Skip Ribbon Commands
Skip to main content

​​​​​​​​

ಇನ್‌ಪುಟ್ ಮೆತಡ್ ಎಡಿಟ‌‌ರ್‌ಗಳನ್ನು ಅನುಸ್ಥಾಪಿಸುವಿಕೆ ಮತ್ತು ಬಳಸುವಿಕೆ


ಈ ಲೇಖನವು ಶಿಷ್ಟವಾದ ವಿಂಡೋಸ್ ಇನ್‌ಪುಟ್ ಮೆತಡ್ ಎಡಿಟರ್ (IME) ಅನ್ನು ಅನುಸ್ಥಾಪಿಸುವ ಮತ್ತು ಬಳಸುವ ಕುರಿತಾದ ಮಾರ್ಗದರ್ಶನವನ್ನು ಒದಗಿಸುತ್ತದೆ.

ಒಂದು ಇನ್ಪುಟ್ ಮೆತಡ್ ಎಡಿಟರ್ ಅನ್ನು ಅನುಸ್ಥಾಪಿಸುವಿಕೆ

ಪೂರ್ವ ಏಶ್ಯಾದ ನಾಲ್ಕು ವಿವಿಧ ಭಾಷೆಗಳ ಸಂಕೀರ್ಣವಾದ ಅಕ್ಷರಗಳನ್ನುನಮೂದಿಸಲು ಇ‌‌ನ್‌ಪುಟ್ ಮೆತಡ್ ಎಡಿಟರ್ ಅನ್ನು ಅನುಸ್ಥಾಪಿಸುವುದು ಮತ್ತು ಬಳಸುವುದು ಹೇಗೆ ಎಂಬುದನ್ನು ಈ ಕೆಳಗಿನ ವಿಭಾಗಗಳು ವಿವರಿಸುತ್ತವೆ. ಪ್ರತಿ ಭಾಷೆಗಳಿಗಾಗಿನ ವಿಶಿಷ್ಟವಾದ ಸೌಲಭ್ಯಗಳನ್ನೂ ಸಹ ಚರ್ಚಿಸಲಾಗುತ್ತದೆ.

ಇನ್‌ಪುಟ್ ಮೆತಡ್ ಎಡಿಟರ್‌ನ (IME) ಕ್ರಿಯಾಶೀಲತೆಯನ್ನು ಅಳವಡಿಸಲು ಒಂದು ಆಟದಲ್ಲಿ ಇನ್‌ಪುಟ್ ಮೆತಡ್ ಎಡಿಟರ್ ಅನ್ನು ಬಳಸುವಿಕೆ ಅನ್ನು ನೋಡಿ.

ಮೈಕ್ರೊಸಾಫ್ಟ್‌ ವಿಂಡೋಸ್ ಎಕ್ಸ್‌ಪಿ ವ್ಯವಸ್ಥೆಗಳಲ್ಲಿ ಪೂರ್ವನಿಯೋಜಿತವಾಗಿ ಒಂದು IME ಅನ್ನು ಅನುಸ್ಥಾಪಿಸಲಾಗಿರುವುದಿಲ್ಲ. ಅದನ್ನು ಅನುಸ್ಥಾಪಿಸಲು, ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

Ee418266.wedge(en-us,VS.85).gif

ಒಂದು IME ಅನ್ನು ಅನುಸ್ಥಾಪಿಸಲು

  1. ನಿಯಂತ್ರಣ ಪ್ಯಾನಲ್‌ನ ಮೂಲಕ ಪ್ರಾದೇಶಿಕ ಮತ್ತು ಭಾಷೆಯ ಆಯ್ಕೆಗಳು (ರೀಜನಲ್ ಆಂಡ್ ಲಾಂಗ್ವೇಜ್ ಆಪ್ಶನ್ಸ್) ಅನ್ನು ಆರಿಸಿ.
  2. ಭಾಷೆಗಳ ಟ್ಯಾಬ್‌ನಲ್ಲಿ, ಪೂರ್ವ ಏಶ್ಯಾದ ಭಾಷೆಗಳಿಗಾಗಿನ ಕಡತಗಳನ್ನು ಅನುಸ್ಥಾಪಿಸು (ಇನ್‌ಸ್ಟಾಲ್ ಫೈಲ್ಸ್ ಫಾರ್ ಈಸ್ಟ್ ಏಶಿಯನ್ ಲಾಂಗ್ವೇಜಸ್) ಎಂಬ ಗುರುತುಚೌಕವನ್ನು ಆರಿಸಿ. 


ಭಾಷಾ ಕಡತಗಳಿಗಾಗಿ ಅಗತ್ಯವಿರುವ ಶೇಖರಣಾ ಅಗತ್ಯತೆಗಳನ್ನು ನಿಮಗೆ ಸೂಚಿಸುವ ಒಂದು ಪೂರಕ ಭಾಷಾ ಬೆಂಬಲಗಳನ್ನು ಅನುಸ್ಥಾಪಿಸುವ ಸಂವಾದ ಚೌಕವು ಕಾಣಿಸಿಕೊಳ್ಳುತ್ತದೆ
  1. ಸಂವಾದಚೌಕವನ್ನು ಮುಚ್ಚಲು ಸರಿ ಅನ್ನು ಕ್ಲಿಕ್ ಮಾಡಿ.
  2. ಭಾಷೆಗಳ ಟ್ಯಾಬ್‌ನಲ್ಲಿ ಸರಿ ಅನ್ನು ಕ್ಲಿಕ್ ಮಾಡಿ.
  3. ವಿಂಡೋಸ್ ಎಕ್ಸ್‌ಪಿ ಅನುಸ್ಥಾಪನಾ ಡಿಸ್ಕ್ ಅಥವ ಭಾಷಾ ಬೆಂಬಲದ ಕಡತಗಳು ಇರುವ ಸ್ಥಳವನ್ನು ಸೂಚಿಸುವ ನೆಟ್‌ವರ್ಕ್ ಹಂಚಿಕೆಯ ಸ್ಥಳವನ್ನು ಸೂಚಿಸುವಂತೆ ಮನವಿ ಮಾಡುವ ಇನ್ನೊಂದು ಸಂವಾದ ಚೌಕವು ಕಾಣಿಸಿಕೊಳ್ಳುತ್ತದೆ. ವಿಂಡೋಸ್ ಎಕ್ಸ್‌ಪಿ ಕಾಂಪ್ಯಾಕ್ಟ್ ಡಿಸ್ಕ್ ಅನ್ನು ಸೇರಿಸಿ ಅಥವ ಸೂಕ್ತವಾದ ನೆಟ್‌ವರ್ಕ್ ಸ್ಥಳಕ್ಕೆ ಭೇಟಿ ನೀಡಿ, ನಂತರ ಸರಿ ಅನ್ನು ಕ್ಲಿಕ್ ಮಾಡಿ.  ಮೈಕ್ರೋಸಾಫ್ಟ್ ವಿಂಡೋಸ್ ಅಗತ್ಯವಿರುವ ಕಡತಗಳನ್ನು ಅನುಸ್ಥಾಪಿಸುತ್ತದೆ ಮತ್ತು ನೀವು ಗಣಕವನ್ನು ಮರಳಿ ಆರಂಭಿಸುವಂತೆ ತಿಳಿಸುತ್ತದೆ.
  4. ಗಣಕವನ್ನು ಮರಳಿ ಆರಂಭಿಸಲು ಹೌದು ಅನ್ನು ಆರಿಸಿ.
  5. ಮರಳಿ ಆರಂಭಿಸಿದ ನಂತರ, ಪುನಃ ಇನ್ನೊಮ್ಮೆ ಪ್ರದೇಶ ಮತ್ತು ಭಾಷಾ ಆಯ್ಕೆಗಳ ನಿಯಂತ್ರಣ ಪ್ಯಾನಲ್ ಅನ್ನು ತೆರೆಯಿರಿ.
  6. ಭಾಷೆಗಳ ಟ್ಯಾಬ್‌ನಲ್ಲಿ, ವಿವರಗಳ ಮೇಲೆ ಕ್ಲಿಕ್ ಮಾಡಿ. ಪಠ್ಯ ಸೇವೆಗಳು ಮತ್ತು ಇನ್‌ಪುಟ್ ಭಾಷೆಗಳ ಎಂಬ ಕಿಟಕಿಯು ಕಾಣಿಸಿಕೊಳ್ಳುತ್ತದೆ. 

