Trace Id is missing
stone chariot at Hampi, Karnataka

ಭಾಷೆಗಳು ಮತ್ತು ಆ್ಯಪ್‌ಗಳು ಯಾವುದೇ ಇರಲಿ, ಎಲ್ಲರಿಗೂ ಬಳಕೆಯ ಸಾಧ್ಯತೆ

ಒಂದು ದೇಶವು ನಿಜವಾಗಿಯೂ ಡಿಜಿಟಲ್‌ ಆಗಬೇಕೆಂದರೆ, ಆ ದೇಶದ ಜನರು ಯಾವುದೇ ಭಾಷೆಯನ್ನು ಬಳಸುತ್ತಿರಲು, ತಂತ್ರಜ್ಞಾನವು ಅವರೆಲ್ಲರಿಗೂ ದೊರಕಬೇಕು ಮತ್ತು ಅದನ್ನು ಅವರು ಬಳಸಲು ಸಾಧ್ಯವಿರಬೇಕು. ನಮ್ಮ ದೇಶವು 22 ಅಧೀಕೃತ ಭಾಷೆಗಳನ್ನು ಹೊಂದಿದೆ ಹಾಗೂ ಜನಸಂಖ್ಯೆಯ ದೃಷ್ಟಿಯಿಂದ ಅವುಗಳಲ್ಲಿ 6 ಭಾಷೆಗಳು ಜಗತ್ತಿನಲ್ಲಿಯೇ ಅತಿಹೆಚ್ಚು ಜನರು ಬಳಸುವ ಭಾಷೆಗಳ ಪಟ್ಟಿಯಲ್ಲಿ ಸೇರಿರುವುದರಿಂದ, ಮೈಕ್ರೋಸಾಫ್ಟ್‌ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಹೆಚ್ಚು ಉತ್ಪನ್ನಗಳನ್ನು ಮತ್ತು ಆ್ಯಪ್‌ಗಳನ್ನು ರಚಿಸಲು ಅವಿರತವಾಗಿ ಶ್ರಮಿಸುತ್ತಿದೆ.

2000 ಇಸವಿಯಿಂದ ಭಾರತೀಯ ಭಾಷೆಗಳಿಗೆ ನೇಟೀವ್ ಯುನಿಕೋಡ್ ಬೆಂಬಲವನ್ನು ಒದಗಿಸುವಲ್ಲಿ ಮೈಕ್ರೋಸಾಫ್ಟ್ ಮುಂಚೂಣಿಯಲ್ಲಿದೆ . ಭಾಷೆಗಳ ನಡುವೆಯ ಗೋಡೆಯನ್ನು ತೊಡೆದುಹಾಕಲು, ಎರಡು ದಶಕಗಳ ಹಿಂದೆ ನಾವು ಭಾರತೀಯ ಭಾಷೆಗಳೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದೆವು ಮತ್ತು ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್‌ನ ವೇಗವನ್ನು ಹೆಚ್ಚಿಸಲು ಭಾಷಾ ಇಂಡಿಯಾ ಯೋಜನೆಯನ್ನು ಹುಟ್ಟು ಹಾಕಿದೆವು. ಅದರ ನಂತರ – ಸಂವಿಧಾನದಿಂದ ಗುರುತಿಸಲಾದ ಎಲ್ಲಾ 22 ಭಾರತೀಯ ಭಾಷೆಗಳಲ್ಲಿ ಪಠ್ಯ ನಮೂದಿಸುವ ಸೌಲಭ್ಯದಿಂದ ಹಿಡಿದು 12 ಭಾಷೆಗಳಲ್ಲಿ ವಿಂಡೋಸ್ ಇಂಟರ್ಫೇಸ್‌ನ ಲಭ್ಯತೆಯ ವರೆಗೆ ನಾವು ಬಹುದೂರ ಸಾಗಿ ಬಂದಿದ್ದೇವೆ. ನಮ್ಮ ಭಾಷಾ ಸಮುದಾಯದ ಜಾಲತಾಣವಾದ Bhashaindia.com ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಗಣಕ ಸಂಬಂಧಿ ವಿಷಯ ಮತ್ತು ತಂತ್ರಾಂಶಗಳ,ಒಂದು ಪ್ರಮುಖ ಆಕರವಾಗಿದೆ.

