Skip Ribbon Commands
Skip to main content
 

ರೇಖಾಚಿತ್ರಗಳಿಗೆ ಸುಲಭ ಟೂಲ್: ಮೈಕ್ರೋಸಾಫ್ಟ್ ವಿಷಿಯೋ 2010

ನೀವೊಂದು ನಿಮ್ಮ ಐಡಿಯಾ, ಒಂದು ಕಾರ್ಯಪ್ರಕ್ರಿಯೆಯನ್ನು ಮತ್ತು ಸಂಕೀರ್ಣ ಹಂತಗಳನ್ನು ವಿವರಿಸಬೇಕಿದ್ದರೆ, ಬರೇ ಶಬ್ದಗಳನ್ನು ಅದನ್ನು ಹಿಡಿದಿಡುವುದು ಮತ್ತು ಇತರರು ಅದನ್ನು ಅರ್ಥೈಸಿಕೊಳ್ಳುವಂತೆ ಮಾಡುವುದು ತುಂಬಾ ಕಷ್ಟ. ಈ ಕಾರಣಕ್ಕಾಗಿ, ಹೇಳುವುದನ್ನು ರೇಖಾಚಿತ್ರಗಳ ಮೂಲಕ ವಿಷದಪಡಿಸಿದರೆ, ಅದನ್ನು ಸುಲಭವಾಗಿ ಗ್ರಾಹ್ಯ ಮಾಡಿಕೊಳ್ಳಬಹುದು. ಇದಕ್ಕಾಗಿಯೇ ರೂಪುಗೊಂಡಿರುವ ಮೈಕ್ರೋಸಾಫ್ಟ್‌ನ ಹೊಸ ಸಾಧನವೇ ಮೈಕ್ರೋಸಾಫ್ಟ್ ವಿಷಿಯೋ 2010.

 

ಮೈಕ್ರೋಸಾಫ್ಟ್ ವಿಷಿಯೋ 2010 ಎಂಬುದು ಸಂಕೀರ್ಣ ಪ್ರಕ್ರಿಯೆಯನ್ನು ಸರಳೀಕರಿಸಬಲ್ಲ ಮತ್ತು ನಿಮ್ಮ ಐಡಿಯಾಗಳನ್ನು ವೆಬ್‌ನಲ್ಲಿ ಕ್ಷಣಮಾತ್ರದಲ್ಲಿಯೇ ಹಂಚಿಕೊಳ್ಳಲು ಅನುಕೂಲ ಮಾಡಿಕೊಡುವ ವಿಶಿಷ್ಟ ಟೂಲ್.

 

ನಿಮ್ಮ ಐಡಿಯಾಗಳಿಗೆ, ಪ್ರೆಸೆಂಟೇಶನ್‌ಗಳಿಗೆ ವೃತ್ತಿಪರ ಟಚ್ ನೀಡಬಲ್ಲುದು ವಿಷಿಯೋ-2010. ಸಾಕಷ್ಟು ಟೆಂಪ್ಲೇಟ್‌ಗಳು, ಮೊದಲೇ ಸಿದ್ಧಪಡಿಸಿರುವ ಆಕಾರಗಳು ಲಭ್ಯವಿರುವುದರಿಂದ ನಿಮ್ಮ ಕೆಲಸವೂ ಸುಲಭವಾಗುತ್ತದೆ, ಸರಳವಾಗುತ್ತದೆ. ಇದರೊಂದಿಗೆ, ಈ ರೇಖಾಚಿತ್ರಗಳನ್ನು (ಡಯಾಗ್ರಾಂ) ಮೈಕ್ರೋಸಾಫ್ಟ್ ಎಕ್ಸೆಲ್, ಆಕ್ಸೆಸ್, SQL ಸರ್ವರ್, ಶೇರ್‌ಪಾಯಿಂಟ್ ಸೇವೆಗಳು ಅಥವಾ ಯಾವುದೇ OLEDB (ಆಬ್ಜೆಕ್ಟ್ ಲಿಂಕಿಂಗ್ ಆಂಡ್ ಎಂಬೆಡಿಂಗ್ ಡೇಟಾ ಬೇಸ್) ಅಥವಾ ODBC (ಓಪನ್ ಡೇಟಾ ಬೇಸ್ ಕನೆಕ್ಟಿವಿಟಿ) ಮುಂತಾದ ಜನಪ್ರಿಯ ದತ್ತಾಂಶ ಪರಿಕರ (ಡೇಟಾ ಟೂಲ್)ಗಳಿಗೆ ಅದನ್ನು ಡೇಟಾ ಸೆಲೆಕ್ಟರ್ ಮತ್ತು ಆಟೋಮ್ಯಾಟಿಕ್ ಲಿಂಕ್ ವಿಜಾರ್ಡ್‌ಗಳನ್ನು ಬಳಸಿ ಸುಲಭವಾಗಿ ಲಿಂಕ್ ಮಾಡಲೂಬಹುದು.

