಯಾಗಿದೆ. ವಿವಿಧ ಭಾಷೆಗಳ ಮಿಶ್ರ ಮಾಹಿತಿಗಳ ಸಂಕೇತೀಕರಣಕ್ಕೆ ಸಂಕೀರ್ಣ ಪ್ರೋಗ್ರಾಮಿಂಗ್ ವಿಧಾನಗಳು ಅಗತ್ಯ. ಇವುಗಳನ್ನು ಒಳಗೊಂಡ ಪ್ರಕ್ರಿಯೆ ಪ್ರತಿಬಾರಿಯೂ ಬೇರೊಂದು ಭಾಷೆಯ ಮಾಹಿತಿಯನ್ನು ಪಡೆಯುವಾಗ ಕಂಪ್ಯೂಟರ್ ಬೆಂಬಲದೊಂದಿಗೆ ಹೊಸ ಕೋಡ್ ಪುಟಗಳನ್ನು ತೆರೆಯುವ ಅವಶ್ಯಕತೆಯನ್ನು ನಿರ್ಮಾಣ ಮಾಡುತ್ತದೆ.

ಏಕರೂಪೀ ಸಂಹಿತೆ (ಯೂನಿಕೋಡ್) ಉದಯಿಸಿದ್ದು ಜೆರಾಕ್ಸ್ ಮತ್ತು ಆಪಲ್ಗಳ ಸಹಯೋಗದಿಂದ. ಆಗ ಹಲವು ಕಂಪೆನಿಗಳ ತಾತ್ಕಲಿಕ ಸಮಿತಿಯೊಂದು ರಚನೆಯಾಯಿತು. ಐಬಿಎಂ, ಮೈಕ್ರೋಸಾಫ್ಟ್ ಸೇರಿದಂತೆ ಇತರ ಕಂಪೆನಿಗಳೂ ಕಾಲಕ್ರಮೇಣ ಇದರೊಂದಿಗೆ ಕೈ ಜೋಡಿಸಿದವು. 1991ರಲ್ಲಿ ಈ ಗುಂಪು ಏಕರೂಪೀ ಸಂಘಟನೆಯನ್ನು ಸ್ಥಾಪಿಸಿತು. ಈಗ ಇದರ ಸದಸ್ಯತ್ವ ಪಡೆದಿರುವುದರಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಲವು ಪ್ರಮುಖ ಕಂಪೆನಿಗಳು ಸೇರಿವೆ.
 
(ಬಿಎಂಪಿಗೆ (ಪಾತಳಿ 0) ಏಕಪೂಪಿ ಸಂಹಿತೆ ಲಿಪೀಕರಣ ವಿನ್ಯಾಸ)