ಸ್ಥಳೀಯ ಭಾಷೆಯನ್ನು ಇಂಟರ್ನೆಟ್ ಬಳಸುತ್ತಿರುವವರ ಸಂಖ್ಯೆಯು ಭಾರತದಲ್ಲಿ ನಿರಂತರವಾಗಿ ಬೆಳೆಯುತ್ತಿದೆ. ಡಿಜಿಟಲ್ ಒಳಗೊಳ್ಳುವಿಕೆಯನ್ನು ಜನರನ್ನು ಸಬಲಗೊಳಿಸುವ ಒಂದು ಅತಿದೊಡ್ಡ ಅವಕಾಶವೆಂಬುದನ್ನು ಎತ್ತಿತೋರಿಸುತ್ತದೆ. ಭಾರತೀಯ ಭಾಷೆಗಳಲ್ಲಿ ಹೆಚ್ಚು ಹೆಚ್ಚು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿರುವುದರಿಂದ, ಕೋಟ್ಯಾಂತರ ಜನರು ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ಸಂವಹನ, ಇಕಾಮರ್ಸ್, ಮನರಂಜನೆ, ಕೃಷಿ, ಇ-ಆಡಳಿತ ಮತ್ತು ಪ್ರಯಾಣವೂ ಹಲವಾರು ಕ್ಷೇತ್ರಗಳಲ್ಲಿನ ಸಂಪನ್ಮೂಲವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿದೆ. ಮೈಕ್ರೋಸಾಫ್ಟ್ ಉತ್ಪನ್ನಗಳು ಭಾರತೀಯ ಭಾಷೆಗಳಲ್ಲಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಕೆಳಗೆ ವಿವರಿಸಲಾಗಿದೆ:

ವಿಂಡೋಸ್ 10

ಭಾರತೀಯ ಭಾಷೆಗಳಲ್ಲಿ ಕೆಲಸ ಮಾಡುವ ವಿಷಯಕ್ಕೆ ಬಂದಾಗ, ಹೊಚ್ಚ ಹೊಸ ವಿಂಡೋಸ್ ಶಕ್ತಿಯುತ ಮತ್ತು ಸಂಪೂರ್ಣ ವೈಶಿಷ್ಟ್ಯಗಳನ್ನು ಹೊಂದಿರುವ ಒಂದು OS ಆಗಿದೆ. ಪಠ್ಯವನ್ನು ಸುಲಭವಾಗಿ ನಮೂದಿಸುವುದರ ಜೊತೆಗೆ, ನೀವು ವಿಂಡೋಸ್ ಯೂಸರ್ ಇಂಟರ್ಫೇಸ್ ಅನ್ನು ನಿಮಗೆ ಬೇಕಿರುವ ಭಾಷೆಗೆ ಬದಲಾಯಿಸಿಕೊಳ್ಳಬಹುದು. ಯುನಿಕೋಡ್ ಶಿಷ್ಟತೆಯನ್ನು ಬೆಂಬಲಿಸುವ ಯಾವುದೇ ಫಾಂಟ್‌ಗಳನ್ನು ನೀವು ಬಳಸಬಹುದು ಮತ್ತು ವಾಸ್ತವವಾಗಿ ಯುನಿಕೋಡ್ ಅನ್ನು ಬೆಂಬಲಿಸುವ ಯಾವುದೇ ಅಪ್ಲಿಕೇಶನ್‌ನಲ್ಲಿ ಕೆಲಸ ಮಾಡಬಹುದು. ಭಾರತೀಯ ಭಾಷೆಗಳಲ್ಲಿ ಕೆಲಸ ಮಾಡುವ ಹಲವಾರು ಆ್ಯಪ್‌ಗಳಿವೆ, ಅವುಗಳಲ್ಲಿ ಮೈಕ್ರೋಸಾಫ್ಟ್ ಟ್ರಾನ್ಸಲೇಟರ್ ಮತ್ತು ಮ್ಯಾಪ್ಸ್ ಪ್ರಮುಖವಾದವುಗಳು. ಒಟ್ಟಾರೆಯಾಗಿ ಹೇಳುವುದಾದರೆ, ವಿಂಡೋಸ್ 10 ಭಾರತೀಯ ಭಾಷೆಯ ಬಳಕೆದಾರನಿಗೆ ಚೆನ್ನಾಗಿ ಪರಿಚಯವಿರುವ ಬಗೆಯಲ್ಲಿ ಅನುಕೂಲಕರವಾದ ಕಂಪ್ಯೂಟಿಂಗ್ ಅನುಭವವನ್ನು ಒದಗಿಸುತ್ತದೆ.