  1. ಸೆಟ್ಟಿಂಗ್‌ಗಳ ಟ್ಯಾಬ್‌ನಲ್ಲಿ, ಸೇರಿಸು ಎಂಬುದರ ಮೇಲೆ ಕ್ಲಿಕ್ ಮಾಡಿ. ಇನ್‌ಪುಟ್ ಭಾಷೆಗಳನ್ನು ಸೇರಿಸಿ ಕಿಟಕಿಯು ಕಾಣಿಸಿಕೊಳ್ಳುತ್ತದೆ. ​

  1. ಇನ್‌ಪುಟ್ ಭಾಷೆಗಾಗಿ ಚೈನೀಸ್ (ತೈವಾನ್) ಅನ್ನು ಆರಿಸಿ ಮತ್ತು ಕೀಲಿಮಣೆ ವಿನ್ಯಾಸ/IME ಗಾಗಿ ಮೈಕ್ರೋಸಾಫ್ಟ್ ಹೊಸ ಫೋನೆಟಿಕ್ IME  2002a  ಅನ್ನು ಆರಿಸಿ.
  2. ಸರಿ ಅನ್ನು ಕ್ಲಿಕ್ ಮಾಡಿ. ಇದೇ ರೀತಿಯಲ್ಲಿ ಈಗ ನೀವು ಹೆಚ್ಚುವರಿ ಭಾಷೆಗಳನ್ನು ಮತ್ತು IME ಗಳನ್ನು ಸೇರಿಸಬಹುದು.
  3. ಇನ್ನೊಮ್ಮೆ ಸೇರಿಸು ಅನ್ನು ಕ್ಲಿಕ್ ಮಾಡಿ, ಇನ್‌ಪುಟ್ ಭಾಷೆಗಾಗಿ ಚೈನೀಸ್ (PRC) ಅನ್ನುಮತ್ತು  ಕೀಲಿಮಣೆ ವಿನ್ಯಾಸ/IME ಗಾಗಿ ಚೈನೀಸ್ (ಸಿಂಪ್ಲಿಫೈಡ್) - ಮೈಕ್ರೋಸಾಫ್ಟ್ ಪಿನ್‌ಯಿನ್ IME 3.0 ಅನ್ನು ಆರಿಸಿ, ನಂತರ ಸರಿ ಅನ್ನು ಕ್ಲಿಕ್ ಮಾಡಿ.
  4. ಇನ್ನೊಮ್ಮೆ ಸೇರಿಸು ಅನ್ನು ಕ್ಲಿಕ್ ಮಾಡಿ, ಇನ್‌ಪುಟ್ ಭಾಷೆಗಾಗಿ ಜಾಪನೀಸ್ ಅನ್ನು ಮತ್ತು ಕೀಲಿಮಣೆ ವಿನ್ಯಾಸ/IME ಗಾಗಿ  ಮೈಕ್ರೋಸಾಫ್ಟ್ IME ಶಿಷ್ಟ 2002 ಆವೃತ್ತಿ 8.1 ಅನ್ನು ಆರಿಸಿ.
  5. ಇನ್ನೊಮ್ಮೆ ಸೇರಿಸು ಅನ್ನು ಕ್ಲಿಕ್ ಮಾಡಿ, ಇನ್‌ಪುಟ್ ಭಾಷೆಗಾಗಿ ಕೊರಿಯನ್ ಅನ್ನು ಮತ್ತು  ಕೀಲಿಮಣೆ ವಿನ್ಯಾಸ/IME ಗಾಗಿ ಕೊರಿಯನ್ ಇನ್‌ಪುಟ್ ವ್ಯವಸ್ಥೆಯನ್ನು ಆರಿಸಿ, ನಂತರ ಸರಿ ಅನ್ನು ಕ್ಲಿಕ್ ಮಾಡಿ. ಪಠ್ಯ ಸೇವೆಗಳು ಮತ್ತು ಇನ್‌ಪುಟ್ ಭಾಷೆಗಳ ಕಿಟಕಿಯಲ್ಲಿ, ಅನುಸ್ಥಾಪಿಸಲಾದ ಸೇವೆಗಳ ಪಟ್ಟಿಯ ಚೌಕವು ಈಗ ಹೊಸದಾಗಿ ಸೇರಿಸಲಾದ ನಾಲ್ಕು IME ಗಳನ್ನು ಹೊಂದಿರಬೇಕು. 

  1. ಪಠ್ಯ ಸೇವೆಗಳು ಮತ್ತು ಇನ್‌ಪುಟ್ ಭಾಷೆಗಳ ಕಿಟಕಿಯನ್ನು ಮುಚ್ಚಲು ಸರಿ ಅನ್ನು ಕ್ಲಿಕ್ ಮಾಡಿ.
  2. ಪ್ರಾದೇಶಿಕ ಮತ್ತು ಭಾಷಾ ಆಯ್ಕೆಗಳ ನಿಯಂತ್ರಣ ಪ್ಯಾನಲ್ ಅನ್ನು ಮುಚ್ಚಲು ಸರಿ ಅನ್ನು ಕ್ಲಿಕ್ ಮಾಡಿ. ವಿಂಡೋಸ್ ಕಾರ್ಯಪಟ್ಟಿಯು ಈಗ ಕೆಂಪು ವೃತ್ತದಿಂದ ಗುರುತುಹಾಕಲಾದ ಒಂದು ಇನ್‌ಪುಟ್ ಲೊಕ್ಯಾಲ್ ಸೂಚಕವನ್ನು ಹೊಂದಿರುತ್ತದೆ. ಈ ಸೂಚಕದ ಇರುವಿಕೆಯು ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚಿನ ಇನ್‌ಪುಟ್ ಭಾಷೆಗಳು ಇವೆ ಎಂಬುದನ್ನು ಸೂಚಿಸುತ್ತದೆ. 

ಸಿಂಪ್ಲಿಫೈಡ್ ಚೈನೀಸ್ IME

ಈ ವಿಭಾಗವು ಮೈಕ್ರೋಸಾಫ್ಟ್ ನೋಟ್‌ಪ್ಯಾಡ್‌ನಲ್ಲಿ ಒಂದಿಷ್ಟು ಚೈನೀಸ್ ಅಕ್ಷರಗಳನ್ನು ನಮೂದಿಸಲು ಹೇಗೆ ಸಿಂಪ್ಲಿಫೈಡ್ ಚೈನೀಸ್ IME (ಪಿನ್‌ ಯಿನ್) ಅನ್ನು ಬಳಸಬಹುದು ಎಂಬುದನ್ನು ವಿವರಿಸುತ್ತದೆ.

  1. ನೋಟ್‌ಪ್ಯಾಡ್ ಅನ್ನು ಆರಂಭಿಸಿ (ಆರಂಭಿಸುವ ಒತ್ತುಗುಂಡಿಯಲ್ಲಿ ಲಭ್ಯವಿರುತ್ತದೆ. ನಂತರ ಎಲ್ಲಾ ಪ್ರೊಗ್ರಾಂಗಳು ಮತ್ತು ಸಲಕರಣೆಗಳು ಅನ್ನು ಆರಿಸಿ) ನೋಟ್‌ಪ್ಯಾಡ್‌ನಲ್ಲಿ ಕೆಲವು ಅಕ್ಷರಗಳನ್ನು ನಮೂದಿಸಿ. ನಂತರದ ಸಮಯದಲ್ಲಿ IME ಕಿಟಕಿಯನ್ನು ವೀಶುವಲೈಸ್ ಮಾಡಲು ಈ ಅಕ್ಷರಗಳು ನೆರವಾಗುತ್ತವೆ. 