 

ಐಕಾನ್‌ಗಳು, ಚಿಹ್ನೆಗಳು, ಬಣ್ಣಗಳು ಮತ್ತು ಬಾರ್ ಗ್ರಾಫ್‌ಗಳನ್ನು ವಿಷಿಯೋ ಮೂಲಕ ರಚಿಸಬಹುದಾಗಿದ್ದು, ಕೊನೆಗೆ, ಕೆಲವೇ ಕ್ಲಿಕ್‌ಗಳ ನಂತರ, ದತ್ತಾಂಶಕ್ಕೆ-ಲಿಂಕ್ ಆಗಿರುವ ಡಯಾಗ್ರಾಂಗಳನ್ನು ಶೇರ್‌ಪಾಯಿಂಟ್ (SharePoint)ಗೆ ಪ್ರಕಟಿಸಬಹುದು, ಮತ್ತು ವೆಬ್‌ನಲ್ಲಿ ಇತರರೂ ಅಂದರೆ, ತಮ್ಮ ಕಂಪ್ಯೂಟರಿನಲ್ಲಿ ವಿಷಿಯೋ ಅನುಸ್ಥಾಪನೆ ಮಾಡಿಕೊಳ್ಳದವರು ಕೂಡ ನೋಡುವಂತಾಗಲೂ ಅನುಮತಿಯನ್ನೂ ಒದಗಿಸಬಹುದು.

 

first  

 

 

 

 

 

 

 

second image 

 

 

 

 

 

 

ಮೊದಲೇ ಸಿದ್ಧಪಡಿಸಿರುವ ಆಕಾರಗಳ ಸರಳ ರೇಖಾಚಿತ್ರಗಳು, ಐಟಿ, ವ್ಯವಹಾರ, ಪ್ರಾಸೆಸ್ ಮ್ಯಾನೇಜ್‌ಮೆಂಟ್ ಮತ್ತು ಇತರ ಕ್ಷೇತ್ರದವರಿಗಾಗಿ ಟೆಂಪ್ಲೇಟ್‌ಗಳು ಮುಂತಾದವುಗಳ ಸಹಕಾರ ನಿಮಗಿದ್ದೇ ಇದೆ.

diagram 

 

 

 

 

 

 

 

 

 

 

 

 

 

 

 

ವಿಭಿನ್ನ ಆಕಾರಗಳ ರೇಖಾಚಿತ್ರಗಳನ್ನು ಕೆಲವೇ ಕ್ಲಿಕ್‌ಗಳ ಮೂಲಕ ಆರಿಸಿ, ನೀವು ಆ ಆಕಾರಗಳ ಒಳಗೆ ಪಠ್ಯವನ್ನೂ ನಮೂದಿಸಬಹುದಾಗಿದೆ. ಒಂದು ಪ್ರಕ್ರಿಯೆಯ ವಿಭಿನ್ನ ಹಂತಗಳನ್ನು ವಿವರಿಸಲು ಇದೊಂದು ಅತ್ಯುತ್ತಮ ಮಾರ್ಗವಾಗಿದೆ. ನಿಮಗೆ ಬೇಕಾದ ವಿಭಿನ್ನ ರೀತಿಯ ಡಯಾಗ್ರಾಂಗಳನ್ನು ರಚಿಸಲು ರಿಬ್ಬನ್ ಟ್ಯಾಬ್‌ಗಳಲ್ಲಿ ಸಾಕಷ್ಟು ಆಯ್ಕೆಗಳು ನಿಮಗೆ ದೊರೆಯುತ್ತವೆ.

