Go Search

 

 

ಎಂಎಸ್‌ಡಿಎನ್‌ ಕುರಿತ ಬ್ಲಾಗ್

 

ಮೈಕ್ರೋಸಾಫ್ಟ್ ಎಂಎಸ್‌ಡಿಎನ್ ಬ್ಲಾಗ್‌ನಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದ ಹಲವು ಲೇಖನಗಳು ಮತ್ತು ಜಗತ್ತಿನಾದ್ಯಂತ ಮೈಕ್ರೋಸಾಫ್ಟ್‌ಗೆ ಸಂಬಂಧಿಸಿದ  ಪ್ರಮುಖ ಘಟನೆಗಳ ಕುರಿತು ಮಾಹಿತಿಗಳಿವೆ. ಈ ಬ್ಲಾಗಿನ ಪ್ರಮುಖ ಲಕ್ಷಣವೆಂದರೆ ಇದು ಹಲವಾರು ಯೂರೋಪಿಯನ್ ಭಾಷೆಗಳಿಗೆ ತೆರೆದು ಕೊಂಡಿರುವುದು.


ಈ ಬ್ಲಾಗಿನಲ್ಲಿ ಪ್ರಕಟಗೊಂಡಿರುವ ಕೆಲವು ಲೇಖನಗಳ ಮಾದರಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

 

http://blogs.msdn.com/

 

ಮೈಕ್ರೋಸಾಫ್ಟ್ ಡೆಸ್ಕ್‌ಟಾಪ್ ವಾಸ್ತವಿಕ ತಂತ್ರಜ್ಞಾನ, ಇದರ ಹಿಂದಿರುವ ಮೂಲಭೂತ ತತ್ವಗಳು ಸರ್ವರ್ ಅಪ್ಲಿಕೇಶನ್-ವಿಗೂ (Server App-V) ಅನ್ವಯಿಸುತ್ತದೆ. ಹಾಗಾಗಿ ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಿಮಗೆ ನೋಡಬೇಕು ಮತ್ತು ಕೇಳಬೇಕು ಎಂದೆನಿಸಿದರೆ, ಇದು ನಿಮಗೊಂದು ಅವಕಾಶ. ಅಪ್ಲಿಕೇಶನ್- ವಿಯ ಕ್ಲೌಡ್ ವಿಭಾಗದಲ್ಲಿ ನಿಮಗೆ ಆಸಕ್ತಿ ಇದ್ದರೆ, ಈ ಭಾಗವು ನಿಮ್ಮನ್ನು ಕುತೂಹಲಿಗಳಾಗಿಸುವಲ್ಲಿ ಸಂಶಯವಿಲ್ಲ. ಸರಣಿಯಲ್ಲಿರುವ ನಂತರದ ಕಾರ್ಯಕ್ರಮವೆಂದರೆ ಅಟೊಮೈಸೇಶನ್ ಮತ್ತು ಪಬ್ಲಿಕ್ ಕ್ಲೌಡ್, ಎಪ್ರಿಲ್ 12ರಂದು. ಡೈನಾಮಿಕ್ ದತ್ತಾಂಶ ಕೇಂದ್ರ ಮತ್ತು ಖಾಸಗಿ ಕ್ಲೌಡ್‌ನ ಆವಿಷ್ಕಾರವು ಅಟೋಮೇಟೆಡ್ ಮ್ಯಾನೇಜ್‌ಮೆಂಟ್ ಆಗಿದೆ. ಒಪಲೀಸ್ ಒಂದು ಗ್ಲೂ ಆಗಿದ್ದು ಆಪರೇಶನ್ಸ್ ಮ್ಯಾನೇಜರ್‌ನಲ್ಲಿ ಇದನ್ನು ಸಾಧ್ಯವಾಗಿರಿಸುತ್ತದೆ.

 

ಟೆಕ್ ಡೇಸ್ ಬೆಲ್ಜಿಯಂ 2011

 

ಈಗಿನಿಂದ ಕೇವಲ ಮೂರೇ ವಾರಗಳಲ್ಲಿ 1400ಕ್ಕಿಂತ ಹೆಚ್ಚಿನ ಇತರ ಡೆವಲಪರ್‌ಗಳು ಮತ್ತು ಮಾಹಿತಿ ತಂತ್ರಜ್ಞಾನ ವೃತ್ತಿಪರರೊಂದಿಗೆ ಉನ್ನತವಾದ ಅಂತಾರಾಷ್ಚ್ರೀಯ ಮತ್ತು ಸ್ಥಳೀಯ ಉಪನ್ಯಾಸಕರಿಂದ ನೀವು ಕಲಿಯ ಬಹುದಾಗಿದೆ. ಎಪ್ರಿಲ್ 26 ಅಥವಾ 27ರಂದು ನಡೆಯಲಿರುವ ಸಮ್ಮೇಳನದಲ್ಲಿ  ಆರು ಡೆವಲಪರ್ ಮತ್ತು ಐಟಿ- ಪ್ರೋ ಟ್ರಾಕ್‌ಗಳು ನಿಮಗೆ ಹೊಸ ತಂತ್ರಜ್ಞಾನದ ಮಿಶ್ರಣವನ್ನು ತರಲಿದೆ ಮತ್ತು ಪ್ರಸಕ್ತ ತಂತ್ರಜ್ಞಾನದ ಕುರಿತ ಆಳವಾದ ವಿಷಯಗಳನ್ನು ಯೋಜಿತ 60ಕ್ಕೂ ಹೆಚ್ಚಿನ ಅಧಿವೇಶನದಲ್ಲಿ ತಿಳಿಯಬಹುದಾಗಿದೆ.