  1. ನೋಟ್‌ಪ್ಯಾಡ್ ಒಂದು ಸಕ್ರಿಯ ಅನ್ವಯವಾಗಿರಿಸಿಕೊಂಡು, ಇನ್‌ಪುಟ್ ಲೊಕ್ಯಾಲ್ ಸೂಚಕವನ್ನು ಕ್ಲಿಕ್ ಮಾಡಿ ಮತ್ತು ಚೈನೀಸ್ (PRC) ಅನ್ನು ಆರಿಸಿ. ಹೊಸ ಇನ್‌ಪುಟ್ ಭಾಷೆಯು ಚೈನೀಸ್ (PRC) ಆಗಿರುವುದನ್ನು ತೋರಿಸಲು ಸೂಚಕವು CH ಗೆ ಬದಲಾಯಿಸುತ್ತದೆ. 

  1. ತೆರೆಸೂಚಕವನ್ನು ನೋಟ್‌ಪ್ಯಾಡ್‌ ಮೇಲೆ ಇರಿಸಿ. ತೆರೆಸೂಚಕವು ಸಾಲಿನ ಮೊದಲಿನಲ್ಲಿ ಇರುವಂತೆ ಕೀಲಿಮಣೆಯ ಮೇಲಿರುವ ಹೋಮ್‌ ಅನ್ನು ಒತ್ತಿ. ಕೀಲಮಣೆಯಲ್ಲಿ, "N" ಅನ್ನು, ನಂತರ "T" ಅನ್ನು ಒತ್ತಿ.  ಈ ಕೆಳಗಿನ ಚಿತ್ರವು ಪ್ರದರ್ಶಕವು ಕಾಣಿಸುವ ರೀತಿಯನ್ನು ತೋರಿಸುತ್ತದೆ. ಒಂದು ಚಿಕ್ಕದಾದ ಆಯತಾಕಾರವು ಓದು ಕಿಟಕಿಯಾಗಿರುತ್ತದೆ, ಇದು ಪ್ರಸಕ್ತ ಓದು ವಾಕ್ಯಾಂಶವನ್ನು ತೋರಿಸುತ್ತದೆ. ಪ್ರಸ್ತುತ, "N" ಮತ್ತು "T" ಅನ್ನು ನಮೂದಿಸಿದ ಕಾರಣದಿಂದಾಗಿ, ಓದುವ ವಾಕ್ಯಾಂಶವು "ni" ಆಗಿರುತ್ತದೆ. 

  1. "3" ಎಂದು ಟೈಪ್ ಮಾಡಿ. ಈಗ ನೋಟ್‌ಪ್ಯಾಡ್ ಈ ಕೆಳಗಿನ ರೀತಿ ತೋರಿಸುತ್ತದೆ. ಏಕೆಂದರೆ N+I+3 ಸಿಂಪ್ಲಿಫೈಡ್ ಚೈನೀಸ್ ಪಿನ್‌ಯಿನ್‌ನಲ್ಲಿ ಒಂದು ಸಂಪೂರ್ಣವಾದ ಉಚ್ಛಾರವಾಗಿರುತ್ತದೆ. ಬಳಕೆದಾರರು ನಮೂದಿಸಲು ಉದ್ಧೇಶಿಸಿರುವ ಅಕ್ಷರವನ್ನುಊಹಿಸಲು IME ಯು ಸಾಕಷ್ಟು ಮಾಹಿತಿಯನ್ನು ಹೊಂದಿರುತ್ತದೆ. ನೀವು ಸಂಪೂರ್ಣ ಉಚ್ಛಾರವನ್ನು ನಮೂದಿಸಿರುವ ಕಾರಣ ಓದುವ ಕಿಟಕಿಯು ಮಾಯವಾಗುತ್ತದೆ. ನೋಟ್‌ಪ್ಯಾಡ್‌ ತೆರೆಸೂಚಕದ ಮೇಲ್ಭಾಗದಲ್ಲಿ ಒಂದು ಅಕ್ಷರವನ್ನು ತೋರಿಸಲಾಗುತ್ತದೆ. ಈ ಅಕ್ಷರವು ನೋಟ್‌ಪ್ಯಾಡ್‌ನ ಒಂದು ಭಾಗವಾಗಿರುವುದಿಲ್ಲ, ಬದಲಿಗೆ ಅದನ್ನು ಬೇರೊಂದು ಕಿಟಕಿಯಲ್ಲಿ ನೋಟ್‌ಪ್ಯಾಡ್‌ನ ಮೇಲ್ಭಾಗದಲ್ಲಿ ಇರುವಂತೆ ತೋರಿಸಲಾಗುತ್ತದೆ ಮತ್ತು ಇದು ನೋಟ್‌ಪ್ಯಾಡ್‌ನಲ್ಲಿ ಈಗಾಗಲೆ ಕೆಳಭಾಗದಲ್ಲಿ ಇರುವ ಅಕ್ಷರಗಳನ್ನು ಅಡಗಿಸುತ್ತದೆ. ಈ ಹೊಸ ಕಿಟಕಿಯನ್ನು ರಚನೆಯ ಕಿಟಕಿ ಎಂತಲೂ, ಮತ್ತು ವಾಕ್ಯಾಂಶವನ್ನು ರಚನೆಯ ವಾಕ್ಯಾಂಶ ಎಂತಲೂ ಕರೆಯಲಾಗುತ್ತದೆ.  ರಚನೆಯ ವಾಕ್ಯಾಂಶದ ಅಡಿಯಲ್ಲಿ ಗೆರೆಯನ್ನು ಎಳೆಯುವ ಮೂಲಕ ತೋರಿಸಲಾಗುತ್ತದೆ. 

  1. ಈಗ ಬೇರೊಂದು ಅಕ್ಷರವನ್ನು ನಮೂದಿಸಲು "H", "A", "O", "3" ಎಂದು ನಮೂದಿಸಿ. "H" ಎಂದು ನಮೂದಿಸಿದಾಗ ಓದುವ ಕಿಟಕಿಯು ಕಾಣಿಸಿಕೊಳ್ಳುತ್ತದೆ ಮತ್ತು "3" ಅನ್ನು ನಮೂದಿಸಿದಾಗ ಅದು ಕಾಣೆಯಾಗುತ್ತದೆ ಎಂಬುದನ್ನು ಗಮನಿಸಿ. ಕೆಳಗೆ ತೋರಿಸಲಾಗಿರುವಂತೆ, ರಚನೆಯ ವಾಕ್ಯಾಂಶವು ಈಗ ಎರಡು ಅಕ್ಷರಗಳನ್ನು ಹೊಂದಿರುತ್ತದೆ.

  1. ಕೀಲಿಮಣೆಯಲ್ಲಿ ಒಂದು ಬಾರಿ ಎಡ ಬಾಣದ ಗುರುತನ್ನು ಒತ್ತಿ. ಕಂಪೋಸಿಶನ್ ತೆರೆಸೂಚಕವು ಎಡಭಾಗದಲ್ಲಿರುವ ಅಕ್ಷರಕ್ಕೆ ಸ್ಥಳಾಂತರಗೊಳ್ಳುತ್ತದೆ. ಈ ಕೆಳಗೆ ತೋರಿಸಲಾಗಿರುವಂತೆ ಒಂದು ಕಿಟಕಿಯು ನೋಟ್‌ಪ್ಯಾಡ್‌ನ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಿಟಕಿಯನ್ನು ಅಬ್ಯರ್ಥಿ ಕಿಟಕಿ (ಕ್ಯಾಂಡಿಡೇಟ್ ವಿಂಡೋ) ಎಂದು ಕರೆಯಲಾಗುತ್ತದೆ. ಇದು ನೀವು ನಮೂದಿಸಿದ ಉಚ್ಛಾರಕ್ಕೆ ಹೊಂದಿಕೆಯಾಗುವ ಅಕ್ಷರಗಳು ಅಥವ ವಾಕ್ಯಾಂಶಗಳ ಪಟ್ಟಿಯನ್ನು ತೋರಿಸುತ್ತದೆ. ನೀವು ಅಬ್ಯರ್ಥಿಗಳ ಪಟ್ಟಿಯಿಂದ ಉದ್ಧೇಶಿತ ಪದವನ್ನು ಆರಿಸಬಹುದು. ಈ ಉದಾಹರಣೆಯಲ್ಲಿ, ಎರಡು ಅಬ್ಯರ್ಥಿ ಅಕ್ಷರಗಳು ಒಂದೇ ಉಚ್ಛಾರವನ್ನು ಹೊಂದಿವೆ. 