 

ವಿಭಿನ್ನ ಆಕಾರಗಳನ್ನು ಸುಲಭವಾಗಿ ಸೇರಿಸಬಹುದು ಮತ್ತು ಅವುಗಳನ್ನು ವ್ಯವಸ್ಥಿತಗೊಳಿಸುವ ಪ್ರಕ್ರಿಯೆ ಕೂಡ ತೀರಾ ಸುಲಭವಾಗುತ್ತದೆ. ಇದಕ್ಕೆ ನಿಮಗೆ ನೆರವಾಗುವುದು ಕ್ವಿಕ್ ಶೇಪ್ಸ್ ಮಿನಿ ಟೂಲ್‌ಬಾರ್. ಇದರಲ್ಲಿ ಆಧುನೀಕೃತ ಗ್ರಿಡ್, ಸ್ವಯಂಚಾಲಿತ ಲೇಔಟ್ ಹೊಂದಾಣಿಕೆ ಮತ್ತು ಪುಟದ ಗಾತ್ರವೂ ಸ್ವಯಂ ಆಗಿ ಹೊಂದಿಕೊಳ್ಳುವ ಆಯ್ಕೆಗಳಿವೆ.

 

ದೊಡ್ಡ ಮತ್ತು ಸಂಕೀರ್ಣವಾದ ಡಯಾಗ್ರಾಂಗಳನ್ನು ಸರಳೀಕರಿಸುವುದು ಕೂಡ ಸುಲಭವೇ. ಅಂದರೆ ಒಂದೇ ರೀತಿಯ ಆಕಾರಗಳನ್ನು ಸಬ್‌ಪ್ರೊಸೆಸಸ್ ಮತ್ತು ಕಂಟೇನರ್ಸ್ ಎಂಬ ಆಯ್ಕಗಳನ್ನು ಬಳಸಿ ವ್ಯವಸ್ಥಿತವಾಗಿ ಗುಂಪುಗೂಡಿಸಬಹುದು. ಇವೆರಡು ಕೂಡ, ಸಂಕೀರ್ಣ ಡಯಾಗ್ರಾಂಗಳನ್ನು ಒಡೆದು ಸರಳ ರೇಖಾ ಚಿತ್ರಗಳಾಗಿ ಪರಿವರ್ತಿಸಿ, ತಾನಾಗಿಯೇ ಸಂಬಂಧಿಸಿದ ಡಯಾಗ್ರಾಂಗಳಿಗೆ ಲಿಂಕ್ ನೀಡುತ್ತವೆ.

 

ಅತ್ಯಾಧುನಿಕ ಆಕಾರಗಳು, ಗಾತ್ರಗಳು ಮತ್ತು ಚಿತ್ರಗಳೊಂದಿಗೆ ಹಾಗೂ ಸಮೃದ್ಧ ಥೀಮ್‌ಗಳ ಗ್ಯಾಲರಿ ಹಾಗೂ ಲೈವ್ ಮುನ್ನೋಟಗಳೊಂದಿಗೆ, ನಿಮ್ಮ ರೇಖಾ ಚಿತ್ರಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು, ಆಕರ್ಷಕವಾಗಿಸಲು ಮತ್ತು ಇತರರು ಶಹಭಾಸ್ ಹೇಳುವಂತೆ ಮಾಡಲು ಮೈಕ್ರೋಸಾಫ್ಟ್ ವಿಷಿಯೋ ಸಹಕಾರಿ. ಮೈಕ್ರೋಸಾಫ್ಟ್ ವಿಷಿಯೋದ ಬೀಟಾ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಲಿಂಕ್ ಬಳಸಿ: http://go.microsoft.com/fwlink/?LinkID=177573

 

 

Windows Live Skydrive: Online Storage

ವಿಂಡೋಸ್ ಲೈವ್ ಸ್ಕೈಡ್ರೈವ್: ನಿಮ್ಮ ದತ್ತಾಂಶವನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿಡುವ ತಾಣ

 

