Skip Ribbon Commands
Skip to main content
 

ವಿಂಡೋಸ್ ಮೊಬೈಲ್  6.0 ಟಚ್ ಸ್ಕ್ರೀನ್ ಮೊಬೈಲಿನಲ್ಲಿ ಆಫೀಸ್

 

ನೀವು ಕಚೇರಿಯಿಂದ ಹೊರಗಿರುವಾಗ ವಿಂಡೋಸ್‌ನ ಆಫೀಸ್ ಅಪ್ಲಿಕೇಶನ್‌ಗಳನ್ನು ಬಳಸಲು ಆಫೀಸ್ ಮೊಬೈಲ್ ನೆರವಾಗುತ್ತದೆ. ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್ ಮೊದಲಾದ ಆಫೀಸ್ ಅಪ್ಲಿಕೇಶನ್‌ಗಳ ಮೊಬೈಲ್ ಆವೃತ್ತಿಗಳನ್ನು ಬಳಸಿ, ನೀವು ಅವುಗಳನ್ನು ವೀಕ್ಷಿಸಬಹುದು ಮತ್ತು ಅದರಲ್ಲಿ ಕೆಲಸವನ್ನೂ ಮಾಡಬಹುದು, ಏನಾದರೂ ಬದಲಾವಣೆಗಳಿದ್ದರೆ ಮಾಡಬಹುದು, ಅದನ್ನು ಉಳಿಸಬಹುದು, ಇ-ಮೇಲ್ ಕಳುಹಿಸಬಹುದು.

ಆದರೆ, ನೆನಪಿಡಬೇಕಾದ ಅಂಶವೆಂದರೆ, ಕಂಪ್ಯೂಟರಿನಲ್ಲಿ ದೊರೆಯುವ ಎಲ್ಲ ಸವಲತ್ತುಗಳನ್ನು ಈ ಆಫೀಸ್‌ನ ಮೊಬೈಲ್ ಆವೃತ್ತಿಯಲ್ಲಿ ಪಡೆಯುವುದು ಸಾಧ್ಯವಿಲ್ಲ. ಇದರಲ್ಲಿ, ಅಗತ್ಯವಿರುವ ಸೀಮಿತ ಕಾರ್ಯಾಚರಣೆಗಳನ್ನು ಮಾತ್ರವೇ ಮಾಡಬಹುದಾಗಿದೆ.

 

ಕ್ಯಾಲೆಂಡರ್, ಅಲಾರಂ, ಟಾಸ್ಕ್‌ಗಳು, ವರ್ಡ್ ಮೊಬೈಲ್, ವಾಯ್ಸ್ ನೋಟ್ಸ್, ಎಕ್ಸೆಲ್ ಮೊಬೈಲ್, ಪವರ್ ಪಾಯಿಂಟ್ ಮೊಬೈಲ್ ಎಂಬ ವಿಭಿನ್ನ ಪರಿಕರಗಳು ಮೊಬೈಲ್ ಆಫೀಸ್‌ನಲ್ಲಿ ಲಭ್ಯವಿರುತ್ತವೆ. ಮುಖ್ಯವಾಗಿ ಬಳಕೆಯಾಗುವುದು ವರ್ಡ್ ಮೊಬೈಲ್ ಮತ್ತು ವರ್ಡ್ ಎಕ್ಸೆಲ್.

 

ವರ್ಡ್ ಮೊಬೈಲ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಪಾಸ್‌ವರ್ಡ್ ರಕ್ಷಣೆ, ರಿವಿಜನ್ ಮಾರ್ಕ್‌ಗಳು ಮುಂತಾದ ಎಲ್ಲ ಲಕ್ಷಣಗಳು ಲಭ್ಯವಿರುವುದಿಲ್ಲ. ಡಾಕ್ಯುಮೆಂಟನ್ನು ನಿಮ್ಮ ಸಾಧನದಲ್ಲಿ ಉಳಿಸಿದಾಗ, ಕೆಲವೊಂದು ದತ್ತಾಂಶ ಅಥವಾ ಅದರ ಸ್ವರೂಪ (ಫಾರ್ಮ್ಯಾಟಿಂಗ್) ಕೂಡ ಬದಲಾಗಬಹುದು. ಅದೇ ರೀತಿ, ಹಿನ್ನೆಲೆಗಳು, ಚಿತ್ರದ ಬುಲೆಟ್‌ಗಳು, ಸ್ಮಾರ್ಟ್ ಟ್ಯಾಗ್‌ಗಳು, ಕೋಷ್ಟಕ ಶೈಲಿಗಳು ಕೂಡ ಬೆಂಬಲಿತವಾಗಿಲ್ಲ.