ಆಫೀಸ್ 365 

ವಿವಿಧ ಭೌಗೋಳಿಕ ಪರಿಸರಗಳಲ್ಲಿರುವ ಮತ್ತು ಬೇರೆ ಬೇರೆ ಪ್ಲಾಟ್‌ಫಾರ್ಮುಗಳನ್ನು ಬಳಸುತ್ತಿರುವ ಬಳಕೆದಾರರು ತಮ್ಮ ಸ್ಥಳೀಯ ಭಾಷೆಯಲ್ಲಿ ಕಂಟೆಂಟ್ ಅನ್ನು ಸುಲಭವಾಗಿ ರಚಿಸಲು ಮತ್ತು ಹಂಚಿಕೊಳ್ಳಲು ಆಫೀಸ್ ಸೂಟ್ ಅವಕಾಶ ನೀಡುತ್ತದೆ. ಆಫೀಸ್ ಆ್ಯಪ್‌ಗಳು ಎಲ್ಲಾ ಭಾರತೀಯ ಭಾಷೆಗಳಲ್ಲಿ ಕೆಲಸ ಮಾಡುತ್ತವೆ ಮತ್ತು ವಿಂಡೋಸ್ 7 ಅಥವಾ ನಂತರದ ಆವೃತ್ತಿಗಳಲ್ಲಿ ಕೆಲಸ ಮಾಡುತ್ತವೆ. ಸಾಮಾನ್ಯ ಗ್ರಾಹಕರ ಮತ್ತು ವಾಣಿಜ್ಯಿಕ ಉದ್ಧೇಶವನ್ನು ಹೊಂದಿರುವ ಗ್ರಾಹಕರ ಸಂವಹನಗಳಿಗೆ ಯಾವುದೇ ಅಡೆತಡೆಗಳಿಲ್ಲದೆ ನೆರವಾಗುವಂತೆ ಆಫೀಸ್ ಆ್ಯಪ್‌ಗಳು ವಿಂಡೋಸ್, ಆಂಡ್ರಾಯ್ಡ್ ಮತ್ತು iOS ನಲ್ಲಿ ಲಭ್ಯವಿವೆ. 