  1. ಎರಡನೆಯ ನಮೂದನ್ನು ಆಯ್ಕೆ ಮಾಡಲು "2" ಅನ್ನು ಟೈಪ್ ಮಾಡಿ. ಈ ಅಬ್ಯರ್ಥಿ ಕಿಟಕಿಯು ಮುಚ್ಚಲ್ಪಡುತ್ತದೆ, ಮತ್ತು ರಚನೆಯ ವಾಕ್ಯಾಂಶವನ್ನು ಅಪ್‌ಡೇಟ್ ಮಾಡಲಾದ ಅಕ್ಷರದಿಂದ ಅಪ್‌ಡೇಟ್ ಮಾಡಲ್ಪಡುತ್ತದೆ. 

  1. ಎಂಟರ್ ಅನ್ನು ಒತ್ತಿ. ಇದು ರಚಿಸುವಿಕೆಯು ಪೂರ್ಣಗೊಂಡಿದೆ ಮತ್ತು ವಾಕ್ಯಾಂಶವನ್ನು ಅನ್ವಯಕ್ಕೆ (ಈ ಉದಾಹರಣೆಯಲ್ಲಿ ನೋಟ್‌ಪ್ಯಾಡ್‌ಗೆ)  ಕಳಿಸಬೇಕು ಎಂದು IME ಗೆ ಸೂಚಿಸುತ್ತದೆ. ರಚಿಸುವಿಕೆಯ ಕಿಟಕಿಯು ಮುಚ್ಚಲ್ಪಡುತ್ತದೆ ಮತ್ತು ಎರಡು ಅಕ್ಷರಗಳನ್ನು WM_CHAR. ಮೂಲಕ ನೋಟ್‌ಪ್ಯಾಡ್‌ಗೆ ಕಳುಹಿಸಲ್ಪಡುತ್ತದೆ. ಈ ಕೆಳಗಿನ ಚಿತ್ರದಲ್ಲಿ ಅಡಿಗೆರೆಯು ಹೊರಟುಹೋಗಿದೆ ಏಕೆಂದರೆ ತೋರಿಸಲಾದ ಎರಡು ಅಕ್ಷರಗಳು ನೋಟ್‌ಪ್ಯಾಡ್‌ನಲ್ಲಿನ ಪಠ್ಯದ ಒಂದು ಭಾಗವಾಗಿದೆ. ನೋಟ್‌ಪ್ಯಾಡ್‌ನಲ್ಲಿ ಈಗಿರುವ ಪಠ್ಯವಾದ "ABCDEFG" ಅನ್ನು  ಬಲಭಾಗಕ್ಕೆ ಸ್ಥಳಾಂತರಿಸಲಾಗಿದೆ ಏಕೆಂದರೆ ಇನ್ನೂ ಎರಡು ಅಕ್ಷರಗಳನ್ನು ನಡುವೆ ಸೇರಿಸಲಾಗಿದೆ. ನೀವು IME ಅನ್ನು ಬಳಸಿಕೊಂಡು ಎರಡು ಸಿಂಪ್ಲಿಫೈಡ್ ಚೈನೀಸ್ ಅಕ್ಷರಗಳನ್ನು ಯಶಸ್ವಿಯಾಗಿ ನಮೂದಿಸಿದ್ದೀರಿ. 

ಈ ವಿಭಾಗವು ನೋಟ್‌ಪ್ಯಾಡ್‌ನಲ್ಲಿ ಒಂದಿಷ್ಟು ಚೈನೀಸ್ ಅಕ್ಷರಗಳನ್ನು ನಮೂದಿಸಲು ಹೇಗೆ ಟ್ರೆಡೀಶನಲ್ ಚೈನೀಸ್ IME (ನ್ಯೂ ಫೋನೆಟಿಕ್) ಅನ್ನು ಬಳಸಬಹುದು ಎಂಬುದನ್ನು ವಿವರಿಸುತ್ತದೆ.

  1. ನೋಟ್‌ಪ್ಯಾಡ್ ಅನ್ನು ಆರಂಭಿಸಿ. ನೋಟ್‌ಪ್ಯಾಡ್‌ನಲ್ಲಿ ಕೆಲವು ಅಕ್ಷರಗಳನ್ನು ನಮೂದಿಸಿ. ನಂತರದ ಸಮಯದಲ್ಲಿ IME ಕಿಟಕಿಯನ್ನು ವೀಶುವಲೈಸ್ ಮಾಡಲು ಈ ಅಕ್ಷರಗಳು ನೆರವಾಗುತ್ತವೆ. 

  1. ವಿಂಡೋಸ್ ಕಾರ್ಯಪಟ್ಟಿಯಲ್ಲಿರುವ ಇನ್‌ಪುಟ್ ಲೊಕ್ಯಾಲ್ ಸೂಚಕದ ಮೇಲೆ ಕ್ಲಿಕ್ ಮಾಡಿ, ನಂತರ ಚೈನೀಸ್ (ತೈವಾನ್) ಅನ್ನು ಆಯ್ಕೆ ಮಾಡಿಕೊಳ್ಳಿ. ​

  1. ತೆರೆಸೂಚಕವನ್ನು ನೋಟ್‌ಪ್ಯಾಡ್‌ ಮೇಲೆ ಇರಿಸಿ. ತೆರೆಸೂಚಕವು ಸಾಲಿನ ಮೊದಲಿನಲ್ಲಿ ಇರುವಂತೆ ಕೀಲಿಮಣೆಯ ಮೇಲಿರುವ ಹೋಮ್‌ ಅನ್ನು ಒತ್ತಿ. ಕೀಲಿಮಣೆಯಲ್ಲಿ, "S" ಅನ್ನು, ನಂತರ "U" ಅನ್ನು ಒತ್ತಿ. ಈ ಕೆಳಗಿನ ಚಿತ್ರವು ಪ್ರದರ್ಶಕವು ಕಾಣಿಸುವ ರೀತಿಯನ್ನು ತೋರಿಸುತ್ತದೆ. ಒಂದು ಚಿಕ್ಕದಾದ ಆಯತಾಕಾರವು ಓದಲು ಕಿಟಕಿಯಾಗಿರುತ್ತದೆ, ಇದು ಪ್ರಸಕ್ತ ಓದಲಾಗುತ್ತಿರುವ ವಾಕ್ಯಾಂಶವನ್ನು ತೋರಿಸುತ್ತದೆ. ಈ ಕೆಳಗಿನ ಚಿತ್ರದಲ್ಲಿ ತೋರಿಸಲಾಗಿರುವಂತೆ, "S" ಮತ್ತು "U" ಅನ್ನು ಟೈಪ್ ಮಾಡಲಾದ ಕಾರಣದಿಂದಾಗಿ, ಓದಲಾಗುವ ವಾಕ್ಯಾಂಶವು ಎರಡು ಅಕ್ಷರಗಳನ್ನು ಹೊಂದಿರುತ್ತದೆ.      ​

