Skip Ribbon Commands
Skip to main content
ಮೈಕ್ರೋಸಾಫ್ಟ್ ಎಕ್ಸೆಲ್ 2003 ರಲ್ಲಿ ಚಾರ್ಟ್‌ಗಳು
ಮೈಕ್ರೋಸಾಫ್ಟ್‌ ಕಂಪೆನಿಯ ಆಫೀಸ್ 2003 ತಂತ್ರಾಂಶಗುಚ್ಚದಲ್ಲಿ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್, ಔಟ್‌ಲುಕ್ ಇತ್ಯಾದಿಗಳಿವೆ. ಇದರಲ್ಲಿ ಸೇರಿಕೊಂಡಿರುವ ಎಕ್ಸೆಲ್ 2003ನ್ನು ಬಳಸಿ ಸ್ಪ್ರೆಡ್‌ಶೀಟ್‌ಗಳನ್ನು ಸಿದ್ಧಮಾಡಬಹದು. ಎಕ್ಸೆಲ್‌ನಲ್ಲಿ ಅಡಕವಾಗಿರುವ ಹಲವು ಸವಲತ್ತುಗಳಲ್ಲಿ ಚಾರ್ಟ್‌ಗಳನ್ನು ತಯಾರಿಸುವುದೂ ಒಂದು.