ವಿಂಡೋಸ್ ಅಜೂರ್ ಮ್ಯಾನೇಜ್‌ಮೆಂಟ್ ಸೆಂಮ್‌ಡ್ಲೆಟ್ಸ್‌ಗಳು (Windows Azure Management Cmdlets) ಪವರ್ ಶೆಲ್ ಕಮಾಂಡ್- ಲೈನ್‌ನಿಂದ ನಿಮ್ಮ ಹೋಸ್ಟೆಡ್ ಸೇವೆಗಳನ್ನು ನಿರ್ವಹಿಸಲು ಉಪಯುಕ್ತವಾಗಿದೆ, ಮತ್ತು ಅವುಗಳನ್ನು ಇತ್ತೀಚೆಗೆ ಎಸ್‌ಡಿಕೆ 1.3 (SDK 1.3). ವಿಂಡೋಸ್ ಅಜೂರ್ ಮ್ಯಾನೇಜ್‌ಮೆಂಟ್ ಸೆಂಮ್‌ಡ್ಲೆಟ್ಸ್‌ಗಳು ಒಂದು ಸೆಂಮ್‌ಡ್ಲೆಟ್ಸ್‌‌ಗಳ (Cmdlets) ಗೊಂಚಲನ್ನು ಒದಗಿಸುತ್ತಿದ್ದು ಇದು ವಿಂಡೋಸ್ ಅಜೂರ್ ಮ್ಯಾನೇಜ್‌ಮೆಂಟ್ ಮತ್ತು ಡಯಗ್ನೋಸ್ಟಿಕ್ಸ್ ಎಪಿಐಗಳನ್ನು (Diagnostics API) ವ್ಯಾಪಿಸುತ್ತದೆ ಮತ್ತು ಬಳಕೆದಾರನೊಬ್ಬನಿಗೆ ಅವರ ವಿಂಡೋಸ್ ಅಜೂರ್ ಕಾರ್ಯಾಚರಣೆಗಳನ್ನು ಕಾನ್ಪಿಗರ್ ಮಾಡಲು ಮತ್ತು ನಿರ್ವಹಿಸಲು ಶಕ್ತವಾಗಿಸುತ್ತದೆ. ನಿಮ್ಮ ನಿಯೋಜನೆಗಳು ಮತ್ತು ನವೀಕರಣಗಳನ್ನು ಸ್ಕ್ರಿಪ್ಟ್ಔಟ್ ಮಾಡುವುದನ್ನು ಸರಳಗೊಳಿಸುವ ಮೂಲಕ ಮತ್ತು ನಿಮ್ಮ ಅಪ್ಲಿಕೇಶನ್‌ಗಳನ್ನು ಪ್ರಮಾಣೀಕರಿಸುವ ಮೂಲಕ ನಿಮ್ಮ ವಿಂಡೋಸ್ ಅಜೂರ್ ಅಪ್ಲಿಕೇಶನ್‌ಗಳನ್ನು ವೃದ್ಧಿಗೊಳಿಸಲು ಮತ್ತು ಪರೀಕ್ಷಿಸಲು ಈ ಸೆಂಮ್‌ಡ್ಲೆಟ್‌‍ಗಳು ಸಹಾಯ ಮಾಡಬಹುದಾಗಿದೆ. ಇದಲ್ಲದೆ, ಸೆಂಮ್‌ಡ್ಲೆಟ್‌ಗಳು ನಿಮ್ಮ ಡಯಗ್ನೋಸ್ಟಿಕ್ ಕಾನ್ಫಿಗರೇಶನನ್ನು ಹೊಂದಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.


ಇವುಗಳು ಎಂಎಸ್‌ಡಿಎನ್ ಬ್ಲಾಗ್‌ನಲ್ಲಿ ಚರ್ಚಿಸಲಾಗಿರುವ ಕೆಲವು ಲೇಖನಗಳು.

Read More on....

This site uses Unicode and Open Type fonts for Indic Languages. Powered by Microsoft SharePoint Server.
©2013 Microsoft Corporation. All rights reserved.