“3” ಎಂದು ಟೈಪ್ ಮಾಡಿ. ಈಗ ನೋಟ್ಪ್ಯಾಡ್ ಕೆಳಗಿನ ರೀತಿ ತೋರಿಸುತ್ತದೆ. ಏಕೆಂದರೆ S+U+3 ಸಿಂಪ್ಲಿಫೈಡ್ ಚೈನೀಸ್ ಪಿನ್‌ಯಿನ್‌ನಲ್ಲಿ ಒಂದು ಸಂಪೂರ್ಣವಾದ ಉಚ್ಛಾರವಾಗಿರುತ್ತದೆ. ಬಳಕೆದಾರರು ನಮೂದಿಸಲು ಉದ್ಧೇಶಿಸಿರುವ ಅಕ್ಷರವನ್ನುಊಹಿಸಲು IME ಯು ಸಾಕಷ್ಟು ಮಾಹಿತಿಯನ್ನು ಹೊಂದಿರುತ್ತದೆ. ನೀವು ಸಂಪೂರ್ಣ ಉಚ್ಛಾರವನ್ನು ನಮೂದಿಸಿರುವ ಕಾರಣ ಓದುವ ಕಿಟಕಿಯು ಮಾಯವಾಗುತ್ತದೆ. ನೋಟ್ಪ್ಯಾಡ್ತೆರೆಸೂಚಕದ ಮೇಲ್ಭಾಗದಲ್ಲಿ ಒಂದು ಅಕ್ಷರವನ್ನು ತೋರಿಸಲಾಗುತ್ತದೆ. ಅಕ್ಷರವು ನೋಟ್ಪ್ಯಾಡ್ ಒಂದು ಭಾಗವಾಗಿರುವುದಿಲ್ಲ, ಬದಲಿಗೆ ಅದನ್ನು ಬೇರೊಂದು ಕಿಟಕಿಯಲ್ಲಿ ನೋಟ್ಪ್ಯಾಡ್ ಮೇಲ್ಭಾಗದಲ್ಲಿ ಇರುವಂತೆ ತೋರಿಸಲಾಗುತ್ತದೆ ಮತ್ತು ಇದು ನೋಟ್ಪ್ಯಾಡ್ನಲ್ಲಿ ಈಗಾಗಲೆ ಕೆಳಭಾಗದಲ್ಲಿ ಇರುವ ಅಕ್ಷರಗಳನ್ನು ಅಡಗಿಸುತ್ತದೆ. ಹೊಸ ಕಿಟಕಿಯನ್ನು ರಚನೆಯ ಕಿಟಕಿ ಎಂತಲೂ, ಮತ್ತು ವಾಕ್ಯಾಂಶವನ್ನು ರಚನೆಯ ವಾಕ್ಯಾಂಶ ಎಂತಲೂ ಕರೆಯಲಾಗುತ್ತದೆ. ರಚನೆಯ ವಾಕ್ಯಾಂಶದ ಅಡಿಯಲ್ಲಿ ಗೆರೆಯನ್ನು ಎಳೆಯುವ ಮೂಲಕ ತೋರಿಸಲಾಗುತ್ತದೆ
  1. ಈಗ ಬೇರೊಂದು ಅಕ್ಷರವನ್ನು ನಮೂದಿಸಲು "C", "L", ಮತ್ತು "3" ಎಂದು ನಮೂದಿಸಿ. "C" ಎಂದು ನಮೂದಿಸಿದಾಗ ಓದುವ ಕಿಟಕಿಯು ಕಾಣಿಸಿಕೊಳ್ಳುತ್ತದೆ ಮತ್ತು "3" ಅನ್ನು ನಮೂದಿಸಿದಾಗ ಅದು ಕಾಣೆಯಾಗುತ್ತದೆ ಎಂಬುದನ್ನು ಗಮನಿಸಿ. ಕೆಳಗೆ ತೋರಿಸಲಾಗಿರುವಂತೆ, ರಚನೆಯ ವಾಕ್ಯಾಂಶ ಈಗ ಎರಡು ಅಕ್ಷರಗಳನ್ನು ಹೊಂದಿರುತ್ತದೆ.      

  1. ಕೀಲಿಮಣೆಯಲ್ಲಿ ಒಂದು ಬಾರಿ ಕೆಳಗಿನ ಬಾಣದ ಗುರುತನ್ನು ಒತ್ತಿ. ಈ ಕೆಳಗೆ ತೋರಿಸಲಾಗಿರುವಂತೆ ಒಂದು ಕಿಟಕಿಯು ನೋಟ್‌ಪ್ಯಾಡ್‌ನ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಿಟಕಿಯನ್ನು ಅಬ್ಯರ್ಥಿ ಕಿಟಕಿ ಎಂದು ಕರೆಯಲಾಗುತ್ತದೆ ಇದು ನೀವು ನಮೂದಿಸಿದ ಉಚ್ಛಾರಕ್ಕೆ ಹೊಂದಿಕೆಯಾಗುವ ಅಕ್ಷರಗಳು ಅಥವ ವಾಕ್ಯಾಂಶಗಳ ಪಟ್ಟಿಯನ್ನು ತೋರಿಸುತ್ತದೆ. ನೀವು ಅಬ್ಯರ್ಥಿಗಳ ಪಟ್ಟಿಯಿಂದ ಉದ್ಧೇಶಿತ ಪದವನ್ನು ಆರಿಸಬಹುದು. ಈ ಉದಾಹರಣೆಯಲ್ಲಿ, ಮೂರು ಅಬ್ಯರ್ಥಿ ಅಕ್ಷರಗಳು ಒಂದೇ ಉಚ್ಛಾರವನ್ನು ಹೊಂದಿವೆ. 

  1. ಎರಡನೆಯ ನಮೂದನ್ನು ಆಯ್ಕೆ ಮಾಡಲು "2" ಅನ್ನು ಟೈಪ್ ಮಾಡಿ. ಈ ಅಬ್ಯರ್ಥಿ ಕಿಟಕಿಯು ಮುಚ್ಚಲ್ಪಡುತ್ತದೆ, ಮತ್ತು ಕಾಂಪೋಸಿಶನ್ ಸ್ಟ್ರಿಂಗ್ ಅಪ್‌ಡೇಟ್ ಮಾಡಲಾದ ಅಕ್ಷರದಿಂದ ಅಪ್‌ಡೇಟ್ ಮಾಡಲ್ಪಡುತ್ತದೆ. 

  1. ಎಂಟರ್ ಅನ್ನು ಒತ್ತಿ. ಇದು ರಚಿಸುವಿಕೆಯು ಪೂರ್ಣಗೊಂಡಿದೆ ಮತ್ತು ವಾಕ್ಯಾಂಶವನ್ನು ಅನ್ವಯಕ್ಕೆ (ಈ ಉದಾಹರಣೆಯಲ್ಲಿ ನೋಟ್‌ಪ್ಯಾಡ್‌ಗೆ)  ಕಳಿಸಬೇಕು ಎಂದು IME ಗೆ ಸೂಚಿಸುತ್ತದೆ. ರಚಿಸುವಿಕೆಯ ಕಿಟಕಿಯು ಮುಚ್ಚಲ್ಪಡುತ್ತದೆ ಮತ್ತು WM_CHAR ಮೂಲಕ ಎರಡು ಅಕ್ಷರಗಳನ್ನು ನೋಟ್‌ಪ್ಯಾಡ್‌ಗೆ ಕಳುಹಿಸಲ್ಪಡುತ್ತದೆ. ಈ ಕೆಳಗಿನ ಚಿತ್ರದಲ್ಲಿ ಅಡಿಗೆರೆಯು ಹೊರಟುಹೋಗಿದೆ ಏಕೆಂದರೆ ತೋರಿಸಲಾದ ಎರಡು ಅಕ್ಷರಗಳು ನೋಟ್‌ಪ್ಯಾಡ್‌ನಲ್ಲಿನ ಪಠ್ಯದ ಒಂದು ಭಾಗವಾಗಿದೆ. ನೋಟ್‌ಪ್ಯಾಡ್‌ನಲ್ಲಿ ಈಗಿರುವ ಪಠ್ಯವಾದ "ABCDEFG" ಅನ್ನು  ಬಲಭಾಗಕ್ಕೆ ಸ್ಥಳಾಂತರಿಸಲಾಗಿದೆ ಏಕೆಂದರೆ ಇನ್ನೂ ಎರಡು ಅಕ್ಷರಗಳನ್ನು ನಡುವೆ ಸೇರಿಸಲಾಗಿದೆ. ನೀವು IME ಅನ್ನು ಬಳಸಿಕೊಂಡು ಎರಡು ಟ್ರೆಡೀಶನಲ್ ಚೈನೀಸ್ ಅಕ್ಷರಗಳನ್ನು ಯಶಸ್ವಿಯಾಗಿ ನಮೂದಿಸಿದ್ದೀರಿ. 