ಮೈಕ್ರೋಸಾಫ್ಟ್ ಲಾಂಗ್ವೇಜ್ ಎಕ್ಸಸರೀಸ್ ಪ್ಯಾಕ್ಸ್ 

ಮೈಕ್ರೋಸಾಫ್ಟ್ ಲಾಂಗ್ವೇಜ್ ಎಕ್ಸೆಸರೀಸ್ ಬಳಸಿಕೊಂಡು ವಿಂಡೋಸ್ ಮತ್ತು ಆಫೀಸ್ ಅನ್ನು ಮೈಕ್ರೋಸಾಫ್ಟ್ ಬೆಂಬಲಿಸುತ್ತದೆ. ಇದನ್ನು ನೀವು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಲಾಂಗ್ವೇಜ್ ಎಕ್ಸೆಸರೀಸ್ ಪ್ಯಾಕ್ ವಿಂಡೋಸ್‌ಗಾಗಿ ಸುಮಾರು 300,000 ಪದಗಳನ್ನು ಮತ್ತು ಆಫೀಸ್‌ಗಾಗಿ 600,000 ಪದಗಳನ್ನು ಹೊಂದಿದೆ. ಲಾಂಗ್ವೇಜ್ ಎಕ್ಸೆಸರಿ ಪ್ಯಾಕ್‌ಗಳು ಬಳಕೆದಾರ ಇಂಟರ್ಫೇಸ್ ಅನ್ನು ನಿಮ್ಮ ಇಚ್ಛೆಯ ಭಾಷೆಗೆ ಬದಲಾಯಿಸುತ್ತದೆ ಮತ್ತು ಸ್ಥಳೀಯ ಭಾಷೆಯಲ್ಲಿ ಸೂಚನೆಗಳು ಮತ್ತು ಡೈಲಾಗ್ ಬಾಕ್ಸ್‌ಗಳನ್ನು ಒದಗಿಸುತ್ತದೆ.

ಇನ್‌ಪುಟ್ ಮೆತೆಡ್ ಎಡಿಟರ್ಸ್

ವಿಂಡೋಸ್‌ನಲ್ಲಿ ಭಾರತೀಯ ಭಾಷೆಗಳಿಗಾಗಿನ ಶಿಷ್ಟ ಕೀಬೋರ್ಡ್‌ಗಳನ್ನು ಸೇರಿಸಲಾಗಿದ್ದರೂ ಸಹ, ಕೆಲವು ಬಳಕೆದಾರರು ಲಿಪ್ಯಂತರದಂತಹ ವಿಧಾನಗಳನ್ನು ಬಳಸಿಕೊಂಡು ಪಠ್ಯವನ್ನು ನಮೂದಿಸಲು ಬಯಸುತ್ತಾರೆ. ಅಂತಹ ಬಳಕೆದಾರರಿಗಾಗಿ ಮೈಕ್ರೋಸಾಫ್ಟ್ ಹಲವಾರು ಬಗೆಯ ಇನ್‌ಪುಟ್ ಮೆತೆಡ್ ಎಡಿಟರ್ಸ್‌ ಅನ್ನು (I M Eಗಳನ್ನು) Bhashaindia.com ನಲ್ಲಿ ಲಭ್ಯವಾಗಿಸಿದೆ. 

ಬಿಂಗ್

ಈ ಹುಡುಕು ಸಾಧನವು ಒಂಬತ್ತು ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಭಾರತೀಯ ಭಾಷೆಯ ಅನುಭವವನ್ನು ಡೆಸ್ಕ್‌ಟಾಪ್ ಹಾಗೂ ಮೊಬೈಲ್‌ ಸಾಧನಗಳಲ್ಲಿಯೂ ಸಹ ಪಡೆದುಕೊಳ್ಳಲಾಗಿದೆ. ಬಿಂಗ್ ಟ್ರಾನ್ಸ್‌ಲೇಟರ್ ಹಲವಾರು ಭಾರತೀಯ ಭಾಷೆಗಳಲ್ಲಿ ಕೆಲಸ ಮಾಡುತ್ತದೆ.

ಸ್ಕೈಪ್ ಲೈಟ್

ಆಂಡ್ರಾಯ್ಡ್‌ಗಾಗಿ ನಮ್ಮ ಸ್ಕೈಪ್‌ ಆ್ಯಪ್‌ನ ವೇಗವಾದ ಮತ್ತು ಒಂದು ಹಗುರತೂಕದ ಆವೃತ್ತಿಯನ್ನು ನಿರ್ಮಿಸಲಾಗಿದೆ. ಭಾರತದಲ್ಲಿನ ನೆಟ್‌ವರ್ಕ್‌ ಸಮಸ್ಯೆಗಳ ನಡುವೆಯೂ ಸಹ ಇಲ್ಲಿನ ಜನರು ಪರಸ್ಪರ ಸಂಪರ್ಕ ಹೊಂದಿರುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಆಪ್ ಅನ್ನು 11 ಭಾರತೀಯ ಸ್ಥಳೀಯ ಭಾಷೆಗಳಲ್ಲಿ ದೊರೆಯುವಂತೆ ಮಾಡಲಾಗಿದೆ: ಇಂಗ್ಲೀಷ್‌ನ ಜೊತೆಗೆ ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲೆಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು ಭಾಷೆಗಳಲ್ಲಿ ದೊರೆಯುತ್ತದೆ. 