 ಏಕರೂಪೀ ಸಂಹಿತೆ ಅಂತರಜಾಲದ ಈ ಕಾಲಕ್ಕೆ ಅತ್ಯುತ್ತಮವಾಗಿ ಹೊಂದುತ್ತದೆ ಅಂತರಜಾಲದ ವಿಶ್ವವ್ಯಾಪಿ ಗುಣ ಯಾವ ಭಾಷೆಗಳಲ್ಲೂ ಕೆಲಸ ಮಾಡಲು ಬೇಕಾದಂತಹ ಪರಿಹಾರಗಳನ್ನು ಅಪೇಕ್ಷಿಸುತ್ತದೆ. ವಲ್ಡ್ ವೈಡ್ ವೆಬ್ ಸಂಘಟನೆ (W3C) ಈ ಅಂಶಕ್ಕೆ ಮನ್ನಣೆ ನೀಡಿದ್ದು ಈಗ ಏಲ್ಲಾ ನೂತನ ಆರ್ಎಫ್ಸಿುಗಳೂ ಪಠ್ಯಕ್ಕಾಗಿ ಏಕರೂಪೀ ಸಂಹಿತೆಯನ್ನು ಬಳಸುವ ಅಪೇಕ್ಷೆಯನ್ನು ವ್ಯಕ್ತಪಡಿಸಿವೆ. ಇತರ ಹಲವು ಉತ್ಪನ್ನಗಳು ಮತ್ತು ಮಾನದಂಡಗಳು ಏಕರೂಪೀ ಸಂಹಿತೆ ಬಳಕೆಗೆ ಅಗತ್ಯವಾಗಿದೆ. ಉದಾಹರಣೆ ಎಕ್ಸ್ಎಂಎಲ್, ಎಚ್ಟಿತಎಮ್ಎಲ್, ಮೈಕ್ರೋಸಾಫ್ಟ್ ಜೆಸ್ಕ್ರಿಫ್ಟ್, ಜಾವಾ, ಪರ್ಲ್, ಮೈಕ್ರೋಸಾಫ್ಟ್ ಸಿ++ ಮೈಕ್ರೋಸಾಫ್ಟ್ ಜೆಸ್ಕ್ರಿಫ್ಟ್ ಮತ್ತು ಮೈಕ್ರೋಸಾಫ್ಟ್ ವಿಶುಲ್ ಬೇಸಿಕ್ 7(ವಿಬಿ.ನೆಟ್). ಇಂದು ಏಕರೂಪಿ ಸಂಹಿತೆ ಎಲ್ಲಾ ಪ್ರಮುಖ ಕಂಪ್ಯೂಟರ್ ಕಂಪೆನಿಗಳು ಅಂಗೀಕರಿಸಿದ ಸಂಕೇತಿಕರಣ ಮಾನದಂಡ ವ್ಯವಸ್ಥೆಯಾಗಿದೆ. ಐಎಸ್ಒ 10646 ವಿಶ್ವ ವ್ಯಾಪಿಯಾಗಿ ಎಲ್ಲಾ ಐಎಸ್ಒ ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡಿದ್ದರೂ ಏಕರೂಪೀ ವ್ಯವಸ್ಥೆಯನ್ನು ಪ್ರಮುಖ ಕಂಪ್ಯೂಟರ್ ಕಂಪೆನಿಗಳು ಒಪ್ಪಿಕೊಂಡಿವೆ.