ಜಾಪನೀಸ್ IME

ಈ ವಿಭಾಗವು ನೋಟ್‌ಪ್ಯಾಡ್‌ನಲ್ಲಿ ಜಾಪನೀಸ್ IME ಅನ್ನು ಬಳಸಿಕೊಂಡು ಕೆಲವು ಜಾಪನೀಸ್ ಅಕ್ಷರಗಳನ್ನು ಹೇಗೆ ನಮೂದಿಸುವುದು ಎಂಬುದನ್ನು ವಿವರಿಸುತ್ತದೆ.

  1. ನೋಟ್‌ಪ್ಯಾಡ್ ಅನ್ನು ಆರಂಭಿಸಿ. ನೋಟ್‌ಪ್ಯಾಡ್‌ನಲ್ಲಿ ಕೆಲವು ಅಕ್ಷರಗಳನ್ನು ನಮೂದಿಸಿ. ನಂತರದ ಸಮಯದಲ್ಲಿIME ಕಿಟಕಿಯನ್ನು ವೀಶುವಲೈಸ್ ಮಾಡಲು ಈ ಅಕ್ಷರಗಳು ನೆರವಾಗುತ್ತವೆ. 

1.      ನೋಟ್‌ಪ್ಯಾಡ್ ಒಂದು ಸಕ್ರಿಯ ಅನ್ವಯವಾಗಿರಿಸಿಕೊಂಡು, ಇನ್‌ಪುಟ್ ಲೊಕ್ಯಾಲ್ ಸೂಚಕವನ್ನು ಕ್ಲಿಕ್ ಮಾಡಿ ಮತ್ತು ಜಾಪನೀಸ್ ಅನ್ನು ಆರಿಸಿ. ಹೊಸ ಇನ್‌ಪುಟ್ ಭಾಷೆಯು ಜಾಪನೀಸ್ ಆಗಿರುವುದನ್ನು ತೋರಿಸಲು ಸೂಚಕವು JP ಗೆ ಬದಲಾಯಿಸುತ್ತದೆ. 
1.      ತೆರೆಸೂಚಕವನ್ನು ನೋಟ್‌ಪ್ಯಾಡ್‌ ಮೇಲೆ ಇರಿಸಿ. ತೆರೆಸೂಚಕವು ಸಾಲಿನ ಮೊದಲಿನಲ್ಲಿ ಇರುವಂತೆ ಕೀಲಿಮಣೆಯ ಮೇಲಿರುವ ಹೋಮ್‌ ಅನ್ನು ಒತ್ತಿ. ಕೀಲಮಣೆಯಲ್ಲಿ, "N" ಅನ್ನು, ನಂತರ "T" ಅನ್ನು ಒತ್ತಿ. ಈ ಕೆಳಗಿನ ಚಿತ್ರವು ಪ್ರದರ್ಶಕವು ಕಾಣಿಸುವ ರೀತಿಯನ್ನು ತೋರಿಸುತ್ತದೆ. ಏಕೆಂದರೆ N+I ಜಾಪನೀ‌ಸ್‌ನಲ್ಲಿ ಒಂದು ಸಂಪೂರ್ಣವಾದ ಉಚ್ಛಾರವಾಗಿರುತ್ತದೆ.ಬಳಕೆದಾರರು ನಮೂದಿಸಲು ಉದ್ಧೇಶಿಸಿರುವ ಅಕ್ಷರವನ್ನುಊಹಿಸಲು IME ಯು ಸಾಕಷ್ಟು ಮಾಹಿತಿಯನ್ನು ಹೊಂದಿರುತ್ತದೆ. ನೋಟ್‌ಪ್ಯಾಡ್‌ ತೆರೆಸೂಚಕದ ಮೇಲ್ಭಾಗದಲ್ಲಿ ಒಂದು ಅಕ್ಷರವನ್ನು ತೋರಿಸಲಾಗುತ್ತದೆ. ಈ ಅಕ್ಷರವು ನೋಟ್‌ಪ್ಯಾಡ್‌ನ ಒಂದು ಭಾಗವಾಗಿರುವುದಿಲ್ಲ, ಬದಲಿಗೆ ಅದನ್ನು ಬೇರೊಂದು ಕಿಟಕಿಯಲ್ಲಿ ನೋಟ್‌ಪ್ಯಾಡ್‌ನ ಮೇಲ್ಭಾಗದಲ್ಲಿ ಇರುವಂತೆ ತೋರಿಸಲಾಗುತ್ತದೆ ಮತ್ತು ಇದು ನೋಟ್‌ಪ್ಯಾಡ್‌ನಲ್ಲಿ ಈಗಾಗಲೆ ಕೆಳಭಾಗದಲ್ಲಿ ಇರುವ ಅಕ್ಷರಗಳನ್ನು ಅಡಗಿಸುತ್ತದೆ. ಈ ಹೊಸ ಕಿಟಕಿಯನ್ನು ರಚನೆಯ ಕಿಟಕಿ ಎಂತಲೂ, ಮತ್ತು ವಾಕ್ಯಾಂಶವನ್ನು ರಚನೆಯ ವಾಕ್ಯಾಂಶ ಎಂತಲೂ ಕರೆಯಲಾಗುತ್ತದೆ. ರಚನೆಯ ವಾಕ್ಯಾಂಶದ ಅಡಿಯಲ್ಲಿ ಗೆರೆಯನ್ನು ಎಳೆಯುವ ಮೂಲಕ ತೋರಿಸಲಾಗುತ್ತದೆ. 
1.      ಈಗ ಎರಡು ಅಥವ ಹೆಚ್ಚಿನ ಅಕ್ಷರಗಳನ್ನು ನಮೂದಿಸಲು "H", "O", "N", "G", ಮತ್ತು "O" ಅನ್ನು ನಮೂದಿಸಿ. ರಚನೆಯ ವಾಕ್ಯಾಂಶವು, ಈ ಕೆಳಗೆ ತೋರಿಸಲಾಗಿರುವಂತೆ, ಈಗ ನಾಲ್ಕು ಅಕ್ಷರಗಳನ್ನು ಹೊಂದಿರುತ್ತದೆ. 
ಸ್ಪೇಸ್ ಬಾರ್ ಅನ್ನು ಒತ್ತಿ. ಇದು ನಮೂದಿಸಲಾದ ಪಠ್ಯವನ್ನು ವಾಕ್ಯಾಂಶಗಳಾಗಿ ಪರಿವರ್ತಿಸಲು ಸೂಚಿಸುತ್ತದೆ. ಈ ಕೆಳಗಿನ ಚಿತ್ರದಲ್ಲಿ, IME ಯು "ನಿಹೊಂಗೊ" ಉಚ್ಛಾರವನ್ನು ಕಾಂಜಿಯಲ್ಲಿ ಅಂದರೆ "ಜಾಪನೀಸ್ ಭಾಷೆಯಲ್ಲಿ ಬರೆಯಲಾದ ಒಂದು ವಾಕ್ಯಾಂಶವಾಗಿ ಪರಿವರ್ತಿಸುತ್ತದೆ
1.      ಕೀಲಿಮಣೆಯಲ್ಲಿ ಒಂದು ಬಾರಿ ಕೆಳಗಿನ ಬಾಣದ ಗುರುತನ್ನು ಒತ್ತಿ. ಈ ಕೆಳಗೆ ತೋರಿಸಲಾಗಿರುವಂತೆ ಒಂದು ಕಿಟಕಿಯು ನೋಟ್‌ಪ್ಯಾಡ್‌ನ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಿಟಕಿಯನ್ನು ಅಬ್ಯರ್ಥಿ ಕಿಟಕಿ ಎಂದು ಕರೆಯಲಾಗುತ್ತದೆ. ಇದು ನೀವು ನಮೂದಿಸಿದ ಉಚ್ಛಾರಕ್ಕೆ ಹೊಂದಿಕೆಯಾಗುವ ಅಕ್ಷರಗಳು ಅಥವ ವಾಕ್ಯಭಾಗಗಳ ಪಟ್ಟಿಯನ್ನು ತೋರಿಸುತ್ತದೆ. ನೀವು ಅಬ್ಯರ್ಥಿಗಳ ಪಟ್ಟಿಯಿಂದ ಉದ್ಧೇಶಿತ ಪದವನ್ನು ಆರಿಸಬಹುದು. ಈ ಉದಾಹರಣೆಯಲ್ಲಿ, ಮೂರು ಅಬ್ಯರ್ಥಿ ಅಕ್ಷರಗಳು ಒಂದೇ ಉಚ್ಛಾರವನ್ನು ಹೊಂದಿವೆ. ಎರಡನೆಯ ನಮೂದನ್ನು ಹೈಲೈಟ್ ಮಾಡಿರುವುದನ್ನು, ಹಾಗೂ ರಚಿಸಲಾದ ವಾಕ್ಯಾಂಶವು ಬದಲಾಗುವುದನ್ನು ಗಮನಿಸಿ. ಕೆಳಮುಖವಾದ ಬಾಣದ ಗುರುತನ್ನು ಒತ್ತಿದ ಕಾರಣದಿಂದಾಗಿ ಇದು ಉಂಟಾಗಿದೆ. ​
1.      ಎರಡನೆಯ ನಮೂದನ್ನು ಆಯ್ಕೆ ಮಾಡಲು "2" ಅನ್ನು ಟೈಪ್ ಮಾಡಿ. ಈ ಅಬ್ಯರ್ಥಿ ಕಿಟಕಿಯು ಮುಚ್ಚಲ್ಪಡುತ್ತದೆ, ಮತ್ತು ಕಾಂಪೋಸಿಶನ್ ಸ್ಟ್ರಿಂಗ್ ಅಪ್‌ಡೇಟ್ ಮಾಡಲಾದ ಅಕ್ಷರದಿಂದ ಅಪ್‌ಡೇಟ್ ಮಾಡಲ್ಪಡುತ್ತದೆ. 
1.      ಎಂಟರ್ ಅನ್ನು ಒತ್ತಿ. ಇದು ರಚಿಸುವಿಕೆಯು ಪೂರ್ಣಗೊಂಡಿದೆ ಮತ್ತು ವಾಕ್ಯಾಂಶವನ್ನು ಅನ್ವಯಕ್ಕೆ (ಈ ಉದಾಹರಣೆಯಲ್ಲಿ ನೋಟ್‌ಪ್ಯಾಡ್‌ಗೆ)  ಕಳಿಸಬೇಕು ಎಂದು IME ಗೆ ಸೂಚಿಸುತ್ತದೆ. ರಚಿಸುವಿಕೆಯ ಕಿಟಕಿಯು ಮುಚ್ಚಲ್ಪಡುತ್ತದೆ ಮತ್ತು WM_CHAR. ಮೂಲಕ ಎರಡು ಅಕ್ಷರಗಳನ್ನು ನೋಟ್‌ಪ್ಯಾಡ್‌ಗೆ ಕಳುಹಿಸಲ್ಪಡುತ್ತದೆ ಈ ಕೆಳಗಿನ ಚಿತ್ರದಲ್ಲಿ ಅಡಿಗೆರೆಯು ಹೊರಟುಹೋಗಿದೆ ಏಕೆಂದರೆ ತೋರಿಸಲಾದ ಎರಡು ಅಕ್ಷರಗಳು ನೋಟ್‌ಪ್ಯಾಡ್‌ನಲ್ಲಿನ ಪಠ್ಯದ ಒಂದು ಭಾಗವಾಗಿದೆ. ನೋಟ್‌ಪ್ಯಾಡ್‌ನಲ್ಲಿ ಈಗಿರುವ ಪಠ್ಯವಾದ "ABCDEFG" ಅನ್ನು  ಬಲಭಾಗಕ್ಕೆ ಸ್ಥಳಾಂತರಿಸಲಾಗಿದೆ ಏಕೆಂದರೆ ಇನ್ನೂ ಎರಡು ಅಕ್ಷರಗಳನ್ನು ನಡುವೆ ಸೇರಿಸಲಾಗಿದೆ. ನೀವು IME ಅನ್ನು ಬಳಸಿಕೊಂಡು ಕೆಲವು ಜಾಪನೀಸ್ ಅಕ್ಷರಗಳನ್ನು ಯಶಸ್ವಿಯಾಗಿ ನಮೂದಿಸಿದ್ದೀರಿ.

