Skip Ribbon Commands
Skip to main content

ವಿಂಡೋಸ್ 7 ನಲ್ಲಿ ಹಳೆಯ ಆವೃತ್ತಿಯ ಪ್ರೋಗ್ರಾಂಗಳ ಬಳಕೆ

ವಿಂಡೋಸ್ ವಿಸ್ತಾಕ್ಕಾಗಿ ಸಿದ್ಧಪಡಿಸಲಾಗಿರುವ ಬಹುತೇಕ ಪ್ರೋಗ್ರಾಂಗಳು ವಿಂಡೋಸ್ 7ನಲ್ಲಿಯೂ ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತವೆ. ಆದರೆ ಕೆಲವು ಪ್ರೋಗ್ರಾಂಗಳು ಸರಿಯಾಗಿ ಕಾರ್ಯ ನಿರ್ವಹಿಸಲಾರವು ಇಲ್ಲವೇ, ಅಸಮರ್ಪಕವಾಗಿ ಕೆಲಸ ಮಾಡಬಲ್ಲವು. ಹಿಂದಿನ ಆವೃತ್ತಿಗಳಿಗಾಗಿ ಸಿದ್ಧಪಡಿಸಲಾಗಿದ್ದ ಒಂದು ಪ್ರೋಗ್ರಾಂ, ವಿಂಡೋಸ್ 7ನಲ್ಲಿ ಕೆಲಸ ಮಾಡದಿದ್ದರೆ, ಆ ಪ್ರೋಗ್ರಾಂಗೆ ಬೇಕಾದ ಹೊಂದಿಕೆಯಾಗುವ ಸಂಯೋಜನೆಗಳನ್ನು (ಕಾಂಪ್ಯಾಟಿಬಿಲಿಟಿ ಸೆಟ್ಟಿಂಗ್ಸ್) ಬದಲಾಯಿಸುವ ಮೂಲಕ ಪ್ರಯತ್ನಿಸಬಹುದು.

ಸೆಟ್ಟಿಂಗ್ ಬದಲಾಯಿಸುವುದರಿಂದಲೂ ಸಮಸ್ಯೆ ಪರಿಹಾರವಾಗದಿದ್ದರೆ, ಈ ಪ್ರೋಗ್ರಾಂಗೆ ಸಂಬಂಧಿಸಿ ಯಾವುದಾದರೂ ಪರಿಷ್ಕರಣೆಗಳು ಲಭ್ಯವಿರುತ್ತದೆಯೇ ಎಂದು ಆಯಾ ಪ್ರೋಗ್ರಾಂ ತಯಾರಿಸಿದ ಕಂಪನಿಯ ವೆಬ್‌ಸೈಟ್‌ಗಳಲ್ಲಿ ಶೋಧ ಮಾಡಿ.

ಇದೂ ಸಾಧ್ಯವಾಗದಿದ್ದರೆ, ಪ್ರೋಗ್ರಾಂ ಕಾಂಪ್ಯಾಟಿಬಿಲಿಟಿ ಟ್ರಬಲ್‌ಶೂಟರ್ ಬಳಸಿ ನೋಡಿ. ಆದರೆ ಗಮನಿಸಿ: ಪ್ರೋಗ್ರಾಂ ಕಾಂಪ್ಯಾಟಿಬಿಲಿಟಿ ಟ್ರಬಲ್‌ಶೂಟರ್ ಅನ್ನು ಹಳೆಯ ಆಂಟಿವೈರಸ್ ಪ್ರೋಗ್ರಾಂಗಳು, ಡಿಸ್ಕ್ ಯುಟಿಲಿಟಿಗಳು, ಅಥವಾ ಇತರ ಕೆಲವು ಸಿಸ್ಟಂ ಪ್ರೋಗ್ರಾಂಗಳಲ್ಲಿ ರನ್ ಮಾಡಿದರೆ, ದತ್ತಾಂಶವು ನಷ್ಟವಾಗಬಹುದು ಅಥವಾ ಸಿಸ್ಟಂ ಸುರಕ್ಷತೆಗೆ ತೊಂದರೆಯಾಗಬಹುದು.