 

ಆದರೆ, ಕೆಲವೊಂದು ವೈಶಿಷ್ಟ್ಯಗಳನ್ನು ಮೊಬೈಲ್ ವರ್ಡ್ ಪರಿವರ್ತಿಸಬಹುದಾಗಿದೆ ಅಥವಾ ಮಾರ್ಪಡಿಸಬಹುದಾಗಿದೆ. ಫೈಲ್ ಪರಿವರ್ತನೆ ಅಂದರೆ ಆಫೀಸ್ 2003 ಫೈಲ್ ವಿಸ್ತರಣೆಗಳನ್ನು (.doc, .dot ಮತ್ತಿತರ) ಆಫೀಸ್ 2007 ಫೈಲ್ ವಿಸ್ತರಣಾ ವಿಧಾನಗಳಲ್ಲಿ (.docx ಇತ್ಯಾದಿ) ಉಳಿಸುವುದು ಸಾಧ್ಯವಿಲ್ಲ. ಆದರೆ ಇವುಗಳನ್ನು .rtf ಅಥವಾ .txt ಫೈಲ್‌ಗಳಾಗಿ ಉಳಿಸಬಹುದಾಗಿದೆ.

 

ಆದರೆ, ಎಕ್ಸೆಲ್‌ಗೆ ಸಂಬಂಧಿಸಿದಂತೆ ಹೆಚ್ಚಿನ ವೈಶಿಷ್ಟ್ಯಗಳು ಮೊಬೈಲ್ ಆವೃತ್ತಿಯಲ್ಲಿಯೂ ನಡೆಯುತ್ತವೆ. ಆದರೆ ಫಾರ್ಮ್ಯುಲಾಗಳು, ಸೆಲ್ ಕಾಮೆಂಟ್‌ಗಳು ಮೊಬೈಲ್ ಆಫೀಸಿನಲ್ಲಿ ಕೆಲಸ ಮಾಡುವುದಿಲ್ಲ. ಕಲಾತ್ಮಕ ಬಾರ್ಡರ್‌ಗಳು ಕೇವಲ ಗೆರೆಯಾಗಿ ಕಾಣಿಸುತ್ತವೆ, ಸೆಲ್‌ಗಳಿಗೆ ಅನ್ವಯಿಸಲಾದ ಪ್ಯಾಟರ್ನ್‌ಗಳು ತೆಗೆಯಲ್ಪಡುತ್ತವೆ, ವೈವಿಧ್ಯಮಯ ಫಾಂಟ್‌ಗಳು ಲಭ್ಯವಿಲ್ಲದಿರುವುದರಿಂದ ಆಯಾ ಫಾಂಟ್‌ಗೆ ಅತೀ ಸಮೀಪದ ಫಾಂಟನ್ನು ಆಯ್ದುಕೊಂಡು ಪ್ರದರ್ಶಿಸುತ್ತದೆ. ಆದರೆ ಅದನ್ನು ನೀವು ಪುನಃ ಕಂಪ್ಯೂಟರಿನಲ್ಲಿ ತೆರೆದಾಗ, ಮೂಲ ಫಾಂಟ್‌ಗಳು, ಗಾತ್ರಗಳೇ ಇರುತ್ತವೆ. 16,384ಕ್ಕಿಂತ ಮುಂದಿನ ಸಾಲುಗಳಿಗೆ ಉಲ್ಲೇಖವಿರುವ ಫಾರ್ಮ್ಯುಲಾಗಳು #REF! ನಿಂದ ಸ್ಥಾನಾಂತರಿಸಲ್ಪಡುತ್ತವೆ. ಒಟ್ಟಿನಲ್ಲಿ ಫಾರ್ಮ್ಯುಲಾಗಳು ಕೂಡ ಸೀಮಿತ ಪರಿಮಿತಿಯನ್ನು ಹೊಂದಿವೆ.

 

ಮೊಬೈಲ್ ಎಕ್ಸೆಲ್‌ನಲ್ಲಿ ಆಟೋಫಿಲ್ಟರ್ ಸೆಟ್ಟಿಂಗ್ಸ್ ಕಾಣಿಸುವುದಿಲ್ಲ. ಆದರೂ ಕೆಲವು ಕಾರ್ಯಗಳನ್ನು ನಿರ್ವಹಿಸಲು, ಉದಾಹರಣೆಗೆ, ಕಂಪ್ಯೂಟರಿನ ವರ್ಕ್‌ಶೀಟ್‌ನಲ್ಲಿ ಕೆಲವೊಂದು ಸಾಲುಗಳನ್ನು ನೀವು ಹೈಡ್ ಮಾಡಿದ್ದರೆ, ಅವುಗಳು ಮೊಬೈಲ್ ಎಕ್ಸೆಲ್‌ನಲ್ಲಿ ಕೂಡ ಹೈಡ್ ಆಗಿರುತ್ತವೆ. ನೀವು ಅನ್‌ಹೈಡ್ ಬಳಸುವ ಮೂಲಕ ಅವುಗಳು ಕಾಣಿಸುವಂತೆ ಮಾಡಬಹುದು.

ವರ್ಡ್‌ನಂತೆಯೇ, ಎಕ್ಸೆಲ್ ಹಳೆಯ (2003) ಮತ್ತು ಹೊಸ (2007) ವಿಸ್ತರಣಾ ನಮೂನೆಗಳ ನಡುವೆ ಪರಸ್ಪರ ಪರಿವರ್ತನೆ ಇಲ್ಲಿಯೂ ಸಾಧ್ಯವಿಲ್ಲ.

 

Read More on....

This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.