Skip Ribbon Commands
Skip to main content

ಮೈಕ್ರೋಸಾಫ್ಟ್ ಔಟ್‌ಲುಕ್ 2003 ರಲ್ಲಿ ಕನ್ನಡ

ಮೈಕ್ರೋಸಾಫ್ಟ್‌ ಆಫೀಸ್ 2003 ತಂತ್ರಾಂಶಗುಚ್ಚದಲ್ಲಿ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್, ಔಟ್‌ಲುಕ್ ಇತ್ಯಾದಿಗಳಿವೆ. ವರ್ಡ್‌ನಲ್ಲಿ ಕನ್ನಡದ ಬೆರಳಚ್ಚು ಬಗ್ಗೆ ಇನ್ನೊಂದು ಲೇಖನದಲ್ಲಿ ವಿವರಿಸಲಾಗಿದೆ. ಕನ್ನಡದಲ್ಲಿ ಬೆರಳಚ್ಚು ಮಾಡುವ ಈ ವಿಧಾನವು ಆಫೀಸ್ ತಂತ್ರಾಂಶಗುಚ್ಚದಲ್ಲಿ ಅಡಕವಾಗಿರುವ ಇತರೆ ತಂತ್ರಾಂಶಗಳಿಗೂ ಅನ್ವಯವಾಗುತ್ತದೆ. ಅಂದರೆ ಔಟ್‌ಲುಕ್‌ನಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡಲೂ ಇವೇ ವಿಧಾನಗಳನ್ನು ಬಳಸಬಹುದು.

  ಔಟ್‌ಲುಕ್ ಎಂದರೆ ಏನು? ಅದನ್ನು ಯಾಕೆ ಬಳಸಲಾಗುತ್ತದೆ? ಔಟ್‌ಲುಕ್ ಮೂಲಭೂತವಾಗಿ ಇಮೈಲ್, ದಿನಚರಿ, ವಿಳಾಸಪುಸ್ತಕಗಳ ತಂತ್ರಾಂಶ. ಬಹುಪಾಲು ಜನರು ಇದನ್ನು ಇಮೈಲ್‌ಗಳಿಗೆ ಬಳಸುತ್ತಾರೆ. ಇತರೆ ಸೌಕರ್ಯಗಳನ್ನು ಕಡಿಮೆ ಬಳಸುತ್ತಾರೆ. ಔಟ್‌ಲುಕ್ ಕೂಡ ಕನ್ನಡವನ್ನು ಯುನಿಕೋಡ್ ವಿಧಾನದಲ್ಲಿ ಬಳಸುತ್ತದೆ. ಇದರಿಂದಾಗಿ ಕನ್ನಡದ ಅಕಾರಾದಿ ವಿಂಗಡಣೆಯೂ ಸಾಧ್ಯ. ಅಂದರೆ ಸ್ನೇಹಿತರ ವಿಳಾಸಗಳನ್ನು ಕನ್ನಡದಲ್ಲಿ ನಮೂದಿಸಿದ್ದರೆ ಅವುಗಳನ್ನು ಕನ್ನಡದ ಅಕರಾದಿ ವಿಂಗಡಣೆಯ ಸೂತ್ರದಂತೆ ವಿಂಗಡಿಸಿ ನೋಡಬಹುದು ಮತ್ತು ವೇಗವಾಗಿ ಮಾಹಿತಿಯನ್ನು ಹುಡುಕಿ ತೆಗೆಯಬಹುದು.
  ಔಟ್‌ಲುಕ್ ತಂತ್ರಾಂಶವನ್ನು ಮುಖ್ಯವಾಗಿ ಜನರು ಬಳಸುವುದು ಇಮೈಲ್ ಮಾಡಲು.  ವರ್ಡ್ ಬಳಸಿ ಕನ್ಕಡದಲ್ಲಿ ಬೆರಳಚ್ಚು ಮಾಡುವ ವಿಧಾನವನ್ನೇ ಬಳಸಿ ಔಟ್‌ಲುಕ್‌ನಲ್ಲೂ ಕನ್ನಡದಲ್ಲಿ ಬೆರಳಚ್ಚು ಮಾಡಿ ಇಮೈಲ್ ಕಳುಹಿಸಬಹುದು.
ಇಮೈಲ್ ವಿಳಾಸ ಮಾತ್ರ ಇಂಗ್ಲೀಷಿನಲ್ಲೇ ಇರಬೇಕು. ಮುಂದಕ್ಕೆ ಅದೂ ಕನ್ನಡದಲ್ಲೇ ಬರೆಯಬಹುದಾದ ಕಾಲವೂ ಬರಬಹುದು. ಇಮೈಲ್‌ನ ವಿಷಯವನ್ನೂ (subject) ಕನ್ನಡದಲ್ಲೇ ಬರೆಯಬಹುದು. ಇಮೈಲ್ ಓದುವವರು ಔಟ್‌ಲುಕ್ ಬಳಸುವವರಾದರೆ ಈ ಇಮೈಲನ್ನು ಯಾವುದೇ ತೊಂದರೆಯಿಲ್ಲದೆ ಓದಬಹುದು. ಅಂತರಜಾಲದ ಮೂಲಕ ಕೆಲಸ ಮಾಡುವ ಬಹುಪಾಲು ಇಮೈಲ್ ತಂತ್ರಾಂಶಗಳೂ (ಉದಾ –Hotmail, Gmail, Yahoo, …) ಯುನಿಕೋಡ್ ಅನ್ನು ಬೆಂಬಲಿಸುವುದುರಿಂದ ಕನ್ನಡ ಇಮೈಲ್ ಓದಬಹುದು. ಆದರೂ ಕೆಲವೊಮ್ಮೆ ಬ್ರೌಸರಿನಲ್ಲಿ ಒಂದು ಚಿಕ್ಕ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅದು View => Encoding => Unicode (UTF-8) ಎಂಬುದಾಗಿದೆ.