ಕಾಯ್‌ಜಾಲ ಆ್ಯಪ್‌

ಕಾಯ್‌ಜಾಲ ಒಂದು ಮೊಬೈಲ್ ಆಗಿದ್ದು, ಇದನ್ನು ದೊಡ್ಡ ಗುಂಪಿನ ಸಂವಹನಗಳು ಮತ್ತು ಕೆಲಸದ ನಿರ್ವಹಣೆಯ ಉದ್ಧೇಶದಿಂದ ವಿನ್ಯಾಸಗೊಳಿಸಲಾಗಿದೆ. ಇದನ್ನು ಭಾರತದ ಮೂಲೆ ಮೂಲೆಗಳಲ್ಲಿ 2ಜಿ ನೆಟ್‌ವರ್ಕ್‌ಗಳ ಮೂಲಕವೂ ಸಹ ನಿಲುಕಿಸಿಕೊಳ್ಳಲು ಸಾಧ್ಯವಾಗುವಂತೆ ರೂಪಿಸಲಾಗಿದೆ. ಈ ಆ್ಯಪ್‌ ಅನ್ನು ಆಂಡ್ರಾಯ್ಡ್ ಮತ್ತು IOS ಬಳಕೆದಾರರಿಗಾಗಿ ಹಿಂದಿ, ಬೆಂಗಾಲಿ ಮತ್ತು ತೆಲುಗು ಭಾಷೆಗಳಿಗೆ ಭಾಷಾಂತರ ಮಾಡಲಾಗಿದೆ. 

ಸ್ವಿಫ್ಟ್‌ಕೀ

ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗಾಗಿ ನಿರ್ಮಿಸಲಾದ, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವ ಒಂದು ಕೀಬೋರ್ಡ್ ಇದಾಗಿದೆ. ಇದು ಭಾರತದ 24 ಭಾಷೆಗಳಲ್ಲಿ ಮತ್ತು ಮಾರ್ವಾಡಿ, ಬೋಡೊ, ಸಂತಾಲಿ ಮತ್ತು ಖಾಸಿಯಂತಹ ಉಪಭಾಷೆಗಳಲ್ಲಿ ಪಠ್ಯವನ್ನು ನಮೂದಿಸುವುದಕ್ಕೆ ಅವಕಾಶ ನೀಡುತ್ತದೆ. ಕೀಪ್ಯಾಡ್‌ಗೆ ಕೃತಕ ಬುದ್ಧಿಮತ್ತೆಯ ಸೌಲಭ್ಯವನ್ನು ಒದಗಿಸುವುದರಿಂದ, ವೇಗವಾದ, ಊಹಾತ್ಮಕವಾದ ಬರವಣಿಗೆ ಸಾಧ್ಯವಾಗುತ್ತದೆ. ಇದರಲ್ಲಿ ಬಳಕೆದಾರರು ಹಲವಾರು ಭಾಷೆಗಳನ್ನು ಒಟ್ಟಿಗೆ ಬರೆಯಬಹುದಾಗಿರುತ್ತದೆ. 