ಎಕ್ಸೆಲ್‌ನ ಚಾರ್ಟ್ ವಿಝಾರ್ಡನ್ನು ಬಳಸಿ ಸುಲಭವಾಗಿ ಚಾರ್ಟ್ ತಯಾರಿಸಬಹುದು. ಇದಕ್ಕಾಗಿ Insert ಮೆನುವಿನಲ್ಲಿರುವ Chart ಎಂಬುದನ್ನು ಕ್ಲಿಕ್ ಮಾಡಬೇಕು. ಈ ವಿಝಾರ್ಡನ್ನು ಬಳಸಿ ಹಲವು ವಿಧದ ಚಾರ್ಟುಗಳನ್ನು ತಯಾರಿಸಬಹುದು. ಚಾರ್ಟ್ ತಯಾರಿಸಲು ಬೇಕಾದ ಮಾಹಿತಿ ಸಾಮಾನ್ಯವಾಗಿ ಕಾಲಂಗಳಲ್ಲಿ ಇರುತ್ತದೆ. ಕಾಲಂಗಳನ್ನು ಆಯ್ಕೆ ಮಾಡಿ ಚಾರ್ಟ್ ವಿಝಾರ್ಡನ್ನು ಪ್ರಾರಂಭಿಸಬೇಕು. ವಿಝಾರ್ಡಿನ ಒಂದು ಉದಾಹರಣೆ ಇಲ್ಲಿದೆ.
ಹಲವು ವಿಧದ ಚಾರ್ಟ್‌ಗಳನ್ನು ತಯಾರಿಸುವ ಸವಲತ್ತನ್ನು ಈ ವಿಝಾರ್ಡ್ ನೀಡುತ್ತದೆ. ಅವುಗಳೆಂದರೆ ಕಾಲಂ, ಬಾರ್, ರೇಖೆ, ಪೈ, ಅಡ್ಡಾದಿಡ್ಡಿ, ಇತ್ಯಾದಿ. ಸಾಮಾನ್ಯವಾಗಿ ಜನರು ಬಳಸುವುದು ಕಾಲಂ ಚಾರ್ಟನ್ನು. ರೇಖಾ ವಿಧಾನವನ್ನೂ ಬಳಸುತ್ತಾರೆ. ವಿವಿಧ ವಿಭಾಗಗಳ ವ್ಯಾಪಾರ, ಜನಸಂಖ್ಯೆ, ಇತ್ಯಾದಿಗಳನ್ನು ಸೂಚಿಸಲು ಪೈ ವಿಧಾನದ ಚಾರ್ಟನ್ನು ಬಳಸುತ್ತಾರೆ. ಯಾವ ರೀತಿಯ ಚಾರ್ಟ್ ಬೇಕು ಎಂಬುದನ್ನು ಆಯ್ಕೆ ಮಾಡಿ ಕೆಳಗಡೆ ಕಾಣಸಿಗುವ Next ಬಟನನ್ನು ಒತ್ತಿದರೆ ಯಾವ ಕಾಲಂಗಳ ಯಾವ ಕೋಶಗಳನ್ನು ಚಾರ್ಟಿನಲ್ಲಿ ಬಳಸಬೇಕು ಎಂಬುದನ್ನು ಆಯ್ಕೆ ಮಾಡಬಹುದು.
ಹಾಗೆ ಆಯ್ಕೆ ಮಾಡಿದ ನಂತರ ಪುನ Next ಬಟನನ್ನು ಒತ್ತಿದರೆ ಕಾಣಸಿಗುವ ಸಂವಾದಚೌಕದಲ್ಲಿ ಚಾರ್ಟಿಗೆ ಮತ್ತು ಅಕ್ಷಗಳಿಗೆ ಶೀರ್ಷಿಕೆಗಳನ್ನು ನಮೂದಿಸಬಹುದು.
ಕೊನೆಯ ಸಂವಾದಚೌಕದಲ್ಲಿ ಕಾಣಸಿಗುವ Finish ಬಟನನ್ನು ಒತ್ತುವ ಮೂಲಕ ಚಾರ್ಟ್ ಸಿದ್ಧವಾಗುತ್ತದೆ. ಹಾಗೆ ತಯಾರಾದ ಚಾರ್ಟಿನ ಒಂದು ಚಿತ್ರ ಇಲ್ಲಿದೆ.
ಹೀಗೆ ತಯಾರಾದ ಚಾರ್ಟನ್ನು ಆಯ್ಕೆ ಮಾಡಿ ಅದನ್ನು ಹಿಗ್ಗಿಸಬಹುದು, ಕುಗ್ಗಿಸಬಹುದು ಅಥವಾ ಬೇರೆಯ ವಿಧದ ಚಾರ್ಟಾಗಿ ಅದನ್ನು ಬದಲಾಯಿಸಬಹುದು. ಉದಾಹರಣೆಗೆ ಕಾಲಂ ಚಾರ್ಟನ್ನು ಪೈ ಚಾರ್ಟಾಗಿ ಬದಲಾಯಿಸಬಹುದು. ಹಾಗೆ ಆಯ್ಕೆ ಮಾಡುವ ಸಂವಾದಚೌಕದಲ್ಲಿನ ಆಯ್ಕೆಗಳನ್ನು ಗಮನಿಸಿ. ಇಲ್ಲಿ ಶೇಕಡಾವಾರನ್ನು ಆಯ್ಕೆ ಮಾಡಲಾಗಿದೆ.
ಹಾಗೆ ಆಯ್ಕೆ ಮಾಡಿದರೆ ಪೈ ಚಾರ್ಟ್ ಯಾವ ರೀತಿ ತಯಾರಾಗುವುದು ಎಂಬದನ್ನು ಅದು ಚಿಕ್ಕದಾಗಿ ತೋರಿಸುತ್ತದೆ. ಅಲ್ಲೇ ಕಾಣಸಿಗುವ OK ಬಟನನ್ನು ಒತ್ತಿದರೆ ಪೈ ಚಾರ್ಟ್ ಸಿದ್ಧವಾಗುತ್ತದೆ. ಹಾಗೆ ಸಿದ್ಧವಾದ ಪೈ ಚಾರ್ಟಿನ ಉದಾಹರಣೆ ಇಲ್ಲಿದೆ.
ಇಲ್ಲಿ ವಿವರಿಸಿರುವ ಕಾಲಂ ಚಾರ್ಟ್ ಮತ್ತು ಪೈ ಚಾರ್ಟಲ್ಲದೆ ಇನ್ನೂ ಹಲವು ನಮೂನೆಯ ಚಾರ್ಟ್‌ಗಳನ್ನು ಎಕ್ಸೆಲ್ 2003ನ್ನು ಬಳಸಿ ತಯಾರಿಸಬಹುದು.

Read More on....

This site uses Unicode and Open Type fonts for Indic Languages. Powered by Microsoft SharePoint
©2017 Microsoft Corporation. All rights reserved.