  ಔಟ್‌ಲುಕ್ ಬಳಸಿ ದಿನಚರಿ ಮತ್ತು ಅಪಾಯಿಂಟ್‌ಮೆಂಟ್‌ಗಳ ದಾಖಲಾತಿ ಮಾಡಬಹುದು. ಇಂತಹ ದಿನ ಇಂತಹ ವೇಳೆಗೆ ಇಂತಹವರೊಡನೆ ಭೇಟಿ ಇದೆ ಎಂಬುದನ್ನು ದಾಖಲಿಸುವುದೇ ಅಪಾಯಿಂಟ್‌ಮೆಂಟ್. ಈ ಅಪಾಯಿಂಟ್‌ಮೆಂಟ್‌ಗಳು ಕನ್ನಡದಲ್ಲೇ ಇರಬಹುದು. ಇಲ್ಲಿ ನೀಡಿರುವ ಒಂದು ಉದಾಹರಣೆಯಲ್ಲಿ ಕನ್ನಡದಲ್ಲೇ ಕಾರ್ಯಕ್ರಮ ವಿವರ ದಾಖಲಿಸಿರುವುದನ್ನು ಗಮನಿಸಬಹುದು.
ಔಟ್‌ಲುಕ್‌ನಲ್ಲಿರುವ ಇನ್ನೊಂದು ಬಹುಮುಖ್ಯ ಸೌಲಭ್ಯವೆಂದರೆ ವಿಳಾಸ ಪುಸ್ತಕ. ನಿಮ್ಮ ಸಂಬಂಧಿಕರ, ಸ್ನೇಹಿತರ, ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದವರ, ಹೀಗೆ ಬೇರೆ ಬೇರೆ ಕ್ಷೇತ್ರಕ್ಕೆ ಸಂಬಂಧಿಸಿ ನಿಮ್ಮ ಸಂಪರ್ಕದಲ್ಲಿರುವವ ವಿಳಾಸಗಳನ್ನು ಔಟ್‌ಲುಕ್‌ನಲ್ಲಿ ನಮೂದಿಸಬಹುದು. ವಿಳಾಸವೂ ಕನ್ನಡದಲ್ಲೇ ಇರಬಹುದು. ಅಷ್ಟು ಮಾತ್ರವಲ್ಲ ವಿಳಾಸಗಳಲ್ಲಿ ಹುಡುಕುವುದು, ವಿಳಾಸಗಳನ್ನು ಅಕಾರಾದಿಯಾಗಿ ವಿಂಗಡಿಸುವುದು – ಈ ಎಲ್ಲ ಕೆಲಸಗಳನ್ನೂ ಮಾಡಬಹುದು. ಕನ್ನಡ ಭಾಷೆಯಲ್ಲಿ ನಮೂದಿಸಿದ ವಿಳಾಸದ ಉದಾಹರಣೆಯೊಂದು ಇಲ್ಲಿದೆ.
ಈ ಉದಾಹರಣೆಯಲ್ಲಿ ಮೆನು ಕೂಡ ಕನ್ನದಲ್ಲೇ ಇರುವುದುನ್ನು ಗಮನಿಸಬಹುದು. ಈ ಸೌಲಭ್ಯ ಬೇಕಿದ್ದರೆ ಆಫೀಸ್ 2003ಕ್ಕೆ ಕನ್ನಡದ ಹೊದಿಕೆಯನ್ನು ಅಳವಡಿಸಿಕೊಳ್ಳಬೇಕು. ಅದರ ಬಗ್ಗೆ ವಿವರಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

Read More on....

This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.