ಭಾಷಾ ಅನುವಾದ

ಸಂಸ್ಥೆಯು ಭಾರತೀಯ ಭಾಷೆಗಳಿಗಾಗಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಲ್ ಇಂಟೆಲಿಜೆನ್ಸ್ - ಎಐ) ಮತ್ತು ಆಳ ನರವ್ಯೂಹ ಜಾಲಗಳು (ಡೀಪ್‌ ನ್ಯೂರಲ್ ನೆಟ್‌ವರ್ಕ್ಸ್ -ಡಿಎನ್‌ಎನ್‌) ಬಳಸಿಕೊಂಡು ನೈಜ-ಸಮಯದಲ್ಲಿ ಅನುವಾದಿಸುವುದನ್ನು ಸುಧಾರಿಸಿದೆ. ಇದರಿಂದಾಗಿ, ಮೈಕ್ರೋಸಾಫ್ಟ್ ಬ್ರೌಸರ್‌ಗಳು ಬಿಂಗ್ ಹುಡುಕಾಟ, ಹಾಗೂ ಮೈಕ್ರೋಸಾಫ್ಟ್ ಆಫೀಸ್ 365 ನಲ್ಲಿ ಯಾವುದೇ ಜಾಲತಾಣಗಳ ಇಂಟರ್ನೆಟ್‌ ಅನ್ನು ಬಳಸುವಾಗ ಭಾರತೀಯ ಭಾಷೆಯಲ್ಲಿ ಅನುವಾದವನ್ನು ಪಡೆಯಲು ಸಹಾಯಕವಾಗಿದೆ. ಏಐ ಮತ್ತು ಡಿಎನ್‌ಎನ್ ಅನ್ನು ವಿಂಡೋಸ್ ಮತ್ತು ಆಂಡ್ರಾಯ್ಡ್‌ನಲ್ಲಿನ ಮೈಕ್ರೋಸಾಫ್ಟ್ ಟ್ರಾನಸ್ಲೇಟರ್ ಆ್ಯಪ್‌ನಲ್ಲಿ ಭಾರತೀಯ ಭಾಷೆಯ ಅನುವಾದಗಳಿಗಾಗಿ ಬಳಸಲಾಗುತ್ತಿದೆ.

ಸ್ವೇ

ಸ್ವೇ ಎನ್ನುವುದು ಬಹುಮಾಧ್ಯಮ ವಿಷಯದ ಸಹಾಯದಿಂದ ಭಾರತೀಯ ಭಾಷೆಗಳಲ್ಲಿ ಹೊಸ ವಿಚಾರಗಳು, ಕಥೆಗಳು, ವರದಿಗಳು, ಮತ್ತು ಪ್ರಸ್ತುತಿಗಳನ್ನು ಪ್ರಕಟಪಡಿಸುವುದಕ್ಕಾಗಿನ ಒಂದು ಆಪ್ ಆಗಿದೆ. ಈ ಆ್ಯಪ್‌, ಬಳಕೆದಾರರು ತಮ್ಮ ರಚನೆಯ ವಿನ್ಯಾಸ ಮತ್ತು ಲೇಔಟ್‌ನ ಬಗ್ಗೆ ತಲೆಕೆಡಿಸಿಕೊಳ್ಳದೆ ಅದರಲ್ಲಿ ಬಳಸಬಹುದಾದ ಚಿತ್ರಗಳು, ವೀಡಿಯೊಗಳು, ಟ್ವೀಟ್‌ಗಳು ಮತ್ತು ಇತರೆ ವಿಷಯಗಳನ್ನು ಹುಡುಕಲು ಅವರಿಗೆ ಸ್ಥಳೀಯ ಭಾಷೆಗಳಲ್ಲಿ ಸಲಹೆಗಳನ್ನು ನೀಡುತ್ತದೆ.