ಎರಡು ಮಾನದಂಡಗಳು ಒಂದೇ ರೀತಿಯ ಅಕ್ಷರ ಸಂಚಯ ಮತ್ತು  ಬೈನರಿ ಪ್ರಾತಿನಿಧಿತ್ವವನ್ನು ಹೊಂದಿದೆ.
ಏಕರೂಪೀ ವ್ಯವಸ್ಥೆ ಇಂದಿನ ಕಂಪ್ಯೂಟರ್ ಗಳಲ್ಲಿ ವ್ಯಾಪಕವಾಗಿ ಅಡಕವಾಗಿರುವ, ಬಳಸುವ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಅದು 1.1 ದಶಲಕ್ಷಕ್ಕೂ ಕೋಡ್ ಪಾಯಿಂಟ್ಗಳನ್ನು  ಗುರುತಿಸುವ ಸಾಮರ್ಥ್ಯ ಹೊಂದಿದೆ. ಈ ಮಾನದಂಡ 8 ಬಿಟ್, 16 ಬಿಟ್, (ಅಧಿಕ) 32 ಬಿಟ್ ಸಂಕೇತಿಕರಣದ ಅವಕಾಶಗಳನ್ನು ಹೊಂದಿದೆ. 16 ಬಿಟ್ ಸಂಕೇತಿಕರಣವನ್ನು ಪರ್ಯಾಯ ವ್ಯವಸ್ಥೆ ಸೂಚಿಸಿಲ್ಲದರ ಸಂಕೇತೀಕರಣ ಸಂದರ್ಭ ಬಳಸಲಾಗುವುದು. ಇದು ದಶಲಕ್ಷಕ್ಕೂ ಅಧಿಕ ಕೋಡ್ ಪಾಯಿಂಟ್ಗಳನ್ನು  17 ಪಾತಳಿಗಳಲ್ಲಿ ವಿತರಿಸಿ, ಪ್ರತಿ ಪಾತಳಿಯೂ 65,000 ಕ್ಕೂ ಅಧಿಕ ಸಂಕೇತಿಕರಣಗಳನ್ನು ನಿಭಾಯಿಸುವಂತೆ ಅಳವಡಿಕೆಯಾಗಿರುತ್ತದೆ. ಶುದ್ದ ಪಾತಳಿಯ ಸಂಕೇತಾಕ್ಷರಗಳು ಅಥವಾ ಚಿತ್ರಗಳು
ವಿಶ್ವದ ಬಹುತೇಕ ಗ್ರಾಂಥಿಕ ಭಾಷೆಯಲ್ಲಿ ಬಳಕೆಯಾದ ಸಂಕೇತಿಕರಣ ಗಳನ್ನು ಹೊಂದಿರುತ್ತದೆ. ಈ ಪಾತಾಳಿಯನ್ನು ಮೂಲ ಬಹುಭಾಷೀಯ ಪಾತಳಿ ಅಥವಾ ಬೇಸಿಕ್ ಮಲ್ಟಿಲಿಂಗ್ಪಲ್ ಪ್ಲೇನ್ (BMP) ಎಂದು ಕರೆಯುತ್ತಾರೆ. ಅಕ್ಷರಗಳನ್ನು ಪ್ರಕಟಣೆಗೆ, ಗಣಿತದ ತಾಂತ್ರಿಕ ಸಂಕೇತಗಳು ರೇಖಾಗಣಿತದ ಆಕಾರಗಳು ಮೂಲ ಡಿಂಗ್ಬ್ಯಾಟ್ಸ್ ಗಳನ್ನೂ ಇದು ಒಳಗೊಂಡಿರುತ್ತಾದೆ. ವಿವಿಧ ವಿರಾಮ ಚಿಹ್ನೆಗಳು ಇದರಲ್ಲಿ ಅಡಕವಾಗಿರುತ್ತದೆ. ಆಧುನಿಕ ಭಾಷೆಗಳು ಸಂಕೇತಾಕ್ಷಾರಗಳ ಜತೆಗೆ ಈ ಮೊದಲು ಹೇಳಿದ ಚಿತ್ರಕಗಳು, ಆಕಾರಗಳು ಸಂಕೇತಗಳು  ಮಾತ್ರವಲ್ಲದೆ ಏಕರೂಪೀ ಸಂಹಿತೆ ಇತರ ಸಂಕೇತಗಳನ್ನು ಇದರಲ್ಲಿ ಒಳಗೊಂಡಿರುತ್ತದೆ. ಕಡಿಮೆ ಬಳಕೆಯಾಗುವ ಚೀನೀ, ಜಪಾನೀ ಮತ್ತು ಕೊರಿಯನ್ (CJK) ಐಡಿಯೊಗ್ರಾಫ್, ಅರೇಬಿಯನ್ ಅಭಿವ್ಯಕ್ತಿ ಚಿಹ್ನೆಗಳು ಸಂಗೀತದ ಸಂಕೇತಗಳು ಇದರಲ್ಲಿ ಸೇರಿರುತ್ತವೆ. ಇಂತಹ ಹಲವು ಹೆಚ್ಚುವರಿ ಸಂಕೇತ/ಚಿತ್ರಕಗಳನ್ನು ಮೂಲ ಪಾತಳಿಯ ಹೊರಗೆ ವಿಸ್ತರಣಾ ತಂತ್ರಜ್ಞಾನವಾದ ಉಪಜೋಡಣೆಗಳ ಮೂಲಕ ರೂಪಿಸಲಾಗಿರುತ್ತದೆ. ಯೂನಿಕೋಡ್ 3.2 ರ ಮೂಲಕ ಇದುವರೆಗೆ 95,000 ಕೋಡ್ ಪಾಯಿಂಟ್ಗಳನ್ನು ಸಂಕೇತ ಚಿತ್ರಗಳಿಗೆ ಈಗಾಗಲೇ ನಿಯೋಜಿಸಲಾಗಿದೆ. ಉಳಿದವನ್ನು ಭವಿಷ್ಯದ ಬಳಕೆಗಾಗಿ ಕಾದಿರಿಸಲಾಗಿದೆ. ಯೂನಿಕೋಡ್ (ಏಕರೂಪೀ ವ್ಯವಸ್ಥೆ)  131000 ಖಾಸಗಿ ಬಳಕೆ ಪ್ರದೇಶಗಳಿಗೆ ಯೂಸರ್ ಡಿಫೈನ್ಡ್ ಕ್ಯಾರೆಕ್ಟರ್ ಲಭ್ಯತೆಯನ್ನು ಒದಗಿಸುತ್ತದೆ. ಇವುಗಳು ಜನತೆಯ ಹೆಸರು, ಸ್ಥಳನಾಮಗಳನ್ನು ಪ್ರತಿನಿಧಿಸುವಂತಹ ಅಪರೂಪದ ಐಡಿಯೋಗ್ರಾಫ್ಗಳನ್ನು ಒಳಗೊಂಡಿವೆ.

Read More on....

This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.