ನೀವೊಬ್ಬ ಆನ್‌ಲೈನ್ ಬಳಕೆದಾರರಾಗಿದ್ದು, ಪದೇ ಪದೇ ಪ್ರವಾಸ ಮಾಡುತ್ತಿರುವವರಾದರೆ ಮತ್ತು ಹೋದಲ್ಲೆಲ್ಲಾ ಫೈಲುಗಳನ್ನು ಹೊತ್ತೊಯ್ಯುವುದು ಕಷ್ಟವಾಗಿದ್ದರೆ, ಇದೀಗ ಆನ್‌ಲೈನ್‌ನಲ್ಲಿಯೇ ನಿಮಗೆ ಬೇಕಾದ ಕಡತಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಮತ್ತು ಹೋದೆಡೆಯಲ್ಲಿ ಲಾಗಿನ್ ಆಗಿ ಅದನ್ನು ಬಳಸಬಹುದಾದ ಅವಕಾಶಗಳು ಸಾಕಷ್ಟಿವೆ. ಅವುಗಳಲ್ಲಿ ಅತ್ಯಂತ ಸರಳವಾದ, ಸುಲಭವಾದ ವ್ಯವಸ್ಥೆಯನ್ನು ಮೈಕ್ರೋಸಾಫ್ಟ್ ತಾಣವೇ ಒದಗಿಸಿಕೊಟ್ಟಿದೆ. ಅದುವೇ ವಿಂಡೋಸ್ ಲೈವ್ ಸ್ಕೈಡ್ರೈವ್. ಅಂದರೆ ಇದು ಆಕಾಶದಲ್ಲಿ ಫೈಲುಗಳನ್ನು ಸಂಗ್ರಹಿಸಿಟ್ಟುಕೊಂಡಂತೆ!

 

ವಿಂಡೋಸ್ ಲೈವ್ ಸ್ಕೈಡ್ರೈವ್ ಎಂಬುದು ಆನ್‌ಲೈನ್‌ನಲ್ಲಿ ನಮ್ಮ ಕಡತಗಳನ್ನು ಸಂಗ್ರಹಿಸಿಡುವ ತಾಣ. ಅಂದರೆ ಇದು ಕೂಡ ನಿಮ್ಮ ಹಾರ್ಡ್ ಡಿಸ್ಕ್‌ನಂತೆಯೇ ಕೆಲಸ ಮಾಡುತ್ತದೆ. ಉಚಿತವಾಗಿಯೇ ಲಭ್ಯವಿರುವ ವ್ಯವಸ್ಥೆಯಲ್ಲಿ 25 ಜಿಬಿವರೆಗೆ ನಮ್ಮ ಫೈಲುಗಳನ್ನು ನಾವು ಸುರಕ್ಷಿತವಾಗಿ ಕಾಯ್ದಿಡಬಹುದಾಗಿದೆ.

 

ಇಷ್ಟು ಮಾತ್ರವಲ್ಲದೆ, ನಮ್ಮ ಚಿತ್ರಗಳು, ಸಂಗೀತ, ವೀಡಿಯೋ ಮತ್ತು ದಾಖಲೆಗಳನ್ನೆಲ್ಲಾ ಗೆಳೆಯರು, ಬಂಧುಗಳೊಂದಿಗೆ ಆನ್‌ಲೈನ್‌ನಲ್ಲಿಯೇ ಹಂಚಿಕೊಳ್ಳಬಹುದಾದ ವ್ಯವಸ್ಥೆ ಇದಾಗಿದ್ದು, ನಮ್ಮ ಕನ್ನಡ ಆನ್‌ಲೈನ್ ಬಳಕೆದಾರರಿಗೂ ಇದನ್ನು ಪರಿಚಯಿಸುವ ಉದ್ದೇಶ ಈ ಲೇಖನದ್ದು.

 