ಒನ್‌ನೋಟ್

ಒನ್‌ ನೋಟ್‌ ಎನ್ನುವುದು ಮಾಡಬೇಕಿರುವ ಕೆಲಸದ ಪಟ್ಟಿಗಳು, ಲೆಕ್ಚರ್ ಮತ್ತು ಮೀಟಿಂಗ್ ನೋಟ್‌ಗಳು, ರಜಾದಿನಗಳ ಯೋಜನೆ, ಅಥವಾ ಪಟ್ಟಿ ಮಾಡಿಟ್ಟುಕೊಳ್ಳಬೇಕಿರುವ ಅಥವಾ ನೆನಪಿಟ್ಟುಕೊಳ್ಳಬೇಕಿರುವ ಬೇರೆ ಯಾವುದೇ ಅಂಶಗಳನ್ನು ನಿರ್ವಹಿಸಲು ಒಂದು ಡಿಜಿಟಲ್ ನೋಟ್‌ಬುಕ್ ಆಗಿದೆ. ಬಳಕೆದಾರರು ಸ್ಥಳೀಯ ಭಾಷೆಯನ್ನು ಟೈಪ್‌ ಮಾಡಬಹುದು ಮತ್ತು ಗೀಚಬಹುದು ಮತ್ತು ರೆಕಾರ್ಡ್ ಮಾಡಿ ಹಂಚಿಕೊಳ್ಳಬಹುದು. ಒನ್‌ನೋಟ್ ಉಚಿತವಾಗಿ ಎಲ್ಲಾ ಪಿಸಿ, ಮ್ಯಾಕ್, ವಿಂಡೋಸ್ ಫೋನ್, ಐಫೋನ್‌, ಐಪ್ಯಾಡ್, ಆಪಲ್‌ ವಾಚ್, ಆಂಡ್ರಾಯ್ಡ್, ಮತ್ತು ಆಂಡ್ರಾಯ್ಡ್ ವಿಯರ್ ಸಾಧನಗಳಲ್ಲಿ ಲಭ್ಯವಿದೆ.

ಭಾರತೀಯ ಭಾಷೆಗಳಲ್ಲಿ ಇಮೇಲ್ ವಿಳಾಸಗಳು

ಆಂಡ್ರಾಯ್ಡ್ ಮತ್ತು ಐಓಎಸ್‌ನಲ್ಲಿ ಮೈಕ್ರೋಸಾಫ್ಟ್‌ನ ಔಟ್‌ಲುಕ್ ಆ್ಯಪ್‌ಗಳೂ ಸೇರಿದಂತೆ ತನ್ನಇಮೇಲ್ ಆ್ಯಪ್‌ಗಳು ಮತ್ತು ಸೇವೆಗಳಲ್ಲಿ 15 ಭಾರತೀಯ ಭಾಷೆಗಳಲ್ಲಿ ಇಮೇಲ್ ವಿಳಾಸಗಳನ್ನು ಬೆಂಬಲಿಸುತ್ತದೆ. ಈ ಬೆಂಬಲವು ಭವಿಷ್ಯಕ್ಕೆ ಸಿದ್ಧಗೊಂಡಿದೆ. ಹೆಚ್ಚುವರಿ ಭಾರತೀಯ ಭಾಷೆಗಳಲ್ಲಿ ಡೊಮೈನ್ ಹೆಸರುಗಳು ಲಭ್ಯವಾಗುತ್ತಿದ್ದಂತೆ, ನಾವು ಕೂಡಲೇ ಈ ಭಾಷೆಗಳಲ್ಲಿ ಇಮೇಲ್‌ ವಿಳಾಸಗಳನ್ನು ಬೆಂಬಲಿಸುತ್ತೇವೆ.

ಭಾರತದಂತಹ ದೇಶದಲ್ಲಿ, ಮುಂಬರುವ ದಿನಗಳಲ್ಲಿನ ಕಂಪ್ಯೂಟಿಂಗ್ ಅಲೆಯನ್ನು ಪ್ರಾದೇಶೀಕರಣವು (ಲೋಕಲೈಸೇಶನ್‌) ನಿಯಂತ್ರಿಸುತ್ತದೆ ಎಂಬುದಕ್ಕೆ ಸಂಶಯವೇ ಇಲ್ಲ. ಇದು ಸಮಾಜದ ವಿಸ್ತಾರವಾದ ಜನಸಮೂಹಕ್ಕೆ ತಂತ್ರಜ್ಞಾನವು ದೊರೆಯುವಂತೆ ಮಾಡುತ್ತದೆ, ಹಾಗೂ ಆ ಮೂಲಕ ಪ್ರಸ್ತುತ ಇರುವ ಭಾಷಾ ಗೋಡೆಯನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುತ್ತದೆ.