ಪ್ರೋಗ್ರಾಂ ಕಾಂಪ್ಯಾಟಿಬಿಲಿಟಿ ಟ್ರಬಲ್‌ಶೂಟರ್ ರನ್ ಮಾಡಲು: ಪ್ರಾರಂಭ (Start) ಬಟನ್ ಕ್ಲಿಕ್ ಮಾಡಿ, ನಿಯಂತ್ರಣ ಫಲಕ (ಕಂಟ್ರೋಲ್ ಪ್ಯಾನೆಲ್) ಗೆ ಹೋಗಿ. ಶೋಧ ಬಾಕ್ಸ್‌ನಲ್ಲಿ ಟ್ರಬಲ್‌ಶೂಟರ್ ಎಂಬುದನ್ನು ಹುಡುಕಿ. ನಂತರ ಟ್ರಬಲ್‌ಶೂಟಿಂಗ್ ಕ್ಲಿಕ್ ಮಾಡಿ. ನಂತರ ಪ್ರೋಗ್ರಾಂಗಳಲ್ಲಿ, ವಿಂಡೋಸ್ ಹಿಂದಿನ ಆವೃತ್ತಿಗಳಿಗಾಗಿ ತಯಾರಿಸಿದ ಪ್ರೋಗ್ರಾಂಗಳನ್ನು ರನ್ ಮಾಡು ಎಂಬಲ್ಲಿ ಕ್ಲಿಕ್ ಮಾಡಿ.

ಬಳಿಕ ಟ್ರಬಲ್‌ಶೂಟರ್‌ನಲ್ಲಿನ ಸೂಚನೆಗಳನ್ನು ಅನುಸರಿಸಿ.

ಸುಲಭ ವಿಧಾನ: ಯಾವುದೇ ಒಂದು ಪ್ರೋಗ್ರಾಂನ ಐಕಾನ್ ಅಥವಾ ಶಾರ್ಟ್‌ಕಟ್ ಮೇಲೆ ಬಲ-ಕ್ಲಿಕ್ ಮಾಡಿ, ಟ್ರಬಲ್‌ಶೂಟ್ ಕಾಂಪ್ಯಾಟಿಬಿಲಿಟಿ ಎಂಬುದನ್ನು ಕ್ಲಿಕ್ ಮಾಡುವ ಮೂಲಕವೂ ನೀವು ಪ್ರೋಗ್ರಾಂ ಕಾಂಪ್ಯಾಟಿಬಿಲಿಟಿ ಟ್ರಬಲ್‌ಶೂಟರನ್ನು ತೆರೆಯಬಹುದು. ನಂತರ ಟ್ರಬಲ್‌ಶೂಟ್ ಕ್ಲಿಕ್ ಮಾಡಿ. ನಂತರ ಆ ಪ್ರೋಗ್ರಾಂ ತೆರೆಯಲು ಪ್ರಯತ್ನಿಸಿ.

ನಿಮಗೆ ಪ್ರೋಗ್ರಾಂ ಒಂದನ್ನು ಅನುಸ್ಥಾಪಿಸುವುದು ಸಾಧ್ಯವಾಗದಿದ್ದರೆ, ಆ ಪ್ರೋಗ್ರಾಂನ ಸ್ಥಾಪನಾ ಡಿಸ್ಕ್ ಅನ್ನು ಹಾಕಿ, ಟ್ರಬಲ್‌ಶೂಟರ್ ಬಳಸಿ ಪ್ರೋಗ್ರಾಂನ ಸೆಟಪ್ ಫೈಲ್‌ಗೆ ಬ್ರೌಸ್ ಮಾಡಿ (ಸಾಮಾನ್ಯವಾಗಿ Setup.exe ಅಥವಾ Install.exe ಎಂದಿರುತ್ತದೆ). ಈ ಟ್ರಬಲ್‌ಶೂಟರ್, .msi ಎಂಬ ಫೈಲ್ ಎಕ್ಸ್‌ಟೆನ್ಶನ್ ಇರುವ ಇರುವ ಪ್ರೋಗ್ರಾಂಗಳ ಮೇಲೆ ಕೆಲಸ ಮಾಡುವುದಿಲ್ಲ.

ಕಾಂಪ್ಯಾಟಿಬಿಲಿಟಿ ಸಂಯೋಜನೆಗಳನ್ನು ನೀವೇ ಬದಲಾಯಿಸುವುದು ಹೇಗೆ?: ಪ್ರೋಗ್ರಾಂ ಒಂದರ ಕಾಂಪ್ಯಾಟಿಬಿಲಿಟಿ ಸಂಯೋಜನೆಗಳನ್ನು ನೀವಾಗಿಯೇ ಬದಲಾಯಿಸಲು, ಪ್ರೋಗ್ರಾಂ ಐಕಾನ್ ಮೇಲೆ ಬಲ-ಕ್ಲಿಕ್ ಮಾಡಿ, ಪ್ರಾಪರ್ಟೀಸ್ ಕ್ಲಿಕ್ ಮಾಡಿದ ನಂತರ ಕಾಂಪ್ಯಾಟಿಬಿಲಿಟಿ ಟ್ಯಾಬ್ ಕ್ಲಿಕ್ ಮಾಡಿ. ಅದರಲ್ಲಿರುವ ಸೆಟ್ಟಿಂಗ್‌ಗಳನ್ನು ಬದಲಾಯಿಸಿ ನೋಡಬಹುದು.

Read More on....

This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.