ಕೊರಿಯನ್ IME

ಈ ವಿಭಾಗವು ನೋಟ್‌ಪ್ಯಾಡ್‌ನಲ್ಲಿ ಒಂದಿಷ್ಟು ಕೊರಿಯನ್ ಅಕ್ಷರಗಳನ್ನು ನಮೂದಿಸಲು ಹೇಗೆ ಕೊರಿಯನ್ IME ಯನ್ನು ಬಳಸಬಹುದು ಎಂಬುದನ್ನು ವಿವರಿಸುತ್ತದೆ.

  1. ನೋಟ್‌ಪ್ಯಾಡ್ ಅನ್ನು ಆರಂಭಿಸಿ. ನೋಟ್‌ಪ್ಯಾಡ್‌ನಲ್ಲಿ ಕೆಲವು ಅಕ್ಷರಗಳನ್ನು ನಮೂದಿಸಿ. ನಂತರದ ಸಮಯದಲ್ಲಿIME ಕಿಟಕಿಯನ್ನು ವೀಶುವಲೈಸ್ ಮಾಡಲು ಈ ಅಕ್ಷರಗಳು ನೆರವಾಗುತ್ತವೆ.
Characters that help to visualize the IME window better later
  1. ನೋಟ್‌ಪ್ಯಾಡ್ ಒಂದು ಸಕ್ರಿಯ ಅನ್ವಯವಾಗಿರಿಸಿಕೊಂಡು, ಇನ್‌ಪುಟ್ ಲೊಕ್ಯಾಲ್ ಸೂಚಕವನ್ನು ಕ್ಲಿಕ್ ಮಾಡಿ ಮತ್ತು ಕೊರಿಯನ್ ಅನ್ನು ಆರಿಸಿ. ಹೊಸ ಇನ್‌ಪುಟ್ ಭಾಷೆಯು ಜಾಪನೀಸ್ ಆಗಿರುವುದನ್ನು ತೋರಿಸಲು ಸೂಚಕವು KO ಗೆ ಬದಲಾಯಿಸುತ್ತದೆ. 