ಒಟ್ಟಾರೆಯಾಗಿ ಹೇಳಬಹುದಾದರೆ, ಈ ಸ್ಕೈಡ್ರೈವ್ ಎಂಬ ಆನ್‌ಲೈನ್ ಹಾರ್ಡ್ ಡ್ರೈವ್‌ನಲ್ಲಿ ಉಳಿಸಿದ ಯಾವುದೇ ಫೈಲನ್ನು ನಾವು ವಿಶ್ವಾದ್ಯಂತ ದತ್ತಾಂಶ ಹಂಚಿಕೊಳ್ಳಲು ಬಳಸಬಹುದಾಗಿದೆ. ಮಾಹಿತಿ, ದತ್ತಾಂಶ ಹಂಚಿಕೆ ಎಂಬುದು ಇಂದಿನ ದಿನಗಳಲ್ಲಿ ಜಾಗತಿಕ ಅನಿವಾರ್ಯವೂ ಆಗಿಬಿಟ್ಟಿದೆ. ಫ್ರೀಲ್ಯಾನ್ಸ್ ಆಗಿ ಕೆಲಸ ಮಾಡುವ ಬಳಕೆದಾರರಿಗೆ ಕೂಡ ಸಂಬಂಧಿತ ಫೈಲ್‌ಗಳನ್ನು ತರಿಸಿಕೊಳ್ಳಲು, ಕಳುಹಿಸಲು ಇದು ಅತ್ಯಂತ ಸುಲಭ ಮಾರ್ಗವೂ ಹೌದು. ವೆಬ್ ಆಧಾರಿತವಾದ, ಯಾವುದೇ ಕ್ಷಣ ಮತ್ತು ಯಾವುದೇ ಸ್ಥಳದಲ್ಲಿ ಫೈಲ್‌ಗಳನ್ನು ಆಕ್ಸೆಸ್ ಮಾಡಬಹುದಾದ ವ್ಯವಸ್ಥೆಯಿದು.

 

25 ಜಿಬಿ ಎಂದರೆ ಕಡಿಮೆ ಜಾಗವೇನಲ್ಲ. ಹೀಗಾಗಿ ಸಂಚಾರಿ ಸಂಗ್ರಹತಾಣವಾಗಿ ಇದು ಎಲ್ಲರಿಗೂ ಉಪಯುಕ್ತ. ಉದಾಹರಣೆಗೆ, ನೂರಾರು ಡಾಕ್ಯುಮೆಂಟ್‌ಗಳು, ಚಿತ್ರಗಳು, ಆಡಿಯೋ ಕಡತಗಳು, ವೀಡಿಯೋ ಕಡತಗಳನ್ನೆಲ್ಲವನ್ನೂ ನೀವು ಈ ಸಂಗ್ರಹಾಲಯದಲ್ಲಿ ಇರಿಸಬಹುದಾಗಿದೆ. ಇದರಲ್ಲಿ ಮುಕ್ತ (ಪಬ್ಲಿಕ್), ಖಾಸಗಿ ಮತ್ತು ವೈಯಕ್ತಿಕ ಫೋಲ್ಡರ್‌ಗಳನ್ನು ಕೂಡ ರಚಿಸಿ, ನಮಗೆ ಬೇಕಾದವುಗಳನ್ನು ಮಾತ್ರವೇ ಇತರರೊಂದಿಗೆ ಹಂಚಿಕೊಳ್ಳಬಹುದು ಮತ್ತು ಇತರರಿಗೆ ಅದನ್ನು ಪರಿಷ್ಕರಿಸಲು ಅಗತ್ಯವಿದ್ದರೆ, ಅವರಿಗೆ ಅನುಮತಿಯನ್ನೂ ನೀಡಬಹುದು ಇಲ್ಲವಾದಲ್ಲಿ, ಅದನ್ನು ಓದಲು ಮಾತ್ರವೇ ಎಂಬ ಷರತ್ತಿನೊಂದಿಗೆ ಇರಿಸಬಹುದು.

 

ಈ ಆನ್‌ಲೈನ್ ಟೂಲ್ ಅನ್ನು ನಿಮ್ಮದಾಗಿಸಿಕೊಳ್ಳಬೇಕಿದ್ದರೆ, ನೀವು ಹಾಟ್‌ಮೇಲ್ ಖಾತೆ ಹೊಂದಿರಬೇಕಾಗುತ್ತದೆ. ಇದು ನಿಮ್ಮ ಖಾಸಗಿ ಸ್ಥಳವಾಗಿದ್ದು, ಬೇಕೆಂದಾಗ ಫೈಲುಗಳನ್ನು ಡಿಲೀಟ್ ಮಾಡಿ, ಇನ್ನಷ್ಟನ್ನು ಸೇರಿಸಿಕೊಳ್ಳಬಹುದು.

 

ಹಾಗಿದ್ದರೆ, ಅದು ಹೇಗಿದೆ ಅಂತ ತಿಳಿಯಬೇಕೇ? ಇಲ್ಲಿ ನೋಡಿ: http://skydrive.live.com/

 

 

Read More on....

This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.