  1. ತೆರೆಸೂಚಕವನ್ನು ನೋಟ್‌ಪ್ಯಾಡ್‌ ಮೇಲೆ ಇರಿಸಿ ತೆರೆಸೂಚಕವು ಸಾಲಿನ ಮೊದಲಿನಲ್ಲಿ ಇರುವಂತೆ ಕೀಲಿಮಣೆಯ ಮೇಲಿರುವ ಹೋಮ್‌ ಅನ್ನು ಒತ್ತಿ, ನಂತರ "G" ಅನ್ನು ನಮೂದಿಸಿ. ಈ ಕೆಳಗಿನ ಚಿತ್ರವು ಪ್ರದರ್ಶಕವು ಕಾಣಿಸುವ ರೀತಿಯನ್ನು ತೋರಿಸುತ್ತದೆ. "G" ಗೆ ಸಂಬಂಧಿಸಿದ ಫೋನೆಟಿಕ್ ಘಟಕವು ನೋಟ್‌ಪ್ಯಾಡ್‌ನಲ್ಲಿ ಕಾಣಸಿಕೊಳ್ಳುತ್ತದೆ ಹಾಗೂ ಅದನ್ನು ದಪ್ಪನೆಯ ತೆರೆಸೂಚಕದಿಂದ ಹೈಲೈಟ್ ಮಾಡಲಾಗುತ್ತದೆ. ಈ ಹೈಲೈಟ್ ಮಾಡಿದ ಅಕ್ಷರವನ್ನು ಕಂಪೋಸಿಶನ್ ಸ್ಟ್ರಿಂಗ್ ಎಂದು ಕರೆಯಲಾಗುತ್ತದೆ. ಇತರೆ ಭಾಷೆಯಲ್ಲಿರುವ IME ಗೆ ವಿರುದ್ಧವಾಗಿ, ರಚನೆಯ ವಾಕ್ಯಾಂಶವನ್ನು ನೋಟ್‌ಪ್ಯಾಡ್‌ಗೆ ಕಳುಹಿಸಲಾಗುತ್ತದೆ ಮತ್ತು ಬಳಕೆದಾರರು ಒಂದು ಫೋನೆಟಿಕ್ ಘಟಕವನ್ನುನಮೂದಿಸಿದ ಕೂಡಲೆ ಈಗಿರುವ ಪಠ್ಯದ ಎಡಭಾಗದಲ್ಲಿ ಅದನ್ನು ಸೇರಿಸಲಾಗುತ್ತದೆ. 

  1. ಈ ಸಮಯದಲ್ಲಿ, ರಚನೆಯ ವಾಕ್ಯಾಂಶವನ್ನು ಒಂದು ಮಧ್ಯಂತರ ಅಕ್ಷರವನ್ನು ಹೊಂದಿರುತ್ತದೆ ಏಕೆಂದರೆ ಬಳಕೆದಾರರು ನಮೂದಿಸುವ ಯಾವುದೆ ಹೆಚ್ಚುವರಿ ಫೋನೆಟಿಕ್ ಘಟಕಗಳಿಂದಾಗಿ ಈಗಾಗಲೆ ಇರುವ ರಚನೆಯ ವಾಕ್ಯಾಂಶವನ್ನು ಬದಲಾಯಿಸುತ್ತದೆ. ಈಗ "K" ಅನ್ನು, ನಂತರ "S" ಅನ್ನು ಟೈಪ್ ಮಾಡಿ. ಪ್ರತಿಯೊಂದು ಕೀಲಿಹೊಡೆತದ ಕಾರಣದಿಂದಾಗಿ ಮಧ್ಯಂತರ ಅಕ್ಷರವು ಬದಲಾವಣೆಗೊಳ್ಳುವುದನ್ನು ನೀವು ಗಮನಿಸಬಹುದು. 

  1. ಈಗ ಬಲ ಕಂಟ್ರೋಲ್ ಕೀಲಿಯನ್ನು ಒತ್ತಿ. ಒಂದು ಅಬ್ಯರ್ಥಿ ಕಿಟಕಿಯು ಕಾಣಿಸಿಕೊಳ್ಳುತ್ತದೆ ಮತ್ತು ಇದು ನೀವು ನಮೂದಿಸಿದ G+K+S ಉಚ್ಛಾರಕ್ಕೆ ಸಮನಾದುದನ್ನು ಆಯ್ಕೆ ಮಾಡಲು ಹಂಜಾ ಅಕ್ಷರಗಳ ಪಟ್ಟಿಯನ್ನು ತೋರಿಸುತ್ತದೆ. 

ಮೊದಲನೆಯ ನಮೂದನ್ನು ಆಯ್ಕೆ ಮಾಡಲು “1” ಅನ್ನು ಟೈಪ್ ಮಾಡಿ. ಈ ಅಬ್ಯರ್ಥಿ ಕಿಟಕಿಯು ಮುಚ್ಚಲ್ಪಡುತ್ತದೆ, ಮತ್ತು ಆಯ್ಕೆ ಮಾಡಲಾದ ಅಕ್ಷರದಿಂದ ರಚನೆಯ ವಾಕ್ಯಾಂಶವನ್ನು ಅಪ್‌ಡೇಟ್ ಮಾಡಲಾಗುತ್ತದೆ
  1. "R", "N", ಮತ್ತು "R" ಅನ್ನು ಟೈಪ್ ಮಾಡಿ. ನಂತರ ಇನ್ನೊಂದು ಅಕ್ಷರವನ್ನು ನಮೂದಿಸಲು ಕಂಟ್ರೋಲ್ ಕೀಲಿಯನ್ನು ಒತ್ತಿ. 

  1. ಮೊದಲನೆಯ ನಮೂದನ್ನು ಆಯ್ಕೆ ಮಾಡಲು "1" ಅನ್ನು ಟೈಪ್ ಮಾಡಿ. ನೀವು IME ಅನ್ನು ಬಳಸಿಕೊಂಡು ಎರಡು ಕೊರಿಯನ್ ಅಕ್ಷರಗಳನ್ನು ಯಶಸ್ವಿಯಾಗಿ ನಮೂದಿಸಿದ್ದೀರಿ. ಕೊರಿಯನ್ ಅಕ್ಷರಗಳು ಈಗಾಗಲೆ ನೋಟ್‌ಪ್ಯಾಡ್‌ನಲ್ಲಿನ ಪಠ್ಯ ವಾಕ್ಯಾಂಶದ ಒಂದು ಭಾಗವಾಗಿದೆ. 


ಅಗತ್ಯತೆಗಳು

ಕಾರ್ಯಾಚರಣೆ ವ್ಯವಸ್ಥೆವಿಂಡೋಸ್ XP
ಲಭ್ಯವಿರುವ ಹಾರ್ಡ್ ಡಿಸ್ಕ್ ಸ್ಥಳ ಕನಿಷ್ಟ 230 MB
ವಿದೇಶಿ ಭಾಶಾ ಕಡತದ ಸ್ಥಳಗಳು ವಿಂಡೋಸ್ XP ಅನುಸ್ಥಾಪನಾ ಕಾಂಪ್ಯಾಕ್ಟ್ ಡಿಸ್ಕ್ ಅಥವಾ ವಿಂಡೋಸ್ XP ಅನುಸ್ಥಾಪನೆಯ ಕಡತಗಳನ್ನು ಹೊಂದಿರುವ ನೆಟ್‌ವರ್ಕ್ ಸ್ಥಳ
ಸಮಯವಿದೇಶಿ ಭಾಷಾ ಕಡತಗಳನ್ನು ಅನುಸ್ಥಾಪಿಸಲು ಸುಮಾರು 10 ನಿಮಿಷಗಳು; ನಾಲ್ಕು ವಿವಿಧ IMEಗಳನ್ನು ಅವಲೋಕಿಸಲು ಪ್ರತಿಯೊಂದಕ್ಕೆ ಸುಮಾರು ಹತ್ತು ನಿಮಿಷಗಳು.

​ 


​​​​​​

Read More on....

This site uses Unicode and Open Type fonts for Indic Languages. Powered by Microsoft SharePoint 2013.
©2016 Microsoft Corporation. All rights reserved.